ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಿಯಲ್‌ ಎಸ್ಟೇಟ್‌ ಕ್ಷೇತ್ರದ ಮೇಲೆ ದಾಳಿಯಿಂದ 1,300 ಕೋಟಿ ರೂಪಾಯಿ ಕಪ್ಪು ಹಣ ಪತ್ತೆ

|
Google Oneindia Kannada News

ಬೆಂಗಳೂರು, ನವೆಂಬರ್‌ 18: ಆದಾಯ ತೆರಿಗೆ ಇಲಾಖೆಯು ಕರ್ನಾಟಕ ಮೂಲದ ಕೆಲವು ರಿಯಲ್ ಎಸ್ಟೇಟ್ ಡೆವಲಪರ್‌ಗಳೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು ಮಾಡಿಕೊಂಡಿರುವ ಕೆಲವು ವ್ಯಕ್ತಿಗಳ ವಿರುದ್ಧ ಇತ್ತೀಚೆಗೆ ಶೋಧ ನಡೆಸಿದ ನಂತರ ರೂ 1,300 ಕೋಟಿಗೂ ಹೆಚ್ಚು ಮೌಲ್ಯದ ಲೆಕ್ಕವಿಲ್ಲದ ಕಪ್ಪು ಹಣವನ್ನು ಪತ್ತೆ ಮಾಡಿದೆ ಎಂದು ಸಿಬಿಡಿಟಿ ಗುರುವಾರ ತಿಳಿಸಿದೆ.

ಅಕ್ಟೋಬರ್ 20 ಮತ್ತು ನವೆಂಬರ್ 2 ರಂದು ಬೆಂಗಳೂರು, ಮುಂಬೈ ಮತ್ತು ಗೋವಾದಲ್ಲಿ ಸುಮಾರು 50 ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಲಾಗಿತ್ತು. ಅಕ್ಟೋಬರ್‌ 20ರಿಂದ ಇದುವರೆಗೆ ನಡೆದ ಶೋಧ ಕಾರ್ಯಗಳಲ್ಲಿ ಬರೋಬ್ಬರಿ 1,300 ಕೋಟಿ ರೂ.ಗೂ ಹೆಚ್ಚು ಲೆಕ್ಕವಿಲ್ಲದ ಆದಾಯವನ್ನು ಪತ್ತೆಹಚ್ಚಲು ಸಾಧ್ಯವಾಗಿದೆ. ಇದಲ್ಲದೆ 24 ಕೋಟಿಗೂ ಅಧಿಕ ಮೌಲ್ಯದ ನಗದು ಮತ್ತು ಚಿನ್ನಾಭರಣಗಳ ಸ್ವರೂಪದ ಅಘೋಷಿತ ಆಸ್ತಿಗಳನ್ನೂ ವಶಪಡಿಸಿಕೊಳ್ಳಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ತಿಳಿಸಿದೆ.

ಬೆಂಗಳೂರಿನಲ್ಲಿ ಆಸ್ತಿ ಕೊಳ್ಳಬೇಕೆ?; ಬೆಲೆ ಏರಿಕೆ ಬಗ್ಗೆ ತಿಳಿಯಿರಿಬೆಂಗಳೂರಿನಲ್ಲಿ ಆಸ್ತಿ ಕೊಳ್ಳಬೇಕೆ?; ಬೆಲೆ ಏರಿಕೆ ಬಗ್ಗೆ ತಿಳಿಯಿರಿ

ನೇರ ತೆರಿಗೆಗಳ ಕೇಂದ್ರೀಯ ಮಂಡಳಿಯು ತೆರಿಗೆ ಇಲಾಖೆಗೆ ನೀತಿ ನಿಯಮಗಳನ್ನು ರೂಪಿಸುತ್ತದೆ. ಸಿಬಿಡಿಟಿಯು ಮಾರಾಟ ಒಪ್ಪಂದಗಳು, ಅಭಿವೃದ್ಧಿ ಒಪ್ಪಂದಗಳು ಮತ್ತು ಆಕ್ಯುಪೆನ್ಸಿ ಪ್ರಮಾಣಪತ್ರಗಳಿಗೆ (ಒಸಿ) ಸಂಬಂಧಿಸಿದ ಸಾಕ್ಷ್ಯಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿಕೆಯಲ್ಲಿ ತಿಳಿಸಿದೆ. ಅಧಿಕಾರಿಗಳಿಂದ ಆಕ್ಯುಪೆನ್ಸಿ ಪ್ರಮಾಣಪತ್ರಗಳನ್ನು ನೀಡಿದ ನಂತರವೂ ಭೂಮಾಲೀಕರು ಜೆಡಿಎಗಳ (ಜಂಟಿ ಅಭಿವೃದ್ಧಿ ಒಪ್ಪಂದಗಳು) ಮೂಲಕ ವಿವಿಧ ಡೆವಲಪರ್‌ಗಳಿಗೆ ಅಭಿವೃದ್ಧಿಗೆ ನೀಡಿದ ಭೂಮಿಯನ್ನು ವರ್ಗಾಯಿಸಿದಾಗ ಬಂಡವಾಳ ಲಾಭದಿಂದ ಬಂದ ಆದಾಯವನ್ನು ಬಹಿರಂಗಪಡಿಸಿಲ್ಲ ಎಂದು ಸಿಬಿಡಿಟಿಯ ಹಿಡಿದಿರುವ ಈ ಪುರಾವೆಗಳು ತೋರಿಸಿವೆ.

Black money of Rs 1,300 crore found in raids on real estate sector : CBDT

ಕೆಲವು ಭೂಮಾಲೀಕರು ತಮ್ಮ ಆದಾಯ ತೆರಿಗೆ ರಿಟರ್ನ್‌ಗಳನ್ನು ಹಲವಾರು ವರ್ಷಗಳಿಂದ ಸಲ್ಲಿಸಿಯೇ ಇಲ್ಲ. ಈ ಸಮಯದಲ್ಲಿ ಬಂಡವಾಳ ಲಾಭದ ಆದಾಯವು ರಿಯಲ್‌ ಎಸ್ಟೇಟ್‌ ಡೆವಲಪರ್ಸ್‌ಗಳಿಗೆ ಸೇರಿದೆ ಎಂದು ನೇರ ತೆರಿಗೆಗಳ ಕೇಂದ್ರೀಯ ಮಂಡಳಿ ಹೇಳಿದೆ. ತನಿಖೆಯನ್ನು ಎದುರಿಸಿದಾಗ ಸಂಬಂಧಪಟ್ಟವರು ತಮ್ಮ ಲೋಪಗಳನ್ನು ಒಪ್ಪಿಕೊಂಡರು. ಅಲ್ಲದೆ ಆಯಾ ಪ್ರಕರಣಗಳಲ್ಲಿ ಪತ್ತೆಯಾದ ಬಂಡವಾಳ ಲಾಭಗಳಿಂದ ಆದಾಯವನ್ನು ಬಹಿರಂಗಪಡಿಸಲು ಮತ್ತು ಅದಕ್ಕೆ ಸರಿಯಾದ ತೆರಿಗೆಯನ್ನು ಪಾವತಿಸಲು ಒಪ್ಪಿಕೊಂಡರು ಎಂದು ಹೇಳಿಕೆ ತಿಳಿಸಿದೆ.

ಬೆಂಗಳೂರಿನ ಹಲವೆಡೆ ಏಕಾಏಕಿ ಮನೆ ಬಾಡಿಗೆ ಹೆಚ್ಚಿಸಿದ ಮಾಲೀಕರು!ಬೆಂಗಳೂರಿನ ಹಲವೆಡೆ ಏಕಾಏಕಿ ಮನೆ ಬಾಡಿಗೆ ಹೆಚ್ಚಿಸಿದ ಮಾಲೀಕರು!

English summary
The Income Tax Department has unearthed unaccounted black money worth over Rs 1,300 crore after conducting a recent search against certain individuals who had entered into joint development agreements with some Karnataka-based real estate developers, the CBDT said on Thursday. ಆದಾಯ ತೆರಿಗೆ ಇಲಾಖೆಯು ಕರ್ನಾಟಕ ಮೂಲದ ಕೆಲವು ರಿಯಲ್ ಎಸ್ಟೇಟ್ ಡೆವಲಪರ್‌ಗಳೊಂದಿಗೆ ಜಂಟಿ ಅಭಿವೃದ್ಧಿ ಒಪ್ಪಂದಗಳನ್ನು ಮಾಡಿಕೊಂಡಿರುವ ಕೆಲವು ವ್ಯಕ್ತಿಗಳ ವಿರುದ್ಧ ಇತ್ತೀಚೆಗೆ ಶೋಧ ನಡೆಸಿದ ನಂತರ ರೂ 1,300 ಕೋಟಿಗೂ ಹೆಚ್ಚು ಮೌಲ್ಯದ ಲೆಕ್ಕವಿಲ್ಲದ ಕಪ್ಪು ಹಣವನ್ನು ಪತ್ತೆ ಮಾಡಿದೆ ಎಂದು ಸಿಬಿಡಿಟಿ ಗುರುವಾರ ತಿಳಿಸಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X