Maharashtra Election 2024 Results:"ಕಾಂಗ್ರೆಸ್ ಸೋಲಿಗೆ ಕಾರಣ ಬಿಜೆಪಿಯ ಆ ಕುತಂತ್ರವೇ ಕಾರಣ!"
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಈ ಬಾರಿ ಹೀನಾಯವಾಗಿ ಸೋತಿದೆ. ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಹೀನಾಯವಾಗಿ ಸೋತಿದೆ. ಹೀಗಾಗಿ, ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ತಮ್ಮ ಸೋಲುಗಳಿಗೆ ಸಬೂಬು ಹಾಗೂ ಗೆಲುವುಗಳಿಗೆ ಪ್ರಶಂಸೆಯ ಮಾತನಾಡುತ್ತಿದ್ದಾರೆ. ಎಲ್ಲಾ ಚುನಾವಣೆಗಳ ಫಲಿತಾಂಶವು ನವೆಂಬರ್ 23ಕ್ಕೆ ಪ್ರಕಟವಾಗಿದ್ದು, ನಾಯಕರು ಚುನಾವಣೆ ಫಲಿತಾಂಶದ ಬಗ್ಗೆ ಹೇಳಿಕೆ ಕೊಡುತ್ತಿದ್ದಾರೆ. ಇದೀಗ ಚುನಾವಣೆ ಫಲಿತಾಂಶಕ್ಕೆ ಸಂಬಂಧಿಸಿದಂತೆ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಹಾಗೂ ಗೃಹ ಸಚಿವ ಜಿ. ಪರಮೇಶ್ವರ್ ನಡುವೆ ಟ್ವೀಟ್‌ವಾರ್ ನಡೆದಿದೆ.
ಮಹಾರಾಷ್ಟ್ರ ಚುನಾವಣಾ ಫಲಿತಾಂಶ ವಿಚಾರದ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಅವರು ಮಾತನಾಡಿದ್ದರು. ಮಹಾರಾಷ್ಟ್ರದಲ್ಲಿ ನಾವು ಮಹಾ ವಿಕಾಸ್ ಅಘಾಡಿ ಅಧಿಕಾರಕ್ಕೆ ಬರಲಿದೆ ಎಂದು ನಿರೀಕ್ಷೆ ಮಾಡಿದ್ದೆವು. ಆದರೆ, ನಮ್ಮ ಲೆಕ್ಕಾಚಾರಗಳು ಉಲ್ಟಾ ಆಗಿದೆ.

ನಾವು ಅಶೊಕ್ ಗೇಹ್ಲೋಟ್ ಸೇರಿ ಹಲವರು ಚರ್ಚೆ ಮಾಡಿದ್ದೆವು. ಬಹಳಷ್ಟು ಕಡೆ ಇವಿಎಂ ಮೊನುಪುಲೇಟ್ (ತಿರುಚಿದ್ದಾರೆ) ಮಾಡಿದ್ದಾರೆ ಅಂತ ಚರ್ಚೆ ಅಯ್ತು ಎಂದಿದ್ದಾರೆ. ಅಲ್ಲದೇ ಜಾರ್ಖಂಡ್‌ನಲ್ಲಿ ಯಾಕೆ ಮಾಡಿಲಿಲ್ಲ ಅಂದರೆ, ಕೆಲವು ಕಡೆ ಬಿಟ್ ಬಿಡ್ತಾರೆ. ರಾಜ್ಯದಲ್ಲಿ ಕೆಲವು ಕಡೆ ಗೆಲ್ತಿವಿ ಅಂತ ಕಡೆ ಬಿಡ್ತಾರೆ ಎಂದು ಹೇಳಿದ್ದಾರೆ.
ಅಲ್ಲದೇ ಮಹಾರಾಷ್ಟ್ರದಲ್ಲಿ ಲಡ್ಕಿ ಬಹಿನ್ ಎನ್ನುವ ಯೋಜನೆ ಸಹ ಸಾಕಷ್ಟು ಇಂಪ್ಯಾಕ್ಟ್ ಮಾಡಿದೆ. ಮಹಾಯುತಿ ಸಮ್ಮಿಶ್ರ ಸರ್ಕಾರ ಆರು ತಿಂಗಳು ಮೊದಲು ಈ ಯೋಜನೆಯನ್ನು ಪರಿಚಯಿಸಿದ್ದರು. ಇದೆಲ್ಲವೂ ಅವರ ಕೈ ಹಿಡಿದಿದೆ.
ಕೆಲವು ಕಡೆಕೊನೆಗೆ ಟಿಕೆಟ್ ಘೋಷಣೆ ಮಾಡಿದ್ದೆವು. ಇದು ಸಹ ಪಕ್ಷದಲ್ಲಿ ಗೊಂದಲಕ್ಕೆ ಕಾರಣವಾಯ್ತು. ಶರದ್ ಪವಾರ್ ಹಾಗೂ ಉದ್ಧವ್ ಠಾಕ್ರೆ ಬಣಗಳ ನಡುವೆ ಸರಿಯಾಗಿ ಹೊಂದಾಣಿಕೆ ಆಗಿಲ್ಲ.

ಅಲ್ಲದೇ ವಿದರ್ಭದಲ್ಲಿ ಹೆಚ್ಚು ಸೀಟ್ ಬರಲಿಲ್ಲ. ಇನ್ನು ಎಲ್ಲಿಯವರೆಗೆ ಇವಿಎಂ ಇರುತ್ತೋ ಅಲ್ಲಿಯವರೆಗೆ ಕಾಂಗ್ರೆಸ್ ಬರೋದು ಕಷ್ಟವಾಗಲಿದೆ. ಅಲ್ಲಿಯವರೆಗೆ ಬಿಜೆಪಿನೇ ಗೆಲ್ಲುತ್ತಿರುತ್ತೆ. ಮಹಾರಾಷ್ಟ್ರದಲ್ಲೂ ಅದೇ ರೀತಿ ಆಗಿದೆ. ಒಂದು ರಾಜ್ಯವನ್ನು ಬಿಟ್ಟು ಬಿಡ್ತಾರೆ. ನಮ್ಮ ರಾಜ್ಯದಲ್ಲಿ ಯಡಿಯೂರಪ್ಪ ಬಳಿಕ ದೊಡ್ಡ ನಾಯಕತ್ವ ಇರಲಿಲ್ಲ.ಅದಕ್ಕೆ ಬಿಟ್ಟರು ಎಂದು ಹೇಳಿದ್ದಾರೆ.
ಇವಿಎಂ ಹ್ಯಾಕ್ ಮಾಡುವುದರಲ್ಲಿ ಬಿಜೆಪಿಗರು ನಿಪುಣರು. ಜಾರ್ಖಂಡನಲ್ಲಿ ಜೆಎಂಎಂ ಬರುತ್ತೆ ಅಂತ ಬಿಟ್ಟಿದ್ದಾರೆ. ಕಾಂಗ್ರೆಸ್ ಬರುತ್ತೆ ಎಂದಿದ್ದರೆ, ಅಲ್ಲೂ ಅದೇ ಕೆಲಸ ಮಾಡ್ತಿದ್ದರು ಎಂದು ಜಿ. ಪರಮೇಶ್ವರ್ ಹೇಳಿದ್ದರು. ಅದಕ್ಕೆ ಆರ್ ಅಶೋಕ್ ಅವರು ಇದೀಗ ತಿರುಗೇಟು ಕೊಟ್ಟಿದ್ದಾರೆ.
ಸೋತರೆ ಇವಿಎಂ ದೋಷ, ಗೆದ್ದರೆ ಅಹಂ ಎನ್ನುವ ರೋಶವೇಷ ಎಂದು ಆರ್. ಅಶೋಕ್ ಅವರು ಲೇವಡಿ ಮಾಡಿದ್ದಾರೆ. ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಜನತೆ ನೀಡಿದ ಜನಾದೇಶವನ್ನು ಕಾಂಗ್ರೆಸ್ ಒಪ್ಪಿಕೊಂಡಿಲ್ಲ. ಇವಿಎಂ ಮತ ಯಂತ್ರಗಳನ್ನು ದೂಷಣೆ ಮಾಡುತ್ತಿದೆ. ಆದರೆ, ಇಲ್ಲಿ ಕರ್ನಾಟಕದ ಮೂರು ಉಪಚುನಾವಣೆಗಳ ಗೆಲುವು 2028ಕ್ಕೆ ದಿಕ್ಸೂಚಿ ಎಂದು ಹೇಳಿಕೊಳ್ಳುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಸೋತರೆ ಇವಿಎಂ ದೋಷ, ಗೆದ್ದರೆ ನಮ್ಮಿಂದಲೇ ಎನ್ನುವ ರೋಷವೇಶ. ಇದು ಕಾಂಗ್ರೆಸ್ ಪಕ್ಷದ ಲಜ್ಜೆಗೆಟ್ಟ ಎಡಬಿಡಂಗಿತನ ಎಂದು ಹೇಳಿದ್ದಾರೆ.
ಅಲ್ಲದೇ ದೇಶದೆಲ್ಲೆಡೆ ಜನಮನ್ನಣೆ ಕಳೆದುಕೊಂಡು ಅಡ್ರೆಸ್ ಇಲ್ಲದಂತಾಗಿರುವ ಕಾಂಗ್ರೆಸ್ ಪಕ್ಷವು ಮುಳುಗುತ್ತಿರುವ ಹಡಗು. ಈ ಮುಳುಗುತ್ತಿರುವ ದೋಣಿ ಕರ್ನಾಟಕದಲ್ಲೂ ಕಡೇ ದಿನಗಳನ್ನು ಎಣಿಸುತ್ತಿದೆ. ಶೀಘ್ರದಲ್ಲೇ ಇಲ್ಲೂ ಪತನವಾಗಲಿದೆ ಎಂದಿದ್ದಾರೆ.












Click it and Unblock the Notifications