ಬರಪರಿಹಾರ ನಿಧಿಗೆ ಬಿಜೆಪಿ ಸದಸ್ಯರ ತಿಂಗಳ ಸಂಬಳ

Posted By:
Subscribe to Oneindia Kannada

ಬೆಂಗಳೂರು, ಏಪ್ರಿಲ್ 19 : ಈ ವರ್ಷ ಭೀಕರ ಬರಗಾಲಕ್ಕೆ ತತ್ತರಿಸಿದೆ. ಕುಡಿಯುವ ನೀರಿರಲಿ ಬಳಕೆಗೂ ಹನಿ ನೀರಿಲ್ಲದಂತಾಗಿದೆ ಹಲವಾರು ಗ್ರಾಮಗಳಲ್ಲಿ. ಮಳೆಯ ಸುಳಿವಿಲ್ಲ, ದನಕರುಗಳಿಗೆ ಮೇವಂತೂ ಇಲ್ಲವೇ ಇಲ್ಲ. ಅದರಲ್ಲೂ ಉತ್ತರ ಕರ್ನಾಟಕದ ಸ್ಥಿತಿ ಚಿಂತಾಜನಕವಾಗಿದೆ.

ಇಂಥ ಸಮಯದಲ್ಲಿ ತಮ್ಮ ಒಂದು ತಿಂಗಳ ವೇತನವನ್ನು 'ಬರಪರಿಹಾರ ನಿಧಿ'ಗೆ ನೀಡಲು ಭಾರತೀಯ ಜನತಾ ಪಕ್ಷದ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ನಿರ್ಧರಿಸಿದ್ದಾರೆ. ಈ ಕುರಿತಂತೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಸೂಚನೆ ನೀಡಿದ್ದಾರೆ.

ಕಳೆದ ವರ್ಷ ಈ ಸಮಯದಲ್ಲಿ ಸಾಕಷ್ಟು ಮಳೆ ಸುರಿದಿತ್ತು. ಆದರೆ, ಈ ವರ್ಷ ಮಳೆಯ ಸುಳಿವೇ ಇಲ್ಲ. ಅತ್ಯಧಿಕ ತಾಪಮಾನದಿಂದಾಗಿ ಕೆರೆ, ನದಿ, ಅಣೆಕಟ್ಟೆಗಳು ಒಣಗಿಹೋಗಿವೆ. ಬೆಳೆಗಳು ಸಂಪೂರ್ಣ ಕಮರಿಹೋಗಿವೆ. ಬರಪೀಡಿತ ಪ್ರದೇಶದ ಜನರು ಮಳೆಗಾಗಿ ಆಕಾಶ ಮಾತ್ರ ನೋಡುತ್ತಿಲ್ಲ, ಪರಿಹಾರಕ್ಕಾಗಿ ಸರಕಾರದತ್ತವೂ ನೋಡುತ್ತಿದ್ದಾರೆ. [ಮಳೆಯಿಲ್ಲ, ಬೆಳೆಯಿಲ್ಲ, ಉತ್ತರದ ಮಂದಿ ಹೊಂಟರು ಗುಳೆ]

BJP MLAs MPs to donate 1 month salary to Karnataka drought fund

ಇದು ಬಿಜೆಪಿ ಶಾಸಕರು, ಸಂಸದರು, ಪರಿಷತ್ ಸದಸ್ಯರ ನಿಲುವಾದರೆ ಉಳಿದ ಪಕ್ಷಗಳಾದ ಆಡಳಿತಾರಾಢ ಕಾಂಗ್ರೆಸ್, ಜಾತ್ಯತೀತ ಜನತಾದಳ ಸದಸ್ಯರ ನಿಲುವೇನು ಎಂಬುದು ಏನೆಂದು ತಿಳಿದುಬಂದಿಲ್ಲ. ಅವರು ಕೂಡ ಒಂದು ತಿಂಗಳ ಸಂಬಳವನ್ನು ಬರಪರಿಹಾರ ನಿಧಿಗೆ ನೀಡಿ ಪುಣ್ಯ ಕಟ್ಟಿಕೊಳ್ಳಲಿ.

ಸಿದ್ದರಾಮಯ್ಯನವರು ಬರಪೀಡಿತ ಉತ್ತರ ಕರ್ನಾಟಕದ ಜಿಲ್ಲೆಗಳಿಗೆ ಭೇಟಿಯ ಕಾರ್ಯಕ್ರಮ ಮುಗಿಸಿ ಬೆಂಗಳೂರಿಗೆ ಮರಳಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಇದೇ ಏಪ್ರಿಲ್ 27, ಗುರುವಾರದಿಂದ ಬರಪೀಡಿತ ಜಿಲ್ಲೆಗಳಿಗೆ ಭೇಟಿ ನೀಡುವವರಿದ್ದಾರೆ. ನಿರಾಣಿ ಅವರು ಉಡುಗೊರೆ ನೀಡಿದ್ದ ಕಾರನ್ನು ಮರಳಿಸಿರುವ ಅವರು, ರೈಲಿನ ಮುಖಾಂತರ ಪ್ರವಾಸ ಕೈಗೊಳ್ಳುವವರಿದ್ದಾರೆ. [ಏ.27ರಿಂದ ಐದು ದಿನ ಯಡಿಯೂರಪ್ಪ ಬರ ಪ್ರವಾಸ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka BJP MLAs, MPs, Vidhana Parishat members have decided to donate 1 month salary to Karnataka drought relief fund, as Karnataka is reeling under severe drought. Rain has failed, no drinking water in many drought affected taluks.
Please Wait while comments are loading...