‘ಕಾಂಗ್ರೆಸ್ ಪಕ್ಷದಲ್ಲಿ ಬಡ ಕಾರ್ಯಕರ್ತರಿಗೆ ಅವಕಾಶಗಳು ಸಿಗುವುದಿಲ್ಲ ..’
ಕರ್ನಾಟಕ ರಾಜಕೀಯ ಅಖಾಡದಲ್ಲಿ ಈಗ 'ಕಲೆಕ್ಷನ್' ಕಾಳಗ ಬಲು ಜೋರಾಗಿದೆ. ಬಿಜೆಪಿ & ಕಾಂಗ್ರೆಸ್ ನಾಯಕರು ಈ ವಿಚಾರದಲ್ಲಿ ಥೇಟ್ WWE ರೇಂಜ್ ಫೈಟ್ ಶುರುಮಾಡಿದ್ದಾರೆ. ಅದ್ರಲ್ಲೂ ಪಂಚರಾಜ್ಯ ಚುನಾವಣೆಯಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರದಿಂದ ಕಾಂಗ್ರೆಸ್ ನಾಯಕರಿಗೆ ಹಣ ಹೋಗಿದೆ ಅಂತಾ ಆರೋಪ ಮಾಡುತ್ತಿದ್ದ ಬಿಜೆಪಿ ಇದೀಗ, ಬೇರೆಯದ್ದೇ ಆರೋಪದ ಬಾಂಬ್ ಹಾಕಿದೆ!
ಕರ್ನಾಟಕ ಬಿಜೆಪಿಗೆ ಹೊಸ ಅಧ್ಯಕ್ಷರ ಆಯ್ಕೆ ಹಾಗೂ ವಿರೋಧ ಪಕ್ಷದ ನಾಯಕನ ಆಯ್ಕೆ ನಂತರ ಹೊಸ ಹುಮ್ಮಸ್ಸು ಬಂದಿದೆ. ಹೀಗಾಗಿಯೇ ಕಾಂಗ್ರೆಸ್ ಸರ್ಕಾರ ವಿರುದ್ಧ ನಿರಂತರ ವಾಗ್ದಾಳಿ ನಡೆಸುತ್ತಿದೆ. ಕಾಂಗ್ರೆಸ್ ಸರ್ಕಾರ ಕರ್ನಾಟಕದಲ್ಲಿ ಭರ್ಜರಿ ಬಹುಮತ ಪಡೆದಿದ್ದು 130ಕ್ಕೂ ಹೆಚ್ಚು ಸ್ಥಾನವನ್ನ ಪಡೆದು ಅಧಿಕಾರಕ್ಕೆ ಬಂದಿದೆ. ಆದ್ರೆ ಹಿಗೆ ಅಧಿಕಾರಕ್ಕೆ ಬಂದ ಮರುಕ್ಷಣವೇ ಇದು 'ಎಟಿಎಂ' ಸರ್ಕಾರ ಅಂತಿದ್ದ ಬಿಜೆಪಿ ನಾಯಕರು, ಈಗ 'ಕಲೆಕ್ಷನ್' ಸರ್ಕಾರ ಅಂತ ಆರೋಪ ಮಾಡುತ್ತಿದ್ದಾರೆ.

'ಕಲೆಕ್ಷನ್ ಗುರಿ ಮುಟ್ಟಲು...'
ಹೌದು, ಕಾಂಗ್ರೆಸ್ ಸರ್ಕಾರ ನಿಗಮ ಮಂಡಳಿಗೆ ನೇಮಕಾತಿ ಮಾಡಲು ಮುಂದಾಗಿರುವ ಈ ಸಮಯದಲ್ಲಿ ಹೊಸ ಬಾಂಬ್ ಸಿಡಿಸಿದೆ ಬಿಜೆಪಿ 'ಕಾಂಗ್ರೆಸ್ ಪಕ್ಷದಲ್ಲಿ ಬಡ ಕಾರ್ಯಕರ್ತರಿಗೆ ಅವಕಾಶಗಳು ಸಿಗುವುದಿಲ್ಲ ಎಂಬುದಕ್ಕೆ ಕಾಂಗ್ರೆಸ್‌ನ ನಿಗಮ ಮಂಡಳಿ ಹರಾಜು ಪ್ರಕ್ರಿಯೆಯೇ ಒಂದು ದೊಡ್ಡ ಸಾಕ್ಷಿ. ಕಲೆಕ್ಷನ್ ಮಾಸ್ಟರ್ @siddaramaiah ಅವರು ತಮ್ಮ ಕಲೆಕ್ಷನ್ ಗುರಿ ಮುಟ್ಟಲು ಕಲೆಕ್ಷನ್ ಮಾಡುವ ಶಾಸಕರಿಗೆ ಮಾತ್ರ ನಿಗಮ ಮಂಡಳಿ ಸ್ಥಾನ ನೀಡಬೇಕೆಂದು ಸುರ್ಜೇವಾಲಾ ಅವರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾಂಗ್ರೆಸ್‌ನಲ್ಲಿ ಕಾರ್ಯಕರ್ತ ಕಾರ್ಯಕರ್ತನೇ ಹೊರತು ಆತನಿಗೆ ಯಾವುದೇ ಅವಕಾಶಗಳು ಸಿಗುವುದೂ ಇಲ್ಲ, ಕೊಡುವುದೂ ಇಲ್ಲ..!' ಎಂದು ಆರೋಪ ಮಾಡಿದೆ ಕರ್ನಾಟಕ ಬಿಜೆಪಿ.
ಕಾಂಗ್ರೆಸ್ ಪಕ್ಷದಲ್ಲಿ ಬಡ ಕಾರ್ಯಕರ್ತರಿಗೆ ಅವಕಾಶಗಳು ಸಿಗುವುದಿಲ್ಲ ಎಂಬುದಕ್ಕೆ ಕಾಂಗ್ರೆಸ್‌ನ ನಿಗಮ ಮಂಡಳಿ ಹರಾಜು ಪ್ರಕ್ರಿಯೆಯೇ ಒಂದು ದೊಡ್ಡ ಸಾಕ್ಷಿ.
— BJP Karnataka (@BJP4Karnataka) November 29, 2023
ಕಲೆಕ್ಷನ್ ಮಾಸ್ಟರ್ @siddaramaiah ಅವರು ತಮ್ಮ ಕಲೆಕ್ಷನ್ ಗುರಿ ಮುಟ್ಟಲು ಕಲೆಕ್ಷನ್ ಮಾಡುವ ಶಾಸಕರಿಗೆ ಮಾತ್ರ ನಿಗಮ ಮಂಡಳಿ ಸ್ಥಾನ ನೀಡಬೇಕೆಂದು ಸುರ್ಜೇವಾಲಾ ಅವರ ಮನವೊಲಿಸುವಲ್ಲಿ… pic.twitter.com/j31iVcrE6e
ನಿನ್ನೆ ಸಿಟಿ ರವಿ ವಾಗ್ದಾಳಿ!
ಈ ಮಧ್ಯೆ ನಿನ್ನೆಯೂ ಮಾಜಿ ಸಚಿವ ಸಿ.ಟಿ. ರವಿ ಕೂಡ ಇದೇ ರೀತಿ ಸುರ್ಜೇವಾಲಾ ಬಗ್ಗೆ ವಾಗ್ದಾಳಿ ನಡೆಸಿದ್ದರು. 'ಕರ್ನಾಟಕವನ್ನು ಕಾಂಗ್ರೆಸ್ ಎಟಿಎಂ ಮಾಡಿಕೊಂಡಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಸುರ್ಜೇವಾಲ ಅವರು ಮತ್ತೆ ಬೆಂಗಳೂರಿಗೆ ಬಂದಿದ್ದಾರೆ. ಮೊದಲನೇ ಕಂತು ಬಂತು, 2ನೇ ಕಂತು ಬಂತು, 3ನೇ ಕಂತಿನಲ್ಲಿ ಚೌಕಾಸಿ ಆಗಬಾರದೆಂದು 3ನೇ ಕಂತಿಗೋಸ್ಕರ ಮತ್ತೆ ಬೆಂಗಳೂರಿಗೆ ಬಂದಂತಿದೆ. ಕರ್ನಾಟಕ ಇನ್ನೆಷ್ಟು ಕಂತು ಕೊಡಬೇಕೋ?' ಎಂದಿದ್ದರು. ಈಗ ಕಾಂಗ್ರೆಸ್ ವಿರುದ್ಧ ಹೊಸ ಬಾಂಬ್ ಸಿಡಿಸಿದೆ ಬಿಜೆಪಿ.

ಕಾಂಗ್ರೆಸ್ ಗ್ಯಾರಂಟಿ ವಿರುದ್ಧ ಬಿಜೆಪಿ ಆರೋಪಗಳನ್ನ ಹೊರಿಸುತ್ತಿದೆ. ಹೀಗೆ ಬಿಜೆಪಿ & ಕಾಂಗ್ರೆಸ್ ನಡುವೆ ನಡೆಯುತ್ತಿರುವ ಗ್ಯಾರಂಟಿ ವಾರ್ ಜೋರಾಗುತ್ತಿದೆ. ಒಬ್ಬರಿಗೆ ಮತ್ತೊಬ್ಬರು ಸವಾಲನ್ನ ಎಸೆಯುತ್ತಾ ಫೈಟ್ ಮುಂದುವರಿಸಿದ್ದಾರೆ. ಈ ಸಂದರ್ಭದಲ್ಲಿ ಕಾಂಗ್ರೆಸ್‌ನ ನಾಯಕರ ವಿರುದ್ಧ ಮತ್ತು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ವಿರುದ್ಧ ಬಿಜೆಪಿ ಭ್ರಷ್ಟಾಚಾರದ ಆರೋಪ ಕೂಡ ಹೊರಿಸುತ್ತಿದೆ. ಆದರೆ ಈ ಆರೋಪಗಳಿಗೆಲ್ಲಾ ಕಾಂಗ್ರೆಸ್ ಹೇಗೆ ಉತ್ತರಿಸುತ್ತೆ? ಅಂತಾ ಕಾದು ನೋಡಬೇಕಿದೆ.












Click it and Unblock the Notifications