ನಮ್ಮನ್ನು ಇನ್ನೂ ಪರೀಕ್ಷಿಸಬೇಡಿ: ಬಿ.ಎಸ್.ಯಡಿಯೂರಪ್ಪ
ಶ್ರೀರಂಗಪಟ್ಟಣ, ಜನವರಿ 20: 'ರೈತಪರ ಹೋರಾಟಗಾರ ಕೆ.ಎಸ್.ನಂಜುಂಡೇಗೌಡ ಅವರನ್ನು ಮತ್ತೆ ಪರೀಕ್ಷೆ ಮಾಡಬೇಡಿ. ಈ ಬಾರಿ ರಾಷ್ಟ್ರೀಯ ಪಕ್ಷವೊಂದರಿಂದ ಅವರು ಸ್ಪರ್ಧಿಸುತ್ತಿದ್ದಾರೆ. ಅವರನ್ನು ಗೆಲ್ಲಿಸುವ ಹೊಣೆ ನಿಮ್ಮದು' ಎನ್ನುತ್ತಲೇ ಮಾತು ಆರಂಬಿಸಿದರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ.
ಜ.20 ರಂದು ಮಂಡ್ಯದ ಮೇಲುಕೋಟೆ(ಪಾಂಡವಪುರ), ಶ್ರೀರಂಗಪಟ್ಟಣಗಳಲ್ಲಿ ಪರಿವರ್ತನಾ ಯಾತ್ರೆ ನಡೆಸಿದ ಯಡಿಯೂರಪ್ಪ ತಮ್ಮ ಹುಟ್ಟೂರಿನ ಜನರ ಬಳಿ ಆತ್ಮೀಯವಾಗಿ ಮಾತನಾಡಿದರು.
ಸತತ ಆರು ಬಾರಿ ಶ್ರೀರಂಗಪಟ್ಟಣ ಕ್ಷೇತ್ರದಿಂದ ಸೋಲನುಭವಿಸಿದ್ದ ನಂಜುಂಡೇಗೌಡರು ಕಳೆದ ವರ್ಷ ಬಿಜೆಪಿಗೆ ಸೇರಿದ್ದಾರೆ. ಈ ಬಾರಿ ಅವರೇ ಶ್ರೀರಂಗಪಟ್ಟಣದ ಬಿಜೆಪಿ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿತ್ತು. ಅವರನ್ನು ಗೆಲ್ಲಿಸಿ ಎಂದು ಸ್ವತಃ ಯಡಿಯೂರಪ್ಪನವರೇ ಹೇಳಿರುವುದರಿಂದ ಈ ಕ್ಷೇತ್ರಕ್ಕೆ ಅವರೇ ಅಭ್ಯರ್ಥಿ ಎಂಬುದು ಖಚಿತವಾದಂತಾಗಿದೆ.

'ಇಡೀ ಜಗತ್ತು ಕಂಡ ಮಹಾನ್ ನಾಯಕರಲ್ಲಿ ಪ್ರಧಾನಿ ಮೋದಿಯವರು 3 ನೇ ಸ್ಥಾನದಲ್ಲಿದ್ದಾರೆ. ಹೇಗೆ ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ದಕ್ಷ ಆಡಳಿತ ನೀಡುತ್ತದೆಯೋ ಅದೇ ರೀತಿಯ ಆಡಳಿತವನ್ನು ನಾವು ಕರ್ನಾಟಕದಲ್ಲೂ ನೀಡುತ್ತೇವೆ.' ಎಂದು ಇದೇ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.
ಸಮಾವೇಶದಲ್ಲಿ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಶಾಸಕ ಸಿ.ಟಿ. ರವಿ, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ನಾಯಕಿ ತೇಜಸ್ವಿನಿ ಗೌಡ, ಚನ್ನಪಟ್ಟಣ ಶಾಸಕ ಯೋಗೀಶ್ವರ್ ಮುಂತಾದವರು ಉಪಸ್ಥಿತರಿದ್ದರು.

ನವೆಂಬರ್ 2, 2017 ರಿಂದ ಆರಂಭವಾದ ಪರಿವರ್ತನಾ ಯಾತ್ರೆ ಇದೀಗ ಶ್ರೀರಂಗಪಟ್ಟಣದಲ್ಲಿದ್ದು, 215 ನೇ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಸಭೆ ನಡೆಸಿದಂತಾಗಿದೆ.












Click it and Unblock the Notifications