ನಮ್ಮ ಮೈಯಲ್ಲಿ ಸನಾತನ ಧರ್ಮದ ರಕ್ತ ಹರಿಯುತ್ತಿದೆ;‌ ನಾವು ಸುಮ್ಮನೆ ಕೂರುವುದಿಲ್ಲ: ಬಸವರಾಜ ಬೊಮ್ಮಾಯಿ

ಹಾವೇರಿ, ಅಕ್ಟೋಬರ್‌ 07: ಸನಾತನ ಧರ್ಮವನ್ನು ಮಲೆರಿಯಾ ರೋಗಕ್ಕೆ ಹೋಲಿಕೆ ಮಾಡುವುದನ್ನು ಕೇಳಿ ನಾವೆಲ್ಲಾ ಸುಮ್ಮೆ ಕೂತಕೋಬೇಕಾ? ನಮ್ಮ ಮೈಯಲ್ಲಿ ಸನಾತನ ಹಿಂದೂ ಧರ್ಮದ ರಕ್ತ ಹರಿಯುತ್ತಿದೆ. ನಮ್ಮನ್ಮು ತಡವಿದರೆ ನಾವು ಸುಮ್ಮನೆ ಕೂರುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.‌

ಶನಿವಾರ ಹಿಂದೂ ಜಾಗೃತಿ ಕಾರ್ಯಕ್ರಮದಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಹಿಂದೂ ಗಣಪತಿ ತಡೆಯುವ ಪ್ರಯತ್ನ ಇಲ್ಲಿ ಆಯಿತು. ಅದಕ್ಕೆ ಗಣಪತಿ ಶಕ್ತಿ ಇಡೀ ಕನ್ನಡ ನಾಡಿಗೆ ಗೊತ್ತಾಯಿತು. ಗಣಪತಿ ಇಟ್ಟಿದ್ದೇ ಮಾರ್ಗ, ಯಾರೂ ಕೂಡಾ ಗಣಪತಿ ತಡೆಯುವ ಶಕ್ತಿ ಹೊಂದಿಲ್ಲ. ಇದು ಗಣಪತಿ ಭಕ್ತರ ಶಕ್ತಿ. ಗಣೇಶನ ಶಕ್ತಿ ತೋರಿಸಿದರೆ ಏನಾಗುತ್ತೆ ಎನ್ನುವುದು ಎಲ್ಲರಿಗೂ ಗೊತ್ತು ಎಂದರು.

Blood Of Sanatana Dharma Is Flowing In Our Body Says Basavaraj Bommai

ನಾವು ಶ್ರೇಷ್ಟ ಧರ್ಮಕ್ಕೆ ಸೇರಿದವರು, ಸನಾತನ ಧರ್ಮ ವಿಶ್ವದ ಮಾನವರ ಕಲ್ಯಾಣ ಧರ್ಮ‌. ಎಲ್ಲಾ ಧರ್ಮಿಯರು ಈ ದೇಶದಲ್ಲಿ ಇದ್ದಾರೆ. ರಾಷ್ಟ್ರಗಳಾದ ಪಾಕಿಸ್ತಾನಕ್ಕೆ ಹೋಗಿ, ಅಪಘಾನಿಸ್ತಾನಕ್ಕೆ ಹೋಗಿ ಅಲ್ಲಿ ಒಂದೇ ಒಂದು ಧರ್ಮ. ಅಲ್ಲಿ ಜೀವಂತ ಬದುಕಲು ಸಾಧ್ಯವಿಲ್ಲ. ನಾವು ಎಲ್ಲರನ್ನೂ ಒಪ್ಪಿಕೊಂಡು ಬಾಳುತ್ತಿದ್ದೇವೆ. ಇಂಥ ವಿಶಾಲ ಧರ್ಮಕ್ಕೆ ಡೆಂಗ್ಯು ಮಲೇರಿಯಾ ಅಂತಾರಲ್ವಾ ಇವರು. ಇದೇ ಮಾತು ಬೇರೆ ಧರ್ಮದ ಬಗ್ಗೆ ಹೇಳಲಿ. ಇಷ್ಟೊತ್ತಿಗೆ ಅವರ ಗತಿ ಏನಾಗ್ತಿತ್ತು? ಇದಕ್ಕೆಲ್ಲಾ ಒಂದೇ ಪರಿಹಾರ ನಾವೆಲ್ಲಾ ಒಂದಾಗಬೇಕು, ಜಾಗೃತಿ ಆಗಬೇಕು ಎಂದು ಹೇಳಿದರು.

ಸರ್ವೇ ಜನಾ ಸುಖಿನೋಭವಂತು ಎನ್ನುವ ಮಾತು ಎತ್ತಿ ಹಿಡಿಯಬೇಕು. ಕೆಲವರಿಗೆ ಭಾರತ ಶಕ್ತಿಶಾಲಿ ಆಗುವುದು ಬೇಕಾಗಿಲ್ಲಾ, ಅಭಿವೃದ್ಧಿ ಆಗುವುದು ಬೇಕಿಲ್ಲ. ನಮ್ಮ ಸರ್ಕಾರ ಇದ್ದಾಗ ಯಾವ ದುಷ್ಟ ಶಕ್ತಿಗೂ ತಲೆ ಎತ್ತಲು ಬಿಟ್ಟಿಲ್ಲ. ಕೆ.ಜೆ ಹಳ್ಳಿ ಡಿ.ಜಿ ಹಳ್ಳಿಯಲ್ಲಿ ತಪ್ಪು ಮಾಡಿದವರನ್ನು ಬಿಡಲಿಲ್ಲ. ಆದರೆ ಅಮಾಯಕರ ಮೇಲಿನ ಕೇಸು ರದ್ದು ಮಾಡಿ ಎಂದು ಪತ್ರ ಬರೆಯುತ್ತಾರೆ. ಧಾಳಿ ಕೋರರ ಮೇಲಿನ ಕೇಸು ತಗೆಯಿರಿ ಎಂದು ಪತ್ರ ಬರೆಯುತ್ತಾರೆ. ಇಂಥ ಶಕ್ತಿಗಳನ್ನು ನಾವು ಧಮನ ಮಾಡದೇ ಇದ್ದರೆ ಸರ್ವೆ ಜನಾ ಸುಖಿನೋ ಭವಂತೂ ಆಗುವುದಿಲ್ಲ ಎಂದರು.

ರಾಜ್ಯದಲ್ಲಿ ಅರಾಜಕತೆ ಇದೆ, ಎಲ್ಲಾ ಕಡೆ ಕೋಮ ಗಲಭೆ ಆಗುತ್ತಿದೆ. ಕಾಂಗ್ರೆಸ್ ಬಂದ ತಕ್ಷಣ ಬರಗಾಲ ಗ್ಯಾರಂಟಿ ಕಾಂಗ್ರೆಸ್ ಆರಿಸಿಬಂದ ದಿನ ಬೆಳಗಾವಿಯಲ್ಲಿ ಪಾಕಿಸ್ತಾನ ಧ್ವಜ ಹಾರಿದೆ. ಪಾಕಿಸ್ತಾನದ ಧ್ವಜ ಹಿಡಿದವರು ಸರ್ಕಾರದ ಮೊಮ್ಮಕ್ಕಳು ಎಂದರು.

ಶಿವಮೊಗ್ಗದಲ್ಲಿ ಪೋಲೀಸರ ಮೇಲೂ ಕಲ್ಲು ತೂರಿದ್ದಾರೆ. ಆದರೆ, ಗೃಹ ಸಚಿವರು ಅದು ಸಣ್ಣ ಘಟನೆ ಅನ್ನುತ್ತಾರೆ. ಅವರ ಪೊಲೀಸರೇ ಲಾಠಿ ಚಾರ್ಜ್ ಮಾಡಿದರೆ ಸಣ್ಣ ಘಟನೆ ಅನ್ನುತ್ತಾರೆ. ಯಾಕಂದರೆ ಅದನ್ನು ಸರ್ಕಾರದ ಮೊಮ್ಮಕ್ಕಳು ಮಾಡಿದ್ದಾರೆ. ರಾಗಿ ಗುಡ್ಡದಲ್ಲಿ ಗಣೇಶೋತ್ಸವ ನಡೆದಾಗ ಒಂದು ಸಣ್ಣ ಘಟನೆ ನಡೆಯಲಿಲ್ಲ. ಆದರೆ ಒಂದು ವಾರದ ಬಳಿಕ ಈದ್ ಮಿಲಾದ್ ಬಳಿಕ ಕಲ್ಲು ತೂರಾಟ ಆಯಿತು ಬಿಜೆಪಿಯವರೇ ಅಂಥ ವೇಶ ಹಾಕಿಕೊಂಡು ಈ ತರ ಮಾಡುತ್ತಾರೆ ಅಂತ ಮಂತ್ರಿ ಹೇಳಿದ್ದಾರೆ. ಆದರೆ, ನಮ್ಮ ಹುಡುಗರು ಇನ್ನೊಂದು ವೇಶ ಹಾಕಿಕೊಳ್ಳೋ ಹೇಡಿಗಳಲ್ಲ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+