ಆಂತರಿಕ ಕಚ್ಚಾಟದಲ್ಲೇ ಐದು ವರ್ಷ ಕಳೆದಿತ್ತು ಬಿಜೆಪಿ: ರಾಮಲಿಂಗಾರೆಡ್ಡಿ

Recommended Video

      Ramalinga Reddy Interview : ರಾಜ್ಯ ಗೃಹ ಸಚಿವರು, ಕಾಂಗ್ರೆಸ್ ಅಭ್ಯರ್ಥಿ | Oneindia Kannada

      ಬೆಂಗಳೂರು, ಮೇ 09: ಬಿಜೆಪಿಗೆ ದೊರೆತ ಐದು ವರ್ಷದ ಅಧಿಕಾರಾವಧಿಯಲ್ಲಿ ಮುಖ್ಯಮಂತ್ರಿಗಳನ್ನು ಬದಲಾವಣೆ ಮಾಡುವುದು, ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಇದರಲ್ಲೇ ಕಳೆದಿದ್ದಾರೆ. ಈಗ ಯಾವ ಮುಖ ಹೊತ್ತು ಮತಯಾಚಿಸುತ್ತಾರೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನಿಸಿದ್ದಾರೆ.

      ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಕುರಿತು ಒನ್‌ಇಂಡಿಯಾಗೆ ವಿಶೇಷ ಸಂದರ್ಶದಲ್ಲಿ ಹಲವಾರು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಬಿಜೆಪಿಗೆ 2008ರಿಂದ 2013ರವರೆಗೂ ಅಧಿಕಾರ ಸಿಕ್ಕಿತ್ತು ಆದರೆ ಏನು ಅಭಿವೃದ್ಧಿ ಮಾಡಿದ್ದಾರೆ? ಯಾವುದೂ ಆಶ್ವಾಸನೆ ಈಡೇರಿಸದೆ ಈಗ ಮತಯಾಚನೆ ಮಾಡಲು ಯಾವಮುಖ ಹೊತ್ತು ಬರುತ್ತಾರೆ ಹಾಗಾಗಿ ಮೋದಿ ಮುಖ ಇಟ್ಟುಕೊಂಡು ಬಿಜೆಪಿ ಪ್ರಚಾರ ಮಾಡುತ್ತಿದೆ ಎಂದರು.

      ಮೋದಿ ಮುಖ ಕೂಡ ಈಗ ಫೇಕ್ ಆಗಿದೆ. ಅವರು 2014ರಲ್ಲಿ ನಡೆದ ಚುನಾವಣೆಯಲ್ಲಿ ಸಾಕಷ್ಟು ಭರವಸೆಗಳನ್ನು ಕೊಟ್ಟಿದ್ದರು ಆದರೆ ಯಾವುದನ್ನೂ ಈಡೇರಿಸಿಲ್ಲ, ಬದಲಾಗಿ ಯುಪಿಎ ಸರ್ಕಾರದ ಯೋಜನೆಗಳ ಹೆಸರುಗಳನ್ನೇ ಬದಲಾಯಿಸಿ ತಮ್ಮ ಯೋಜನೆಯೆಂದು ಬೀಗುತ್ತಿದ್ದಾರೆ. ನಿರ್ಮಲ ಭಾರತ ಎಂದಿರುವದನ್ನು ಸ್ವಚ್ಛ ಭಾರತ ಎಂದು ಮಾಡಿದ್ದಾರೆ. ಪ್ರತಿ ಕುಟುಂಬಕ್ಕೆ 15 ಲಕ್ಷ ಹಾಕುತ್ತೇವೆ ಎಂದರು ಅದೂ ಯಶಸ್ವಿಯಾಗಿಲ್ಲ. ಕೋಟಿ ಉದ್ಯೋಗ ಸೃಷ್ಟಿಸುತ್ತೇವೆ ಎಂದರು ಅದೂ ಸಾಧ್ಯವಾಗಿಲ್ಲ ಎಂದರು.

      BJP wasted time in nepotism when it in power

      ಬೆಂಗಳೂರನ್ನು ಬಿಜೆಪಿಯಿಂದ ರಕ್ಷಣೆ ಮಾಡಿದ್ದೇವೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಬಿಜೆಪಿ ಅವಧಿಯಲ್ಲಿ ಆದ ಹಗರಣಗಳ ಬಗ್ಗೆ ದಾಖಲೆ ಬಿಡುಗಡೆ ಮಾಡುತ್ತೇವೆ, ದಿನೇಶ್ ಗುಂಡೂರಾವ್ ದಾಖಲೆ ಸಂಗ್ರಹಿಸುತ್ತಿದ್ದಾರೆ. ಬಿಜೆಪಿ ಅವರಿಂದ ಬೆಂಗಳೂರು ರಕ್ಷಿಸಬೇಕಿದೆ.ನಾವು ಕೂಡ 28 ಕ್ಷೇತ್ರಗಳಲ್ಲಿ ಜನರ ಗಮನಕ್ಕೆ ತರುತ್ತೇವೆ.

      ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಾರೆ .7,759 ಕಾಂಗ್ರೆಸ್ ಅವಧಿಯಲ್ಲಿ ಕೊಲೆ ನಡೆದಿದೆ.8,889 ಬಿಜೆಪಿ ಅವಧಿಯಲ್ಲಿ ಕೊಲೆ ನಡೆದಿದೆ ಎನ್ನುವುದು ಎಲ್ಲರಿಗೂ ತಿಳಿದಿದೆ ಎಂದರು. ಬಿಜೆಪಿ ಪಕ್ಷದವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು ಎಂದು ಅವರು ಹೇಳಿದರು. ಇನ್ನು ಸಾಕಷ್ಟು ಮಾಹಿತಿಗಳನ್ನ ರಾಮಲಿಂಗಾ ರೆಡ್ಡಿಯವರು ತಮ್ಮ ಸಂದರ್ಶನದಲ್ಲಿ ತಿಳಿಸಿದ್ದಾರೆ.

      ಚುನಾವಣೆಗೆ ಮೂರು ತಿಂಗಳಿರುವಾಗಲೇ ಸಾಕಷ್ಟು ಸಿದ್ಧತೆ ನಡೆಸಿದ್ದವು. 2013ರಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಸಿಸಿದ್ದೇವೆ, ಈಗಾಗಲೇ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ, ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಚಾರ ಮಾಡಿ ತೆರಳಿದ್ದಾರೆ.

      ಮೋದಿಯವರಿಗೆ ಬೆಲೆ ಏರಿಕೆ ಬಗ್ಗೆ ಕಾಳಜಿ ಇಲ್ಲ, ತಾವು ಪ್ರಧಾನಿಯಾದ ಮೇಲೆ ಕಚ್ಛಾ ತೈಲ ಇನ್ನಿತರೆ ವಸ್ತುಗಳ ಬೆಲೆಯನ್ನು ಕಡಿಮೆ ಮಾಡುತ್ತೇವೆ ಎಂದರು ಆದರೆ ದಿನದಿಂದ ದಿನಕ್ಕೆ ಬೆಲೆ ಏರುತ್ತಲೇ ಇದೆ. ಸುಳ್ಳು ಹೇಳುವುದುರಲ್ಲಿ ಮೋದಿ, ಅಮಿತ್‌ ಶಾ ನಿಸ್ಸೀಮರು ರಾಜ್ಯದಲ್ಲಿ ಗೋಹತ್ಯೆ ನಿಷೇಧಿಸುತ್ತೇವೆ ಎಂದು ಬಿಜೆಪಿ ಹೇಳುತ್ತೆ ಆದರೆ ಪ್ರತಿ ವರ್ಷ 26 ಸಾವಿರ ಕೋಟಿ ಗೋ ಮಾಂಶ ವಿದೇಶಕ್ಕೆ ರಫ್ತಾಗುತ್ತಿದೆ ಅದನ್ನು ಮೊದಲು ನಿಲ್ಲಿಸಲಿ, ಎಲ್ಲಾ ಪ್ರಾಣಿಗಳ ಹತ್ಯೆ ನಿಷೇಧ ಮಾಡುತ್ತೇವೆ ಎಂದು ಹೇಳಿದರೆ ಅದಕ್ಕೆ ನನ್ನ ಬೆಂಬಲವಿದೆ ಎಂದು ಹೇಳಿದರು.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+