ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರೀಬಿ ಹಠಾವೋ: ಕಾಂಗ್ರೆಸ್ ಹಳೇ ಜಪಕ್ಕೆ ಬಿಜೆಪಿ ಲೇವಡಿ

|
Google Oneindia Kannada News

ಗರೀಬಿ ಹಠಾವೋ: ಕಾಂಗ್ರೆಸ್ ಹಳೇ ಜಪಕ್ಕೆ ಬಿಜೆಪಿ ಲೇವಡಿಬೆಂಗಳೂರು, ಮಾರ್ಚ್ 26: ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಥಿಕವಾಗಿ ಹಿಂದುಳಿದ ಶೇ 20ರಷ್ಟು ಬಡ ಕುಟುಂಬಗಳಿಗೆ ತಿಂಗಳಿಗೆ 6,000 ರೂ. ಸಹಾಯಧನ ನೀಡುವುದಾಗಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ನೀಡಿರುವ ಭರವಸೆಯನ್ನು ಬಿಜೆಪಿ ಲೇವಡಿ ಮಾಡಿದೆ.

ಗರೀಬಿ ಹಠಾವೋ ಎಂದು ಬಡತನ ನಿರ್ಮೂಲನೆ ಬಗ್ಗೆ ಕಾಂಗ್ರೆಸ್ ಐದಾರು ದಶಕಗಳಿಂದಲೂ ಹೇಳುತ್ತಲೇ ಇದೆ. ಆದರೆ, ಜೀವನ ಮಟ್ಟ ಸುಧಾರಣೆ ಇಂದಿಗೂ ಸಾಧ್ಯವಾಗಿಲ್ಲ. ಈಗ ಮತ್ತೆ ಬಡತನ ನಿರ್ಮೂಲನೆ ಮಾಡುತ್ತೇವೆ, ಅದಕ್ಕಾಗಿ ಜನರಿಗೆ ಹಣ ನೀಡುತ್ತೇವೆ ಎಂದು ಬೊಗಳೆ ಬಿಟ್ಟಿದೆ ಎಂದು ಬಿಜೆಪಿ ಟೀಕಿಸಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಈ ಗರೀಬಿ ಹಠಾವೋ ಘೋಷಣೆಯನ್ನು ಕಾಂಗ್ರೆಸ್ ಮಾಡುತ್ತಲೇ ಬಂದಿದೆ. ಅದನ್ನು ದೇಶವನ್ನು ಸರಿಪಡಿಸಬೇಕೆಂದರೆ ಮೊದಲು ಕಾಂಗ್ರೆಸ್ ಹಠಾವೋ ಮಾಡುವುದು ಅಗತ್ಯ ಎಂದು ಅದು ಹೇಳಿದೆ.

ಕನಿಷ್ಠ ಆದಾಯ ಖಾತ್ರಿ ಯೋಜನೆಯಡಿಯಲ್ಲಿ ಭಾರತದ ಶೇ.20 ರಷ್ಟು ಅತೀ ಬಡಕುಟುಂಬದ ಫಲಾನುಭವಿಗಳಿಗೆ ವರ್ಷಕ್ಕೆ 72,000 ರೂ. ನೀಡುವುದಾಗಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಭರವಸೆ ನೀಡಿದ್ದರು. ಫಲಾನುಭವಿ ಬಡವರ ಖಾತೆಗೆ ನೇರವಾಗಿ ಹಣ ಸಂದಾಯವಾಗಲಿದ್ದು, ಇದು 25 ಕೋಟಿಗೂ ಅಧಿಕ ಜನರನ್ನು ಬಡತನದಿಂದ ಮೇಲಕ್ಕೆತ್ತಲಿದೆ ಎಂದು ಗಾಂಧಿ ಹೇಳಿದ್ದರು.

3 ಲಕ್ಷ 60 ಸಾವಿರ ಕೋಟಿ ರುಪಾಯಿಯನ್ನು ರಾಹುಲ್ ಎಲ್ಲಿಂದ ತರುತ್ತಾರೆ?3 ಲಕ್ಷ 60 ಸಾವಿರ ಕೋಟಿ ರುಪಾಯಿಯನ್ನು ರಾಹುಲ್ ಎಲ್ಲಿಂದ ತರುತ್ತಾರೆ?

ಇದನ್ನು ಬಿಜೆಪಿ ಮುಖಂಡರು ಟೀಕಿಸಿದ್ದಾರೆ. ಸ್ವಾತಂತ್ರ್ಯ ಬಂದ ಸಂದರ್ಭದಿಂದಲೂ ಬಡತನ ನಿರ್ಮೂಲನೆ ಮಾಡುವುದಾಗಿ ಕಾಂಗ್ರೆಸ್ ನಾಯಕರು ಜಪಿಸುತ್ತಲೇ ಇದ್ದಾರೆ ಎಂದಿದ್ದಾರೆ.

ಕಾಂಗ್ರೆಸ್ ಹಠಾವೋ ಆಗಬೇಕಿದೆ

ಕಾಂಗ್ರೆಸ್ ಪಕ್ಷದ ಚುನಾವಣಾ ಆಶ್ವಾಸನೆ,
1947- ಗರೀಬಿ ಹಠಾವೋ
1971- ಗರೀಬಿ ಹಠಾವೋ
1991-ಗರೀಬಿ ಹಠಾವೋ
2004- ಗರೀಬಿ ಹಠಾವೋ
2014-ಗರೀಬಿ ಹಠಾವೋ
2019- ಗರೀಬಿ ಹಠಾವೋ
ಈಗ ಭಾರತ ಮಾಡಬೇಕಿರುವುದೇನೆಂದರೆ ಕಾಂಗ್ರೆಸ್‌ಅನ್ನು ಹಠಾವೋ ಮಾಡುವುದು ಎಂದು ವ್ಯಂಗ್ಯವಾಗಿ ಹೇಳಿದೆ.

Array

ಸುಳ್ಳು ಎಂಬುದು ಜಗತ್ತಿಗೇ ಗೊತ್ತು

ಬಡವರು ಮತ್ತು ದುರ್ಬಲ ವಿಚಾರ ಬಂದಾಗಲೂ ರಾಹುಲ್ ಗಾಂಧಿ ಸುಳ್ಳು ಹೇಳುವುದನ್ನು ಬಿಡುವುದಿಲ್ಲ. ನರೇಂದ್ರ ಮೋದಿ ಅವರು ಉದ್ಯಮಿಗಳಿಗೆ 3,50,000 ಕೋಟಿ ನೀಡಿದಂತೆ ಬಡವರಿಗೆ ಹಣ ನೀಡುತ್ತೇನೆ ಎಂದು ಅವರು ಹೇಳಿದ್ದಾರೆ. ಆದರೆ ಇದು ಸುಳ್ಳು ಎಂಬುದು ಇಡೀ ಜಗತ್ತಿಗೇ ಗೊತ್ತು. ಇಡೀ ಯೋಜನೆಯೇ ಸುಳ್ಳಿನ ಸರಮಾಲೆ ಎಂದು ರಾಜೀವ್ ಚಂದ್ರಶೇಖರ್ ಟ್ವೀಟ್ ಮಾಡಿದ್ದಾರೆ.

ಬಡವರ ಬ್ಯಾಂಕ್ ಖಾತೆಗೆ ತಿಂಗಳಿಗೆ 6000 ರೂ.: ರಾಹುಲ್ ಭರವಸೆಬಡವರ ಬ್ಯಾಂಕ್ ಖಾತೆಗೆ ತಿಂಗಳಿಗೆ 6000 ರೂ.: ರಾಹುಲ್ ಭರವಸೆ

ಜನರು ನಿಮ್ಮನ್ನು ನಂಬುವುದಿಲ್ಲ

ಪ್ರಿಯ ರಾಹುಲ್ ಗಾಂಧಿ, ಬಡವರು ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ನಂಬುವುದಿಲ್ಲ. ದಶಕಗಳ ಕಾಲ ಅವರನ್ನು ವಂಚಿಸಿ, ಅಸಹಾಯಕರಾಗಿ ಉಳಿಯುವಂತೆ ಮಾಡಿದ್ದೀರಿ. ಬಡವರ ಹೆಸರಿನಲ್ಲಿ ಮತ್ತು ಮಧ್ಯಮ ವರ್ಗದಿಂದ ಹಣ ಪಾವತಿಸಿಕೊಂಡು ಆರಂಭಿಸಿದ ಯೋಜನೆಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದವು ಎಂದು ರಾಜೀವ್ ಚಂದ್ರಶೇಖರ್ ತರಾಟೆಗೆ ತೆಗೆದುಕೊಂಡಿದ್ದಾರೆ.

ಕೇಂದ್ರ ಸರ್ಕಾರ ಹೆಚ್ಚೇ ನೀಡುತ್ತಿದೆ

ಕಾಂಗ್ರೆಸ್ ನೀಡಿರುವ ಸಹಾಯಧನದ ಭರವಸೆ ಒಂದು ವ್ಯರ್ಥ ಪ್ರಕಟಣೆ. ಮೋದಿ ಸರ್ಕಾರ ಈಗಾಗಲೇ ಡಿಬಿಟಿ ಸಬ್ಸಿಡಿಗಳ ಮೂಲಕ ವರ್ಷಕ್ಕೆ 1,06,800 ರೂಪಾಯಿ ನೀಡುತ್ತಿದೆ. ಸರಳ ಗಣಿತದಲ್ಲಿ ಐದು ಕೋಟಿ ಕುಟುಂಬಗಳಿಗೆ ನೀಡುವ 72,000 ರೂ. ಒಟ್ಟು 3.6 ಲಕ್ಷ ಕೋಟಿ ವೆಚ್ಚದಾಯಕ. ಇದು ಈಗ ನೀಡುತ್ತಿರುವ ಮೊತ್ತದ 2/3 ಕ್ಕಿಂತಲೂ ಕಡಿಮೆ ಎಂದು ಬಿಜೆಪಿ ಲೆಕ್ಕಾಚಾರದ ಮಾಹಿತಿ ನೀಡಿದೆ.

English summary
BJP Karnataka slams Congress on the promise of 6,000 Rs a month to poor families announced by Rahul Gandhi.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X