• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಎಚ್. ಡಿ. ಕುಮಾರಸ್ವಾಮಿ ಜನರ ಆಶೀರ್ವಾದದಿಂದ ಸಿಎಂ ಆಗಿದ್ದು ಯಾವಾಗ?

|

ಬೆಂಗಳೂರು, ಫೆಬ್ರವರಿ 17; "ಜನತೆಯ ಆಶೀರ್ವಾದದಿಂದ ನೀವು ಯಾವಾಗ ಮುಖ್ಯಮಂತ್ರಿಯಾದಿರಿ?" ಎಂದು ಕರ್ನಾಟಕ ಬಿಜೆಪಿ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿಗೆ ಟ್ವೀಟ್ ಬಾಣ ಬಿಟ್ಟಿದೆ.

ಬುಧವಾರ ಎಚ್. ಡಿ. ಕುಮಾರಸ್ವಾಮಿ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ಬಿಜೆಪಿ ಈ ಪ್ರಶ್ನೆಯನ್ನು ಮಾಡಿದೆ. "ಪಬ್ಲಿಸಿಟಿಗೆ ನಾನು ಈ ಹೇಳಿಕೆ ಕೊಟ್ಟಿದ್ದೇನೆ" ಎಂಬ ಸಚಿವ ಶ್ರೀರಾಮು ಹೇಳಿಕೆಗೆ ಕುಮಾರಸ್ವಾಮಿ ಟ್ವೀಟ್‌ ಮಾಡಿದ್ದರು.

'ಕುಮಾರಸ್ವಾಮಿ ಮನಸ್ಸಲ್ಲೂ ರಾಮ ಮಂದಿರ ಆಗಬೇಕೆಂಬ ಬಯಕೆ ಇದೆ'

"ಒಮ್ಮೆ ನಮ್ಮ ಪಕ್ಷದ ಅನುಗ್ರಹದಿಂದ ಮುಖ್ಯಮಂತ್ರಿಯಾದರೆ ಮತ್ತೊಮ್ಮೆ ಕಾಂಗ್ರೆಸ್ ಪಕ್ಷದ ಪಾಪದ ಕೂಸಾಗಿ ಮುಖ್ಯಮಂತ್ರಿಯಾದಿರಿ" ಎಂದು ಬಿಜೆಪಿ ಟ್ವೀಟ್ ಮೂಲಕ ತಿರುಗೇಟು ನೀಡಿದೆ.

ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಗೆ ಪೇಜಾವರ ಶ್ರೀ ತೀಕ್ಷ್ಣ ಪ್ರತಿಕ್ರಿಯೆ

ಬಿಜೆಪಿ ತನ್ನ ಟ್ವೀಟ್‌ನಲ್ಲಿ, "ಜನರ ಆಶೀರ್ವಾದ ನಿಮ್ಮ ಮೇಲೆ ಇದ್ದಿದ್ದರೆ ನೀವು ಇಂದಿಗೂ ಕೂಡ ಮುಖ್ಯಮಂತ್ರಿಯಾಗಿ ಇರುತ್ತಿದ್ದಿರಿ, ಇದು ನಿಮಗೆ ನೆನಪಿರಲಿ" ಎಂದು ಹೇಳಿದೆ.

ಎಚ್‌ಡಿಕೆ ಟ್ವೀಟ್‌; ರಾಮ ಮಂದಿರ ನಿರ್ಮಾಣ ದೇಣಿಗೆ ಸಂಬಂಧ ಎಚ್. ಡಿ. ಕುಮಾರಸ್ವಾಮಿ ನೀಡಿದ ಹೇಳಿಕೆಗೆ ಸಚಿವ ಬಿ. ಶ್ರೀರಾಮುಲು ಪ್ರತಿಕ್ರಿಯೆ ನೀಡಿದ್ದರು.

ರಾಮ ಮಂದಿರ ನಿರ್ಮಾಣ; ಸಿದ್ದರಾಮಯ್ಯ ಸಹೋದರನಿಂದ ದೇಣಿಗೆ

ಇದಕ್ಕೆ ಪ್ರತಿಕ್ರಿಯೆ ನೀಡಿ ಟ್ವೀಟ್ ಮಾಡಿದ್ದ ಕುಮಾರಸ್ವಾಮಿ, "ಪಬ್ಲಿಸಿಟಿಗೆ ನಾನು ಈ ಹೇಳಿಕೆ ಕೊಟ್ಟಿದ್ದೇನೆ ಎಂದು ಸೋದರ ಶ್ರೀರಾಮುಲು ಹೇಳಿದ್ದಾರೆ. ಪಾಪ ಅವರು ಮುಗ್ಧರು. ದೈವಬಲ, ಜನಾಶಿರ್ವಾದದಿಂದ 2 ಬಾರಿ ಸಿಎಂ ಆದ ನಾನು ಇನ್ನು ಯಾವ ಪಬ್ಲಿಸಿಟಿ ಪಡೆಯಬೇಕಿದೆ? ನನಗೆ ಅದರ ಅಗತ್ಯವೇನಿದೆ? ರಾಮ ಮಂದಿರ ಆಗಬೇಕೆಂದು ಕುಮಾರಸ್ವಾಮಿ ಅವರ ಮನಸ್ಸಲ್ಲೂ ಇದೆ ಎಂಬ ಅವರ ಮಾತನ್ನು ಮಾತ್ರ ಅನುಮೋದಿಸುತ್ತೇನೆ" ಎಂದು ಹೇಳಿದ್ದರು.

English summary
When you become chief minister of Karnataka with blessings of people Karnataka BJP tweet against former chief minister H. D. Kumaraswamy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X