ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಿಂದ ಕಾಂಗ್ರೆಸ್‌ಗೆ ಟಾಟಾ ಹೇಳಿ : ಬಿಜೆಪಿ ವ್ಯಂಗ್ಯ

|
Google Oneindia Kannada News

Recommended Video

Lok Sabha Elections 2019 : ತಪ್ಪು ಕಂಡುಹಿಡಿಯೋದು ಅಂದ್ರೆ ಇದೆ ಅಲ್ವಾ? | Oneindia Kannada

ಬೆಂಗಳೂರು, ಏಪ್ರಿಲ್ 01 : 'ಇದು ಕರ್ನಾಟಕದಿಂದ ಕಾಂಗ್ರೆಸ್‌ಗೆ ಟಾಟಾ ಹೇಳಲು ಸೂಕ್ತ ಸಮಯ' ಎಂದು ಬಿಜೆಪಿ ಲೇವಡಿ ಮಾಡಿದೆ. ಭಾನುವಾರ ನಡೆದ ಕಾಂಗ್ರೆಸ್‌-ಜೆಡಿಎಸ್ ಸಮಾವೇಶದ ಬ್ಯಾನರ್ ಇದಕ್ಕೆ ಕಾರಣವಾಗಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಭಾನುವಾರ ಬೆಂಗಳೂರು ನಗರದ ಹೊರವಲಯದ ಮಾದಾವರ ಬಳಿಯ ಬಿಐಇಸಿ ಮೈದಾನದಲ್ಲಿ ಕಾಂಗ್ರೆಸ್‌-ಜೆಡಿಎಸ್ ಜಂಟಿ ಸಮಾವೇಶ ಆಯೋಜನೆ ಮಾಡಲಾಗಿತ್ತು. ಮೈತ್ರಿಕೂಟದ ಪಕ್ಷಗಳು ಚುನಾವಣಾ ಪ್ರಚಾರಕ್ಕೆ ಜಂಟಿಯಾಗಿ ಸಮಾವೇಶದ ಮೂಲಕ ಚಾಲನೆ ನೀಡಿದವು.

ರಾಜ್ಯದ ಸಂಸದರಲ್ಲಿ ಯಾರ ವಿರುದ್ಧ ಎಷ್ಟು ಕ್ರಿಮಿನಲ್ ಪ್ರಕರಣಗಳಿವೆ?

ಈ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಉಪ ಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಗಣ್ಯರು ಪಾಲ್ಗೊಂಡಿದ್ದರು.

ಕೋಟ್ಯಂತರ ಜನರಿರುವ ಈ ದೇಶವು ಬಡವರು, ರೈತರಿಗೆ ಸೇರಿದ್ದು: ರಾಹುಲ್ಕೋಟ್ಯಂತರ ಜನರಿರುವ ಈ ದೇಶವು ಬಡವರು, ರೈತರಿಗೆ ಸೇರಿದ್ದು: ರಾಹುಲ್

ಸಮಾವೇಶದಲ್ಲಿ ಹಾಕಿದ್ದ ಬ್ಯಾನರ್‌ನಲ್ಲಿ Karnataka ಎಂಬುವುದನ್ನು Karnatata ಎಂದು ತಪ್ಪಾಗಿ ಬರೆಯಲಾಗಿತ್ತು. Karnataka Pradesh Congress Committee ಎಂಬುದನ್ನು ತಪ್ಪಾಗಿ ಬರೆಯಲಾಗಿತ್ತು. ಇದನ್ನು ಮುಂದಿಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಲೇವಡಿ ಮಾಡಿದೆ...

ಲೇವಡಿ ಮಾಡಿದ ಬಿಜೆಪಿ

ಲೇವಡಿ ಮಾಡಿದ ಬಿಜೆಪಿ

ಈ ಫೋಟೋವನ್ನು ಟ್ವಿಟರ್‌ನಲ್ಲಿ ಹಾಕಿರುವ ಬಿಜೆಪಿ 'ಇದು ಕರ್ನಾಟಕದಿಂದ ಕಾಂಗ್ರೆಸ್‌ಗೆ ಟಾಟಾ ಹೇಳಲು ಸೂಕ್ತ ಸಮಯ' ಎಂದು ಬಿಜೆಪಿ ಲೇವಡಿ ಮಾಡಿದೆ.

ಜೆಡಿಎಸ್ ಕಾಂಗ್ರೆಸ್‌ ಜೊತೆ ವಿಲೀನ?

ಬಿಜೆಪಿ ಟ್ವೀಟ್‌ಗೆ ಹಲವು ಜನರು ಪ್ರತಿಕ್ರಿಯೆ ನೀಡಿದ್ದಾರೆ. ಜೆಡಿಎಸ್ ಕಾಂಗ್ರೆಸ್‌ ಜೊತೆ ವಿಲೀನ ವಾಯಿತೇ?, ಕಾಂಗ್ರೆಸ್ ಪೋಸ್ಟರ್‌ನಲ್ಲಿ ಕುಮಾರಸ್ವಾಮಿ ಅವರ ಫೋಟೋ ಇದೆ ಎಂದು ಪ್ರತಿಕ್ರಿಯೆ ನೀಡಲಾಗಿದೆ.

ನಾನಾಗಲೇ ಟಾಟಾ ಹೇಳಿದ್ದೇನೆ

ನಾನಾಗಲೇ ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಟಾಟಾ ಹೇಳಿದ್ದೇನೆ. ಈಗ ಕರ್ನಾಟಕದ ಜನರು ಕಾಂಗ್ರೆಸ್‌ ಮತ್ತು ಜೆಡಿಎಸ್‌ಗೆ ಟಾಟಾ ಹೇಳಬೇಕು ಎಂದು ಟ್ವೀಟ್ ಮಾಡಲಾಗಿದೆ.

ರಾಹುಲ್ ಗಾಂಧಿ ಬರೆದಿರಬೇಕು

Karnataka ಎಂಬುವುದನ್ನು Karnatata ಎಂದು ತಪ್ಪಾಗಿ ರಾಹುಲ್ ಗಾಂಧಿ ಬರೆದಿರಬೇಕು ಎಂದು ಟ್ವೀಟ್‌ನಲ್ಲಿ ವ್ಯಂಗ್ಯವಾಡಲಾಗಿದೆ.

English summary
Karnataka BJP trolls the joint election rally of the Janata Dal (Secular) and Congress held on March 31st at Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X