ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿ ರಾಜ್ಯ ನಾಯಕರ ಬಳಿ ಯಾವುದೇ ಬಂಡವಾಳ ಇಲ್ಲ. ಹೀಗಾಗಿ ಮೋದಿ ಪದೇ ಪದೇ ರಾಜ್ಯಕ್ಕೆ ಬರ್ತಿದ್ದಾರೆ: ಎಂ.ಬಿ.ಪಾಟೀಲ್

|
Google Oneindia Kannada News

ಬೆಂಗಳೂರು,ಜನವರಿ19: ಬಿಜೆಪಿ ರಾಜ್ಯ ನಾಯಕರ ಬಳಿ ಯಾವುದೇ ಬಂಡವಾಳ ಇಲ್ಲ. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಪದೇ ಪದೇ ರಾಜ್ಯಕ್ಕೆ ಬರ್ತಿದ್ದಾರೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಹೇಳಿದ್ದಾರೆ.

ಈ ಕುರಿತು ನಗರದಲ್ಲಿ ಗುರುವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯಲ್ಲಿ ಮಾಜಿ ಮುಖ್ಯಮಂತ್ರಿಬಿ.ಎಸ್ ಯಡಿಯೂರಪ್ಪ ಬಿಟ್ಟು ಮತ ಸೆಳೆಯುವ ನಾಯಕರು ಬೇರೆ ಯಾರೂ ಇಲ್ಲ. ರಾಜ್ಯದ ಏಳುಕೋಟಿ ಜನರಿಗೆ ಬಿಜೆಪಿ ಸರ್ಕಾರದ ಅಭಿವೃದ್ಧಿ ಶೂನ್ಯ ಎನ್ನೋದು ಗೊತ್ತಾಗಿದೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಐದು ಲಕ್ಷ ಕೋಟಿ ಸಾಲ ಮಾಡಿದ್ದಾರೆ. ಇವರಿಗೆ ಇರುವ ಆಸರೆ ಎಂದರೇ ಬರೀ ನರೇಂದ್ರ ಮೋದಿಯವರು ಮಾತ್ರ, ರಾಜ್ಯ ಬಿಜೆಪಿ ನಾಯಕರು ನರೇಂದ್ರ ಮೋದಿ ಅವರ ಹೆಸರು ಹೇಳಿಕೊಂಡೇ ಬದುಕಬೇಕು ಅಷ್ಟೇ ಎಂದು ಲೇವಡಿ ಮಾಡಿದರು.

ವಿಧಾನಸೌಧದ ಗೋಡೆಗಳು ಕಾಸು‌ ಕಾಸು‌ ಅನ್ನುತ್ತಿವೆ: ಬಿಜೆಪಿ ವಿರುದ್ಧ ಡಿ.ಕೆ. ಶಿವಕುಮಾರ್‌ ಆರೋಪವಿಧಾನಸೌಧದ ಗೋಡೆಗಳು ಕಾಸು‌ ಕಾಸು‌ ಅನ್ನುತ್ತಿವೆ: ಬಿಜೆಪಿ ವಿರುದ್ಧ ಡಿ.ಕೆ. ಶಿವಕುಮಾರ್‌ ಆರೋಪ

ಬಿಜೆಪಿಯಲ್ಲಿ ಬಿಎಸ್ ಯಡಿಯೂರಪ್ಪ ಇದ್ದರು. ನಮ್ಮಲ್ಲಿ ಸಿದ್ದರಾಮಯ್ಯ ಇದ್ದಾರೆ. ಇದನ್ನು ಹೊರತು ಪಡಿಸಿ ಬಿಜೆಪಿಯಲ್ಲಿ ಮತ ಸೆಳೆಯುವ ಲೀಡರ್ ಯಾರೂ ಇಲ್ಲ ಎಂದರು. ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದರೂ ಯಾವುದೇ ವ್ಯತ್ಯಾಸ ಆಗೋದಿಲ್ಲ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಂದರೂ ಯಾವುದೇ ವ್ಯತ್ಯಾಸ ಆಗೋದಿಲ್ಲ.ಅಮಿತ್ ಶಾ, ಜೆಪಿ ನಡ್ಡಾ ಆಯ್ತು ರಾಜ್ಯ ನಾಯಕರಿಗೆ ಇವರಿಂದ ಏನೂ ನಡೆಯೋದಿಲ್ಲ ಎನ್ನೋದು ಗೊತ್ತಿದೆ‌. ಮೋದಿಯವರ ಮೋಡಿ ಏನೂ ನಡೆಯೋದಿಲ್ಲ. ರಾಜ್ಯ ನಾಯಕರಲ್ಲಿ ಮತ ಸೆಳೆಯುವ ಯಾವ ಶಕ್ತಿಯೂ ಇಲ್ಲ ಎಂದರು.

BJP State leaders Have No Capital Said Mb Patil Slams

ಕಳೆದ ಬಾರಿಗಿಂತ ಈ ಬಾರಿ ನಾವು ಕಲ್ಯಾಣ ಕರ್ನಾಟಕದಲ್ಲಿ ಹೆಚ್ಚಿನ ಸಾಧನೆ ಮಾಡುತ್ತೇವೆ. ಮಲ್ಲಿಕಾರ್ಜುನ ಖರ್ಗೆ ಕಲ್ಯಾಣ ಕರ್ನಾಟಕದ ಕಲ್ಪವೃಕ್ಷ ಕಾಮಧೇನು ಇದ್ದ ಹಾಗೆ ಎಂದು ಇದೇ ಸಂದರ್ಭದಲ್ಲಿ ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ವಿಧಾನಸಭಾ ಚುನಾವಣೆಗೆ ಕೆಲ ತಿಂಗಳು ಮಾತ್ರ ಬಾಕಿ ಉಳಿದಿದ್ದು, ರಾಜ್ಯಾದ್ಯಂತ ಮೂರು ಪಕ್ಷಗಳು ಸಹ ಭರ್ಜರಿ ಚುನಾವಣಾ ತಯಾರಿ ನಡೆಸಿದ್ದು, ರಾಜಕೀಯ ಪಕ್ಷಗಳು ಸಾಲು ಸಾಲು ಯಾತ್ರೆಗಳನ್ನ ನಡೆಸುತ್ತಿದ್ದು,ರಾಜ್ಯದ ಜನತೆಗೆ ಭರವಸೆಗಳ ಮೇಲೆ ಭರವಸೆಗಳನ್ನ ನೀಡುತ್ತಿದ್ದಾರೆ. ಪಂಚರತ್ಮರಥಯಾಅತ್ರೆಯ ಮೂಲಕ ರಾಜ್ಯದ ಜನರ ಮತ ಸೆಳೆಯಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮುಂದಾಗಿದ್ರೆ. ಇತ್ತ ಕಾಂಗ್ರೆಸ್ ಪಕ್ಷವೂ ಭಾರತ್ ಜೋಡೋ ಯಾತ್ರೆಯ ನಂತರ ಪ್ರಜಾಧ್ವನಿ ಯಾತ್ರೆಯಜ ಮೂಲಕ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಜಂಟಿ ಬಸ್ ಯಾತ್ರೆಯನ್ನ ಕೈಗೊಂಡಿತ ಆಡಳಿತ ಪಕ್ಷವಾದ ಬಿಜೆಪಿ ಹೈಕಮಾಂಡ್ ನಾಯಕರನ್ನ ಪದೇ ಪದೇ ರಾಜ್ಯಕ್ಕೆ ಕರೆಸುವ ಮೂಲಕ ಜನರನ್ನ ಸೆಳೆಯುತ್ತಿವೆ.

English summary
BJP state leaders have no capital. That is why Modi has repeatedly come to the state MB Patil said
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X