ನಾಳೆಯಿಂದ ಬಿಜೆಪಿ 'ವಿಜಯ ಸಂಕಲ್ಪ ಯಾತ್ರೆ' ಆರಂಭ: ಕೇಂದ್ರ ಸೇರಿ 50 ರಾಜ್ಯಗಳ ನಾಯಕರು ಭಾಗಿ!
ಕರ್ನಾಟಕದಲ್ಲಿ ಬಿಜೆಪಿಯಿಂದ ಕರ್ನಾಟಕದ ನಾಲ್ಕು ಧಿಕ್ಕುಗಳಲ್ಲಿ ನಾಳೆ ಬುಧವಾರ ಮಾ.01ರಿಂದ 'ವಿಜಯ ಸಂಕಲ್ಪ ಯಾತ್ರೆ' ಆರಂಭವಾಗಲಿದೆ. ಗಣ್ಯಾಥಿಗಣ್ಯರು ಈ ಅಭಿಯಾನದಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು, ಫೆಬ್ರವರಿ 28: ಆಡಳಿತಾರೂಡ ಬಿಜೆಪಿ ಪಕ್ಷವು ವಿಧಾನಸಭಾ ಚುನಾವಣೆ ಪ್ರಚಾರಕ್ಕೆ ಉತ್ತೇಜನ ನೀಡಲು ಕರ್ನಾಟಕದ ಮೂಲೆ ಮೂಲೆಯಲ್ಲಿ ಬುಧವಾರ 'ವಿಜಯ ಸಂಕಲ್ಪ ಯಾತ್ರೆ' ಆರಂಭಿಸಲಿದೆ. ಈ ಯಾತ್ರೆಯೂ ರಾಜ್ಯ ನಾಲ್ಕು ಧಿಕ್ಕುಗಳಲ್ಲಿ ಆರಂಭವಾಗಲಿದೆ.
ರಾಜ್ಯದಾದ್ಯಂತ ನಾಲ್ಕು ಕಡೆಗಳಲ್ಲಿ ಯಾತ್ರೆಗೆಂದೇ ವಿಶೇಷ ವಾಹನ ಸಿದ್ಧಪಡಿಸಲಾಗಿದೆ. ಈ ವಾಹನಕ್ಕೆ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ. ಪಿ ನಡ್ಡಾ ಅವರು ಚಾಮರಾಜನಗರ ಜಿಲ್ಲೆಯ ಮಹಾದೇಶ್ವರ ಬೆಟ್ಟಮದಲ್ಲಿ ಚಾಲನೆ ನೀಡಲಿದ್ದಾರೆ ಎಂದು ಬಿಜೆಪಿ ತಿಳಿಸಿದೆ.

ಬಿಜೆಪಿ ಕರ್ನಾಟಕ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮತ್ತು ಬಿಜೆಪಿ ಇತರ ಸದಸ್ಯರು ಮಲೆಮಹಾದೇಶ್ವರ ಬೆಟ್ಟದಿಂದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರ ಜೊತೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇನ್ನೂ ದೇಶದ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ರವರು ಮಾರ್ಚ್ 2 ರಂದು ಗಡಿಜಿಲ್ಲೆಯಾದ ಬೆಳಗಾವಿಯ ನಂದಗಡದಲ್ಲಿ ಯಾತ್ರೆಗೆ ಹಸಿರು ನಿಶಾನೆ ತೋರಿಸಲಿದ್ದಾರೆ. ಅದೇ ರೀತಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಮೂರನೇ ಹಾಗೂ ನಾಲ್ಕನೇ ಯಾತ್ರೆಯ ಆರಂಭಕ್ಕೆ ಸಾಕ್ಷಿಯಾಗಲಿದ್ದಾರೆ. ಇವುಗಳು ಕ್ರಮವಾಗಿ ಬೀದರ್ರ್ ಜಿಲ್ಲೆ ಬಸವಕಲ್ಯಾಣ ಹಾಗೂ ಬೆಂಗಳೂರು ದೇವನಹಳ್ಳಿ ಬಳಿಯ ಅವತಿಯಲ್ಲಿ ಗುರುವಾರ (ಮಾ.03) ರಂದು ಚಾಲನೆಗೊಳ್ಳಲಿವೆ.
ಹುಬ್ಬಳ್ಳಿಯಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ಬಿಜೆಪಿಯ ಸಂಸದೀಯ ಮಂಡಳಿಯ ಸದಸ್ಯ ಬಿ ಎಸ್ ಯೆಡಿಯೂರಪ್ಪ, ಪಕ್ಷದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಅವರು ಸಹ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.

50ಕ್ಕೂ ಹೆಚ್ಚು ರಾಜ್ಯಗಳ ನಾಯಕರು ಭಾಗಿ
ಮತದಾನ ಉಸ್ತುವಾರಿ ಹೊಣೆಹೊತ್ತ ಕೇಂದ್ರ ಸಚಿವರಾದ ಧರ್ಮಂದ್ರ ಪ್ರಧಾನ್ ಮತ್ತು ಮನ್ಸುಖ್ ಮಂಡವಿಯಾ ಅವರು ಕರ್ನಾಟಕಕ್ಕೆ ಭೇಟಿ ನೀಡಲಿದ್ದಾರೆ.ಇತರ ಅನೇಕ ಪ್ರಮುಖ ನಾಯಕರು ಸಹ ಪ್ರಚಾರಕ್ಕಾಗಿ ರಾಜ್ಯಕ್ಕೆ ಭೇಟಿ ನೀಡುವ ಸಂಭವವಿದೆ.
ಬಿಜೆಪಿಯ ಈ ಪ್ರಮುಖ ಯಾತ್ರೆಯಲ್ಲಿ50 ಕ್ಕೂ ಹೆಚ್ಚು ರಾಜ್ಯಗಳು ಮತ್ತು ರಾಷ್ಟ್ರೀಯ ನಾಯಕರು ಭಾಗವಹಿಸಲಿದ್ದಾರೆ. ಇದು ಎಲ್ಲಾ 31 ಜಿಲ್ಲೆಗಳು ಮತ್ತು ರಾಜ್ಯದ 224 ಕ್ಷೇತ್ರ ಒಳಗೊಂಡಿದೆ. ಒಟ್ಟು ಸುಮಾರು 8,000 ಕಿಲೋಮೀಟರ್ ಅನ್ನು ಅಭಿಯಾನದಡಿ ಬಿಜೆಪಿ ಕ್ರಮಿಸಲಿದೆ. ಅಭಿಯಾನದಡಿ 80ಕ್ಕೂ ಹೆಚ್ಚು ರ್ಯಾಲಿ, 74 ಸಾರ್ವಜನಿಕ ಸಭೆ ಹಾಗೂ ಸುಮಾರು 150 ರಸ್ತೆ ಪ್ರದರ್ಶನ ಕೈಗೊಳ್ಳಲಿದೆ ಎಂದು ಬೊಮ್ಮಾಯಿ ವಿವರಿಸಿದರು.
ಈ ಯಾತ್ರೆಯು ಮಾರ್ಚ್ 25 ರಂದು ದಾವಣಗೆರೆ ಜಿಲ್ಲೆಯಲ್ಲಿ ಅಂತ್ಯಗೊಳ್ಳಲಿದೆ. ಈ ವೇಳೆ ಮತ್ತೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಲಿದ್ದಾರೆ. ನಾಲ್ಕು ವಿಭಿನ್ನ ಸ್ಥಳಗಳಿಂದ ಪ್ರಾರಂಭವಾಗುವ ಪ್ರತಿ ಯಾತ್ರೆಯು 10-12 ನಾಯಕರನ್ನು ಒಳಗೊಂಡಿರಲಿದೆ. ಈ ಮೂಲಕ ಬಿಜೆಪಿ ಲಿಂಗಾಯತ, ಒಕ್ಕಲಿಗ, ದಲಿತ ಸಮುದಾಯ ಸೇರಿದಂತೆ ಬೃಹತ್ ಸಮುದಾಯಗಳ ಮತ ಓಲೈಕೆ ಮಾಡಲಿದೆ ಎಂದು ವರದಿಯಾಗಿದೆ.












Click it and Unblock the Notifications