ಸೋನಿಯಾ, ರಾಹುಲ್ ಗಾಂಧಿ ಅರೆಬೆತ್ತಲೆ ಫಕೀರರಾ? ಸಿ. ಟಿ. ರವಿ ಪ್ರಶ್ನೆ

ಬೆಂಗಳೂರು, ಜೂನ್ 14: ಇಡಿ ಅಧಿಕಾರಿಗಳು ನಡೆಸುತ್ತಿರುವ ರಾಹುಲ್ ಗಾಂಧಿ ವಿಚಾರಣೆ ಮತ್ತು ಇದಕ್ಕೆ ಪ್ರತಿಭಟನೆಯ ಹಾದಿ ಹಿಡಿದಿರುವ ಕಾಂಗ್ರೆಸ್ ಮುಖಂಡರ ಬಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ. ಟಿ. ರವಿ ವ್ಯಂಗ್ಯವಾಡಿದರು.

ಮಾಧ್ಯಮವರೊಂದಿಗೆ ಮಾತನಾಡಿದ ಅವರು,"ಸುಬ್ರಮಣಿಯನ್ ಸ್ವಾಮಿಯವರು ಬೆನ್ನು ಹಿಡಿದ ಬೇತಾಳದ ರೀತಿಯಲ್ಲಿ ಅಕ್ರಮವನ್ನು ಬಯಲುಗೆಳೆದಿದ್ದಾರೆ. ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅಕ್ರಮ ನಡೆಸದೇ ಇದ್ದಿದ್ದರೆ ಈ ಪರಿಸ್ಥಿತಿ ಯಾಕೆ ಬರುತ್ತಿತ್ತು? ಇವರೇನು ಮಹಾತ್ಮ ಗಾಂಧಿಯ ರೀತಿಯಲ್ಲಿ ಅರೆಬೆತ್ತಲೆ ಫಕೀರರಾ"ಎಂದು ಸಿ. ಟಿ. ರವಿ ಪ್ರಶ್ನಿಸಿದರು.

"ಮಹಾತ್ಮ ಗಾಂಧೀಜಿವರು ಈ ರೀತಿಯ ಕೆಲಸವನ್ನು ಮಾಡಿರಲಿಲ್ಲ, ಅವರು (ಸೋನಿಯಾ, ರಾಹುಲ್) ಗಾಂಧಿ ಎಂದು ಹೆಸರು ಇಟ್ಟುಕೊಳ್ಳುವುದೇ ಒಂದು ಅಪಮಾನ. ಕ್ರಿಮಿನಲ್ ತಪ್ಪು ಮಾಡಿದವರನ್ನೂ ವಿಚಾರಣೆ ನಡೆಸಬಾರದೆಂದರೆ, ಸಂವಿಧಾನದಲ್ಲೇ ಬದಲಾವಣೆಯನ್ನು ತರಬೇಕಾಗುತ್ತದೆ"ಎಂದು ಸಿ. ಟಿ. ರವಿ ಆಕ್ರೋಶ ಹೊರಹಾಕಿದರು.

BJP National General Secretary CT Ravi Reaction On Rahul Gandhi ED Enquiry, Congress Protest

"ಗಾಂಧಿ ಹೆಸರನ್ನು ಇಟ್ಟುಕೊಂಡು ಮಹಾತ್ಮ ಗಾಂಧೀಜಿ ಹೆಸರಿಗೆ ಅಪಚಾರ ಮಾಡುತ್ತಿದ್ದಾರೆ. ಇವರು ಗಾಂಧಿಯಲ್ಲ ಬದಲಿಗೆ ಗ್ಯಾಂಡಿ, ರಾಹುಲ್ ಗಾಂಧಿಯವರ ತಾತ ಫಿರೋಜ್ ಗ್ಯಾಂಡಿ. ಸಾರ್ವಜನಿಕರು ಇವರೆಲ್ಲಾ ಮಹಾತ್ಮ ಗಾಂಧೀಜಿ ಕುಟುಂಬದವರು ಎಂದು ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಾರೆ"ಎಂದು ಸಿ. ಟಿ. ರವಿ ಹೇಳಿದರು.

"ಗಾಂಧೀಜಿಯವರು ಸತ್ಯದ ಪರವಾಗಿ ಸತ್ಯಾಗ್ರಹ ಮಾಡಿದರೆ, ಇವರು ಭ್ರಷ್ಟಾಚಾರವನ್ನು ಮುಚ್ಚಿಕೊಳ್ಳಲು ಬೀದಿಯಲ್ಲಿ ನಿಂತು ಚಳುವಳಿಯನ್ನು ಮಾಡುತ್ತಿದ್ದಾರೆ. ಇವರ ಹುನ್ನಾರವೇನು, ಭ್ರಷ್ಟಾಚಾರಕ್ಕೆ ಅನುಮತಿ ನೀಡಬೇಕೆನ್ನುವುದಾ"ಎಂದು ಸಿ. ಟಿ. ರವಿ, ಕಾಂಗ್ರೆಸ್ ಮುಖಂಡರನ್ನು ಪ್ರಶ್ನಿಸಿದ್ದಾರೆ.

"ಕನಿಷ್ಠ ಎರಡರಿಂದ ಐದು ಸಾವಿರ ಕೋಟಿ ವ್ಯಾಲ್ಯೂಯೇಶನ್ ಇದೆ ಎಂದು ಮಾತನಾಡುತ್ತಾರೆ, ಯಂಗ್ ಇಂಡಿಯಾ ಎನ್ನುವ ಕಂಪೆನಿಗೆ ಅಕ್ರಮವಾಗಿ ಹಣ ವರ್ಗಾವಣೆಯಾದರೆ, ಅದು ಹಗಲು ದರೋಡೆಯಲ್ಲದೇ ಮತ್ತಿನ್ನೇನು. ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಅವರೇ ನಿಮ್ಮ ಲೆಕ್ಕದಲ್ಲಿ ಇದು ತಪ್ಪಲ್ಲವಾ"ಎಂದು ಸಿ .ಟಿ. ರವಿ ಕಿಡಿಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+