ಬಿಜೆಪಿ ಸರ್ಕಾರ ರಚನೆ ಮಾಡಲು ಹಣದ ಆಮಿಷ ವೊಡ್ಡಿತ್ತು : ದೇವೇಗೌಡ
ಬೆಂಗಳೂರು, ಮಾರ್ಚ್ 28 : 'ಬಿಜೆಪಿ ಜೊತೆ ಸೇರಿ ಸರ್ಕಾರ ರಚನೆ ಮಾಡಲು ಎಚ್.ಡಿ.ಕುಮಾರಸ್ವಾಮಿ ಅವರಿಗೆ ಹಣದ ಆಮಿಷ ವೊಡ್ಡಲಾಗಿತ್ತು' ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಗಂಭೀರ ಆರೋಪ ಮಾಡಿದರು.
ಬೆಂಗಳೂರಿನಲ್ಲಿ ಗುರುವಾರ ಮಾತನಾಡಿದ ದೇವೇಗೌಡರು, 'ಚುನಾವಣೆಗಿಂತ ಮೊದಲು ಬಿಜೆಪಿಯವರು ಜೆಡಿಎಸ್ ಪಕ್ಷದ ಖರ್ಚಿಗಾಗಿ ಹೆಚ್ಚಿನ ಹಣವನ್ನು ನೀಡಲು ಸಿದ್ಧರಾಗಿದ್ದರು' ಎಂದು ಹೇಳಿದರು.

'ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಂಬೈನಲ್ಲಿ ಬಂದು ಭೇಟಿ ಮಾಡುವಂತೆ ಬಿಜೆಪಿ ಒತ್ತಡ ಹಾಕಿತ್ತು. ಅಲ್ಲಿಯೇ ಹಣವನ್ನು ಸಂಗ್ರಹಿಸಿ ಇಡಲಾಗಿತ್ತು. ಆದರೆ, ಕುಮಾರಸ್ವಾಮಿ ಅವರು ಇದನ್ನು ತಳ್ಳಿ ಹಾಕಿದರು' ಎಂದು ದೇವೇಗೌಡರು ತಿಳಿಸಿದರು.
2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 104 ಸ್ಥಾನಗಳಲ್ಲಿ ಜಯಗಳಿಸಿದೆ. ಆದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡ ಕಾರಣ ಬಿಜೆಪಿಗೆ ಅಧಿಕಾರ ಕೈ ತಪ್ಪಿದೆ. ಕೇವಲ 37 ಶಾಸಕರು ಗೆದ್ದರೂ ಜೆಡಿಎಸ್‌ನ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾರೆ.
ಕರ್ನಾಟಕದಲ್ಲಿ ಪ್ರತಿಪಕ್ಷವಾಗಿರುವ ಬಿಜೆಪಿ ಕಾಂಗ್ರೆಸ್ ಮತ್ತು ಜೆಡಿಎಸ್‌ನದ್ದು ಅಪವಿತ್ರ ಮೈತ್ರಿ. ಜನರ ಆದೇಶಕ್ಕೆ ವಿರುದ್ಧವಾದ ನಡೆ ಎಂದು ಆರೋಪಿಸುತ್ತಿದೆ.












Click it and Unblock the Notifications