BJP Mla: ಬಿಜೆಪಿ ಹೈಕಮಾಂಡ್ ವಿರುದ್ಧವೇ ಗುಡುಗಿದ ಬಸನಗೌಡ ಯತ್ನಾಳ್!

ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಬಿಜೆಪಿಯ ಹೈಕಮಾಂಡ್ ವಿರುದ್ಧವೇ ತಿರುಗಿ ಬಿದಿದ್ದಾರೆ. ಅಲ್ಲದೇ ಹೈಕಮಾಂಡ್‌ಗೆ ಈ ವಿಚಾರದಲ್ಲಿ ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ. ಕರ್ನಾಟಕದ ಮೂರು ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿ ಹಾಗೂ ಮೈತ್ರಿ ಪಕ್ಷ ಸೋಲುತ್ತಿದ್ದಂತೆಯೇ ಯತ್ನಾಳ್ ಅವರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಹಾಗೂ ಬಿಜೆಪಿ ಹೈಕಮಾಂಡ್‌ ವಿರುದ್ಧ ತಿರುಗಿ ಬಿದಿದ್ದಾರೆ. ರಾಜ್ಯದಲ್ಲಿ ಬಿಜೆಪಿಯ (ರಾಜ್ಯಾಧ್ಯಕ್ಷ) ಉಸ್ತುವಾರಿಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಮಗ ಬಿ.ವೈ ವಿಜಯೇಂದ್ರ ಅವರಿಗೆ ಕೊಟ್ಟಾಗಿನಿಂದಲೂ ಯತ್ನಾಳ ಗುಡುಗುತ್ತಲ್ಲೇ ಇದ್ದಾರೆ. ಇದೀಗ ಅವರ ಕೋಪ ಒಮ್ಮೆಲೆ ಸ್ಫೋಟಗೊಂಡಿದೆ.

ಇದೀಗ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ ಅವರು ಬೆಳಗಾವಿಯಲ್ಲಿ ಮೂರು ವಿಧಾನಸಭೆ ಉಪ ಚುನಾವಣೆಯ ಫಲಿತಾಂಶದ ಬಗ್ಗೆ ಮಾತನಾಡಿದ್ದಾರೆ. ಮೂರು ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗೆ (ಮೈತ್ರಿ ಪಕ್ಷಗಳಿಗೆ) ಸೋಲಾಗಿದೆ. ಇದನ್ನು ನನ್ನ (ಯಾಕೆ ಈ ರೀತಿ ಆಯ್ತು ಎನ್ನುವುದನ್ನು) ಬಳಿ ಯಾಕೆ ಕೇಳ್ತೀರಿ ರಾಜ್ಯಾಧ್ಯಕ್ಷರಿಗೆ ಈ ಪ್ರಶ್ನೆ ಕೇಳ್ರೀ ಎಂದಿದ್ದಾರೆ. ವಿಜಯೇಂದ್ರ ಅವರ ನಾಯಕತ್ವ ಜನರು ಒಪ್ಪಿದ್ದಾರೋ ಇಲ್ಲವೋ ಅವರಿಗೆ ಗೊತ್ತು ಎಂದು ವ್ಯಂಗ್ಯವಾಡಿದ್ದಾರೆ.

BJP Mla Basanagouda Yatnal thundered against the BJP high command

ನಿನ್ನೆ ದೆಹಲಿಯಲ್ಲಿ ಹೇಳಿದ್ದ (ವಿಜಯೇಂದ್ರ) ಎಲ್ಲಾ ಬಾಗಿಲು ಬಂದಾಗ್ಲಿದೆ. ಒಂದೇ ಬಾಗಿಲು ಇರುತ್ತೆ ಎಂದು. ಎಲ್ಲಾ ಬಾಗಿಲು ಬಂದಾಗಿ, ಬಿಜೆಪಿಗೆ ಇಂತಹ ಹೀನಾಯ ಸೋಲು ಆಗಿದೆ. ಈ ಬಗ್ಗೆ ನಮಗೂ ದುಃಖವಿದೆ. ಅವರ ಒಳ ಒಪ್ಪಂದದಿಂದ ಬಿಜೆಪಿಗೆ ಈ ದುಸ್ಥಿತಿ ಬರ್ತಿದೆ ಎಂದು ವಿಜಯೇಂದ್ರ ಅವರ ಹೆಸರನ್ನು ಉಲ್ಲೇಖಿಸದೆ ಯತ್ನಾಳ್ ಅವರು ವಾಗ್ದಾಳಿ ನಡೆಸಿದ್ದಾರೆ.

ಹೈಕಮಾಂಡ್ ಗಮನಿಸಲಿ

ಇನ್ನು ಯತ್ನಾಳ್‌ ಅವರು ಇದೇ ಸಂದರ್ಭದಲ್ಲಿ ಬಿಜೆಪಿ ಹೈಕಮಾಂಡ್ ಬಗ್ಗೆಯೂ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಹೈಕಮಾಂಡ್ ರಾಜ್ಯಕ್ಕೆ ಉಸ್ತುವಾರಿಯಾಗಿ ನೇಮಿಸುವಾಗ ಪ್ರಾಮಾಣಿಕರು ಹಾಗೂ ಸಂಸ್ಕಾರ ಇದ್ದವವರನ್ನು ನೇಮಿಸಬೇಕು.

ಈ ಹಿಂದೆ ಅರುಣ್‌ಸಿಂಗ್ ಎನ್ನುವ ನಾಯಕನಿದ್ದ. ಆತ ಯಡಿಯೂರಪ್ಪ ಹಾಗೂ ವಿಜಯೇಂದ್ರ ಸಂದೇಶಕಾರಕನಾಗಿ ಕೆಲಸ ಮಾಡಿದ್ದರ ಪರಿಣಾಮ ಇದು ಎಂದು ಹೇಳಿದ್ದಾರೆ. ಈ ಫಲಿತಾಂಶ ಕರ್ನಾಟಕದಲ್ಲಿ ವಿಜಯೇಂದ್ರ ಮಾಡಿದನ್ನ ಜನ ತಿರಸ್ಕಾರ ಮಾಡಿದ್ದಾರೆ.

ಬಿಜೆಪಿ ಹೈಕಮಾಂಡ್ ಇನ್ನಾದರೂ ಪೂಜ್ಯ ತಂದೆ ಹಾಗೂ ಮಗನ (ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ) ವ್ಯಾಮೋಹವನ್ನು ಬಿಡಬೇಕು ಎಂದು ವಿನಂತಿ ಮಾಡ್ತೀನಿ ಎಂದು ಹೇಳಿದ್ದಾರೆ.

ವಕ್ಫ ಬೋರ್ಡ್ ಚುನಾವಣೆಯಲ್ಲಿ ವರ್ಕೌಟ್ ಆಗಲಿಲ್ಲವೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಅವರು, ವಕ್ಫ್ ಬೋರ್ಡ್ ಈಗ ಆರಂಭವಾಗಿದೆ. ಇನ್ನೂ ಜನರಿಗೆ ಗೊತ್ತಗಬೇಕಿದೆ. ಅದೇ ಮಹಾರಾಷ್ಟ್ರದ ವಕ್ಫ್ ಬೋರ್ಡ ವಿಚಾರವಾಗಿಯೇ ಚುನಾವಣೆ ಮಾಡಿದ್ದರು. ಉದ್ಭವ್‌ ಠಾಕ್ರೆ ಔರಂಗಜೇಬ್ ಸಮಾಧಿಗೆ ಹೋಗಿ ನಮಸ್ಕಾರ ಮಾಡಿದ್ದರು. ಈಗ ಅವರ ಪಕ್ಷ ಹೀನಾಯ ಸೋಲು ಕಂಡಿದೆ.

ಮಹಾರಾಷ್ಟ್ರ ಹಾಗೂ ಜಾರ್ಖಂಡ್‌ನಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದೆ. ಆದರೆ, ಕರ್ನಾಟಕದಲ್ಲಿ ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ (ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ) ಕಾರಣ ಎಂದು ಯತ್ನಾಳ್‌ ಹೆಸರು ಉಲ್ಲೇಖಿಸದೆ ಪರೋಕ್ಷ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.

ಕರ್ನಾಟಕದಲ್ಲಿ ಮೂರು ವಿಧಾನಸಭೆ ಚುನಾವಣೆ ಮುಕ್ತಾಯವಾಗುತ್ತಿದ್ದಂತೆಯೇ ಬಿಜೆಪಿಯಲ್ಲಿ ಅಸಮಾಧಾನ ಬುಗಿಲೆದ್ದಿದೆ. ರಾಜ್ಯ ವಿಧಾನಸಭೆಯಲ್ಲಿ ಹೀನಾಯ ಸೋಲು ಕಂಡಿದ್ದ ಬಿಜೆಪಿ, ಲೋಕಸಭೆ ಚುನಾವಣೆಯಲ್ಲಿ ಸಮಾಧಾನಕರ ಸಾಧನೆ ಮಾಡಿ ನಿಟ್ಟುಸಿರು ಬಿಟ್ಟಿತ್ತು. ಆದರೆ, ಈಗ ಮತ್ತೆ ಸೋಲಿನ ಸುಳಿಯಲ್ಲಿ ಸಿಲುಕಿದೆ. ಈ ನಡುವೆ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟ ಹೆಚ್ಚಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+