ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ ಗೆ ತಕ್ಕ ಶಾಸ್ತಿಯನ್ನು ರಾಜ್ಯದ ಜನ ಮಾಡಲಿದ್ದಾರೆ: ಬಿಜೆಪಿ ವಾಗ್ದಾಳಿ

|
Google Oneindia Kannada News

ಬೆಂಗಳೂರು,ಜನವರಿ18: ಮತಾಂಧ ಟಿಪ್ಪುವಿನಿಂದ ಮೈಸೂರು ಸಂಸ್ಥಾನವನ್ನು ಉಳಿಸಿದ್ದು ಒಕ್ಕಲಿಗ ವೀರರಾದ ರಾಜಮಾತೆ ಮಹಾರಾಣಿ ಲಕ್ಷ್ಮಮ್ಮ ಅಮ್ಮಣ್ಣಿಯವರ ಬಲಗೈ ಬಂಟರಾದ ದೊಡ್ಡನಂಜೇಗೌಡ ಮತ್ತು ಉರಿಗೌಡ ಎಂಬ ಸತ್ಯ ಕಾಂಗ್ರೆಸ್ ಬೇಕಾಗಿಲ್ಲ ಎಂದು ಬಿಜೆಪಿ ಟ್ವೀಟ್ ಮಾಡಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಪ್ರಜಾದ್ರೋಹ ಯಾತ್ರೆ ಎಂಬ ಬ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡಿದೆ. ನಮ್ಮ ದೇಶದ ಚರಿತ್ರೆಯನ್ನು ಬೇಕಾದಂತೆ ತಿರುಚಿ, ತಮ್ಮನ್ನೇ ತಾವು ವೈಭವೀಕರಿಸಿಕೊಂಡಿದ್ದ ಬ್ರಿಟಿಷರಂತೆ ದೇಶವನ್ನ ಲೂಟಿ ಮಾಡಿದ ಕಾಂಗ್ರೆಸ್ ಗೆ ಒಕ್ಕಲಿಗ ಸಮುದಾಯದ ವೀರರ ಕತೆಯನ್ನು ಸಮಾಜದ ಮುಂದಿಡುವುದು ಬೇಕಾಗಿಲ್ಲ.

ಕಪಾಲಿ ಬೆಟ್ಟದಲ್ಲಿ ಯೇಸು ಪ್ರತಿಮೆ, ಟಿಪ್ಪು ಜಯಂತಿಯನ್ನು ಸಮರ್ಥಿಸಿಕೊಳ್ಳುವ ಡಿ.ಕೆ.ಶಿವಕುಮಾರ ಅವರಿಗೆ ದೊಡ್ಡ ನಂಜೇಗೌಡ, ಉರಿ ಗೌಡರನ್ನು ಕಾಲ್ಪನಿಕ ಪಾತ್ರಗಳೆಂದು ಬಿಂಬಿಸುವುದು ಕಷ್ಟವಲ್ಲ. ಇಂಥವರು ಒಕ್ಕಲಿಗ ವೀರರ ಜಯಂತಿ, ಪ್ರತಿಮೆ ಸ್ಥಾಪನೆಗೆ ಒಪ್ಪಿಕೊಳ್ಳುವರೇ? ಎಂದು ಪ್ರಶ್ನಿಸಿದ್ದಾರೆ.

BJP Slams Congress Leaders Siddaramaiah And DK Shivakumar

ನಾಡಪ್ರಭು ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಬಹಿಷ್ಕರಿಸುವ ನಡೆಯ ಹಿಂದಿರುವುದು ಒಕ್ಕಲಿಗ ವಿರೋಧಿ ಸಿದ್ದರಾಮಯ್ಯ ಎಂಬ ಸತ್ಯ, ಅವರ ಬಿಟ್ಟಿ ದೌರ್ಭಾಗ್ಯಗಳನ್ನು ತಿರಸ್ಕರಿಸುತ್ತಿರುವ ಸ್ವಾಭಿಮಾನಿ ಕನ್ನಡಿಗರಿಗೆ ತಿಳಿದಿದೆ. ಬಾಬಾ ಸಾಹೇಬರ ಹೆಸರನ್ನೇ ಹೇಳಿಕೊಂಡು ಹೆಜ್ಜೆ ಹೆಜ್ಜೆಗೂ ಸಂವಿಧಾನ ಉಲ್ಲೇಖಿಸುತ್ತಾ ರಾಜಕೀಯದ ಬೇಳೆ ಬೇಯಿಸಿಕೊಳ್ಳುತ್ತಿರುವ ಕಾಂಗ್ರೆಸ್ ಬಾಬಾ ಸಾಹೇಬರಿಗೆ ಕೊಡಬೇಕಾದಂಥ ಗೌರವ ಕೊಡಲೇ ಇಲ್ಲ. 1954ರ ಉಪಚುನಾವಣೆಯಲ್ಲಿ ಅವರು ಸೋಲುವಂತೆ ನೋಡಿಕೊಂಡವರು ನೆಹರು ಎಂದು ಟ್ವೀಟ್ ಮಾಡಿದೆ.

BJP Slams Congress Leaders Siddaramaiah And DK Shivakumar

ಅಂಬೇಡ್ಕರ್ ಅವರ ಜೀವನದ ಮೈಲುಗಲ್ಲುಗಳ ಸ್ಥಳಗಳನ್ನು ಪಂಚತೀರ್ಥ ಕ್ಷೇತ್ರಗಳನ್ನಾಗಿ ಅಭಿವೃದ್ಧಿಪಡಿಸಿದವರು ನಾವು. ಲಂಡನ್ನಿನಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಪಿಸಿದವರು ನಾವು. ಗುಜರಾತಿನಲ್ಲಿ ಪಟೇಲರ ಪ್ರತಿಮೆ ಸ್ಥಾಪನೆ ಮಾಡಿದ್ದು ನಾವು. ಚೆನ್ನೈನಲ್ಲಿ ಸರ್ವಜ್ಞ ಕವಿಯ ಪ್ರತಿಮೆ ಸ್ಥಾಪನೆ ಮಾಡಿದ್ದು ನಾವು. ತಮ್ಮ ರಾಜಕೀಯಕ್ಕಾಗಿ ಇಲ್ಲ ಸಲ್ಲದ ಡೋಂಗಿ ಗ್ಯಾರಂಟಿಗಳ ಪ್ರಚಾರದ ಗುಂಗಿನಲ್ಲಿ ಈ ದೇಶದ, ಈ ರಾಜ್ಯದ ವೀರ ಪುರುಷರಿಗೆ ಕಾಂಗ್ರೆಸ್ ಅಪಮಾನ ಎಸಗುತ್ತಿದೆ, ಸಮಾಜದಲ್ಲಿ ಒಡಕನ್ನು ಸೃಷ್ಟಿಸುತ್ತಿದೆ. ಇವರಿಗೆ ತಕ್ಕ ಶಾಸ್ತಿಯನ್ನು ರಾಜ್ಯದ ಜನ ಮಾಡಲಿದ್ದಾರೆ ಎಂದು ಟ್ವೀಟ್ ಮೂಲಕ ಕಿಡಿಕಾರಿದೆ.

English summary
Congress will be taught a lesson by the people of the state bjp tweet,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X