ಹಣೆಯಲ್ಲಿ ಕುಂಕುಮ ಇಡದಕ್ಕೆ ಮಹಿಳೆಯನ್ನು ನಿಂದಿಸಿದ ಬಿಜೆಪಿ ಸಂಸದ ಮುನಿಸ್ವಾಮಿ

ಮುನಿಸ್ವಾಮಿ ಅವರು ನೀನು ಅಂಗಡಿಗೆ ವೈಷ್ಣವಿ ಎಂದು ಹೆಸರಿದ್ದೀಯಾ, ನಿನ್ನ ಗಂಡ ಬದುಕಿದ್ದಾನೆ ತಾನೇ ಮತ್ತೇ ಏಕೆ ಹಣೆಗೆ ಕುಂಕುಮ ಇಟ್ಟಿಲ್ಲ? ನಿನಗೆ ಕಾಮಾನ್‌ ಸೆನ್ಸ್‌ ಇಲ್ಲವಾ ಎಂದು ಬೈದಿದ್ದಾರೆ.

ಕೋಲಾರ, ಮಾರ್ಚ್‌ 9: ಹಣೆಯಲ್ಲಿ ಕುಂಕುಮ ಇಡದ ಮಹಿಳೆಗೆ ಮಹಿಳಾ ದಿನಾಚರಣೆಯಂದೇ ಕೋಲಾರ ಬಿಜೆಪಿ ಸಂಸದ ಮುನಿಸ್ವಾಮಿ ಏಕವಚನದಲ್ಲಿ ನಿಂದಿಸಿರುವ ಘಟನೆ ನಡೆದಿದೆ.

ರಸ್ತೆ ಬದಿಯಲ್ಲಿ ಅಂಗಡಿ ಇಟ್ಟುಕೊಂಡಿದ್ದ ಮಹಿಳೆಯೊಬ್ಬರು ವ್ಯಾಪಾರ ಮಾಡುತ್ತಿದ್ದಾಗ ಅಲ್ಲಿಗೆ ಹೋದ ಸಂಸದ ಮುನಿಸ್ವಾಮಿ ಅವರು ನೀನು ಅಂಗಡಿಗೆ ವೈಷ್ಣವಿ ಎಂದು ಹೆಸರಿದ್ದೀಯಾ, ನಿನ್ನ ಗಂಡ ಬದುಕಿದ್ದಾನೆ ತಾನೇ ಮತ್ತೇ ಏಕೆ ಹಣೆಗೆ ಕುಂಕುಮ ಇಟ್ಟಿಲ್ಲ? ನಿನಗೆ ಕಾಮಾನ್‌ ಸೆನ್ಸ್‌ ಇಲ್ಲವಾ ಎಂದು ಬೈದಿದ್ದಾರೆ. ಹೀಗೆ ಸಂಸದ ಮುನಿಸ್ವಾಮಿ ಅವರು ಬೈಯುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಸಂಸದ ಮುನಿಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

BJP MP Muniswamy scolds a married women for not wearing bindi; Video Goes Viral

ಕೋಲಾರ ನಗರದ ಟಿ ಚೆನ್ನಯ್ಯ ರಂಗಮಂದಿರದಲ್ಲಿ ಮಹಿಳಾ ದಿನಾಚರಣೆ ಆಯೋಜನೆ ಮಾಡಲಾಗಿತ್ತು. ಮಹಿಳಾ ದಿನಾಚರಣೆ ಅಂಗವಾಗಿ ಮಾರಾಟ ಮಳಿಗೆಗಳನ್ನು ಮಹಿಳೆಯರಿಗಾಗಿಯೇ ಅವಕಾಶ ಮಾಡಿಕೊಡಲಾಗಿತ್ತು. ಈ ವೇಳೆ ಮಳಿಗೆಗಳ ವೀಕ್ಷಣೆ ಬಂದ ಸಂಸದ ಮುನಿಸ್ವಾಮಿ ಸ್ಥಳದಲ್ಲಿ ಅಂಗಡಿ ಹಾಕಿಕೊಂಡಿದ್ದ ಮಹಿಳೆಯನ್ನು ಕಂಡು ಗರಂ ಆದರು. ವೈಷ್ಣವಿ ಎಂಬ ಹೆಸರಿನ ಅಂಗಡಿ ಬಳಿ ಬಂದಾಗ ಆ ಮಹಿಳೆಯೊಂದಿಗೆ ಮಾತನಾಡುವಾಗ ಅವರು ಹಣೆಗೆ ಕುಂಕುಮ ಇಡದಿರುವುದನ್ನು ಗಮನಿಸಿದರು.

ಮುಳುಬಾಗಿಲು ಪಟ್ಟಣದ ನಿವಾಸಿಯಾದ ಸುಜಾತ ಎಂಬುವವರು ಅಂಗಡಿಯನ್ನು ಇಟ್ಟುಕೊಂಡಿದ್ದರು. ಆಗ ಮುನಿಸ್ವಾಮಿ ಮಹಿಳೆ ಸುಜಾತ ಎಂಬುವವರೊಂದಿಗೆ ಏನಮ್ಮ ನಿನ್ನ ಹೆಸರು ಹಣೆಗೆ ಕುಂಕುಮ ಏಕೆ ಇಟ್ಟಿಲ್ಲ. ವೈಷ್ಣವಿ ಎಂದು ಅಂಗಡಿಗೆ ಹೆಸರು ಇಟ್ಟಿದ್ದೀಯಾ, ಹಣೆಗೆ ಬೊಟ್ಟು ಏಕೆ ಇಟ್ಟಿಲ್ಲ, ಮೊದಲು ಹಣೆಗೆ ಬೊಟ್ಟು ಇಟ್ಟುಕೊ ಎಂದು ಅಲ್ಲೇ ಪಕ್ಕದಲ್ಲಿದ್ದ ಮಹಿಳೆಯೊಬ್ಬರಿಗೆ ಬೊಟ್ಟು ಕೊಡಮ್ಮ ಅಯಮ್ಮನಿಗೆ ಎಂದು ಗದರಿದರು.

ಗಂಡ ಬದುಕಿದ್ದಾನೆ ತಾನೇ ನಿನಗೆ ಮತ್ತೆ ಕಾಮನ್‌ ಸೆನ್ಸ್‌ ಇಲ್ಲವಾ ನಿನಗೆ. ನಿನ್ನ ತಂದೆ ಹೆಸರು ಬದಲಾಯಿಸುತ್ತೀಯಾ ನೀನು ಎಂದು ಪ್ರಶ್ನಿಸಿದರು. ಆಗ ಮಹಿಳೆ ಗಾಬರಿಗೊಂಡು ಸಂಸದರಿಗೆ ಉತ್ತರಿಸಲಾಗದೆ ಮಹಿಳೆ ತಡಬಡಾಯಿಸಿ ಪೇಚಿಗೆ ಒಳಗಾದರು. ತಮ್ಮ ಅಸಮಾಧಾನದ ಮಾತು ಮುಂದಿವರೆಸಿದ ಮುನಿಸ್ವಾಮಿ ಹಣದಾಸೆಗೆ ಮಾತಾಂತರ ಆಗಿದ್ದೀಯಾ ಹೇಗೆ ಎಂದು ಪ್ರಶ್ನೆ ಮಾಡಿದರು. ಈ ವೇಳೆ ವಿಧಾನಪರಿಷತ್‌ ಸದಸ್ಯ ಗೋವಿಂದರಾಜು ಸಂಸದ ಮುನಿಸ್ವಾಮಿ ಅವರನ್ನು ಸಮಾಧಾನಪಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+