ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಪಚುನಾವಣೆಯಲ್ಲಿ ಸೋತ ಬಿಜೆಪಿ ಲೋಕಸಭೆ ಚುನಾವಣೆಯಲ್ಲೂ ಸೋಲುತ್ತದೆಯೇ?

|
Google Oneindia Kannada News

ಬೆಂಗಳೂರು, ನವೆಂಬರ್ 06: ಉಪಚುನಾವಣೆಗಳಲ್ಲಿ ಯಾವ ಪಕ್ಷ ಗೆಲ್ಲುತ್ತದೆಯೋ ಆ ಪಕ್ಷ ಹೇಳುವ ಒಂದು ಮಾತೆಂದರೆ ಇದು ಮುಂದಿನ ಚುನಾವಣೆಗೆ ದಿಕ್ಸೂಚಿ ಎಂದು, ಸೋತ ಪಕ್ಷ ಅದು ಹಾಗಲ್ಲವೆಂದು ವಾದಿಸುತ್ತದೆ. ಹಾಗಿದ್ದರೆ ಯಾರ ವಾದ ನಿಜ.

ಸಾಮಾನ್ಯವಾಗಿ ಉಪಚುನಾವಣೆಗಳು ಸಾರ್ವತ್ರಿಕ ಚುನಾವಣೆಗೆ ದಿಕ್ಸೂಚಿ ಆಗಿರುವುದು ಅತ್ಯಂತ ವಿರಳ. ಉಪಚುನಾವಣೆಯಲ್ಲಿ ಬಂದ ಫಲಿತಾಂಶಕ್ಕೆ ಸಂಪೂರ್ಣ ವಿರುದ್ಧವಾದ ಫಲಿತಾಂಶ ಮುಖ್ಯ ಚುನಾವಣೆಯಲ್ಲಿ ಬಂದಿರುವ ಉದಾಹರಣೆ ಹೆಚ್ಚಿಗೆ ಇದೆ.

5 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ : ಯಾರಿಗೆ ಎಷ್ಟು ಮತಗಳು?5 ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ : ಯಾರಿಗೆ ಎಷ್ಟು ಮತಗಳು?

2014 ರಲ್ಲಿ ಭಾರಿ ಬಹುಮತದಿಂದ ಆಯ್ಕೆಯಾದ ಬಿಜೆಪಿ ಆ ನಂತರ ನಡೆದ ಬಹುತೇಕ ಉಪಚುನಾವಣೆಯಲ್ಲಿ ಸೋಲನ್ನೆ ಕಂಡಿತು. ಆದರೆ ವಿಧಾನಸಭಾ ಚುನಾವಣೆಗಳಲ್ಲಿ ಜಯಗಳಿಸಿತು. ಕಾಂಗ್ರೆಸ್‌ ಅನ್ನು ಮೂಲೆಗುಂಪು ಮಾಡಿತು.

ಇಂತಹಾ ಹತ್ತು ಹಲವು ಉದಾಹರಣೆಗಳು ಇವೆ. ಆಡಳಿತದಲ್ಲಿರುವ ಪಕ್ಷ ಉಪಚುನಾವಣೆಯನ್ನು ಗೆದ್ದು ಆ ನಂತರ ಮುಖ್ಯ ಚುನಾವಣೆಯಲ್ಲಿ ಮಖಾಡೆ ಮಲಗಿರುವ ಉದಾಹರಣೆಗಳು ಕರ್ನಾಟದಲ್ಲಿಯಂತೂ ಹೆಚ್ಚಿಗೆ ಇವೆ.

ಉಪಚುನಾವಣೆಗಳು ದಿಕ್ಸೂಚಿಗಳಲ್ಲ ಏಕೆ?

ಉಪಚುನಾವಣೆಗಳು ದಿಕ್ಸೂಚಿಗಳಲ್ಲ ಏಕೆ?

ಸಾರ್ವತ್ರಿಕ ಚುನಾವಣೆಗಳು ನಡೆದಾಗ ಉದ್ದೇಶ, ಧ್ಯೇಯ, ವಿಷಯಗಳು, ಚರ್ಚೆ ಎಲ್ಲವೂ ಸಾರ್ವತ್ರಿಕ ಮಟ್ಟದ್ದೇ ಆಗಿರುತ್ತದೆ. ವಿಧಾನಸಭೆ ಆದರೆ ರಾಜ್ಯದ ಲೋಕ ಸಭೆ ಆದರೆ ಕೇಂದ್ರದ ಆಡಳಿತ ಪಕ್ಷಗಳ ಸಾಧನೆಗಳನ್ನು ಒರೆಗೆ ಹಚ್ಚಿ ಮತ ಚಲಾಯಿಸಲಾಗುತ್ತದೆ. ಆದರೆ ಉಪಚುನಾವಣೆಯಲ್ಲಿ ಆಯಾ ಕ್ಷೇತ್ರದ ವಿಷಯಗಳಷ್ಟೆ ಮುಂದಿರುತ್ತವೆ. ಅವನ್ನು ಬಿಟ್ಟು ಹೊರಗಿನದ್ದು ಚುನಾವಣೆ ವಿಷಯ ಆಗುವುದೇ ಇಲ್ಲ. ಹಾಗಾಗಿ ಉಪಚುನಾವಣೆ ಸಾರ್ವತ್ರಿಕ ಚುನಾವಣೆಯ ದಿಕ್ಸೂಚಿ ಅಲ್ಲ ಎನ್ನಬಹುದು.

ಸಿದ್ದರಾಮಯ್ಯ ಅವರು ಅನುಭವಿಸಿದ್ದಾರೆ

ಸಿದ್ದರಾಮಯ್ಯ ಅವರು ಅನುಭವಿಸಿದ್ದಾರೆ

ಕರ್ನಾಟಕದಲ್ಲಿ ಸಹ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ನೆನಪಿದೆಯೇ ಸಿದ್ದರಾಮಯ್ಯ ಅವರು ನೂರಾರು ಬಾರಿ ಹೇಳಿದ್ದರು ಇದು ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ ಎಂದು, ಆ ಉಪಚುನಾವಣೆಯಲ್ಲಿ ಕಾಂಗ್ರೆಸ್‌ ಗೆದ್ದಿತು, ಬಿಜೆಪಿ ಸೋತಿತು ಆದರೆ ವಿಧಾನಸಭೆ ಚುನಾವಣೆ ಫಲಿತಾಂಶ ಬೇರಯದ್ದೇ ಆಯಿತು.

ಬಳ್ಳಾರಿಯಲ್ಲಿ ಬಿದ್ದ ಬಿಜೆಪಿಯ ಗಾಯಕ್ಕೆ ಉಪ್ಪು ಸವರಿದ ಸಿದ್ದರಾಮಯ್ಯ ಟ್ವೀಟ್‌ಬಳ್ಳಾರಿಯಲ್ಲಿ ಬಿದ್ದ ಬಿಜೆಪಿಯ ಗಾಯಕ್ಕೆ ಉಪ್ಪು ಸವರಿದ ಸಿದ್ದರಾಮಯ್ಯ ಟ್ವೀಟ್‌

ಯಡಿಯೂರಪ್ಪ ಸಮಯದಲ್ಲೂ ಇದೇ ಆಗಿತ್ತು

ಯಡಿಯೂರಪ್ಪ ಸಮಯದಲ್ಲೂ ಇದೇ ಆಗಿತ್ತು

ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗಿದ್ದಾಗ 16 ಕ್ಷೇತ್ರಗಳಿಗೆ ಉಪಚುನಾವಣೆ ನಡೆದಿತ್ತು. ಅದರಲ್ಲಿ ಕಾಂಗ್ರೆಸ್ ಗೆದ್ದಿದ್ದು ಕೇವಲ ಒಂದು ಕ್ಷೇತ್ರ. ಆದರೆ ವಿಧಾನಸಭೆ ಚುನಾವಣೆ ನಡೆದಾಗ ಪೂರ್ಣ ವಿರುದ್ಧವಾದ ಫಲಿತಾಂಶ ಬಂತು. ಕಾಂಗ್ರೆಸ್‌ ಪಕ್ಷ ಬಹುಮತದೊಂದಿಗೆ ಆಡಳಿತದ ಚುಕ್ಕಾಣಿ ಹಿಡಿಯಿತು. ಬಿಜೆಪಿ ಮೂಲೆ ಸೇರಿಬಿಟ್ಟಿತು.

ಆಡಳಿತ ಪಕ್ಷ ಗೆಲ್ಲುವುದು ಸಾಮಾನ್ಯ

ಆಡಳಿತ ಪಕ್ಷ ಗೆಲ್ಲುವುದು ಸಾಮಾನ್ಯ

ಸಾಮಾನ್ಯವಾಗಿ ಉಪಚುನಾವಣೆಗಳಲ್ಲಿ ಆಡಳಿತಾರೂಢ ಪಕ್ಷ ಗೆಲುವು ಸಾಧಿಸುವುದು ನಡೆಯುತ್ತಲೇ ಬಂದಿದೆ. ಬಿಜೆಪಿ ಅಧಿಕಾರಿದಲ್ಲಿದ್ದಾಗ ಉಪಚುನಾವಣೆ ಗೆದ್ದಿದ್ದ ಬಿಜೆಪಿ ಆ ನಂತರ ಮುಗ್ಗರಿಸಿತ್ತು. ಕಾಂಗ್ರೆಸ್‌ ಕತೆಯೂ ಇದೆ. ಹಾಗಾಗಿ ಉಪಚುನಾವಣೆಯನ್ನು ಜನಾದೇಶ ಅಥವಾ ಪಕ್ಷದ ಪರ ಇಡೀಯ ರಾಜ್ಯದ ಅಥವಾ ದೇಶದ ಜನರ ಒಲವು ಎಂದುಕೊಳ್ಳುವುದು ಮೂಢತನ.

ಉಪಚುನಾವಣೆ ಫಲಿತಾಂಶ: ಬಹಿರಂಗವಾದ ಅಚ್ಚರಿ ಮಾಹಿತಿಉಪಚುನಾವಣೆ ಫಲಿತಾಂಶ: ಬಹಿರಂಗವಾದ ಅಚ್ಚರಿ ಮಾಹಿತಿ

ಈ ಉಪಚುನಾವಣೆ ಗೆಲುವು ನಿಷ್ಪ್ರಯೋಜಕವೇ?

ಈ ಉಪಚುನಾವಣೆ ಗೆಲುವು ನಿಷ್ಪ್ರಯೋಜಕವೇ?

ಮೈತ್ರಿ ಪಕ್ಷಗಳ ಈ ಉಪಚುನಾವಣೆ ಗೆಲುವು ನಿಶ್ಪ್ರಯೋಜಕ ಎಂದು ಯಾವ ಕಾಲಕ್ಕೂ ಹೇಳಲಾಗದು. ಒಗ್ಗಟ್ಟಾಗಿದ್ದರೆ ಬಿಜೆಪಿಯನ್ನು ಮಣಿಸುವುದು ಸುಲಭ ಎಂಬುದು ಈ ಚುನಾವಣೆಯಿಂದ ಮಿತ್ರ ಪಕ್ಷಗಳಿಗೆ ಅರಿವಾಗಿರುತ್ತದೆ. ಕಾರ್ಯಕರ್ತರಿಗೂ ಇದು ಅರಿವಾಗಿರುತ್ತದೆ. ಮೈತ್ರಿಯನ್ನು ಟೀಕಿಸುತ್ತಿದ್ದ ಬಿಜೆಪಿಗೆ ತಕ್ಕ ಉತ್ತರ ನೀಡಲು ಸಹ ಈ ಚುನಾವಣೆಯ ಫಲಿತಾಂಶವನ್ನು ಎರಡೂ ಪಕ್ಷಗಳ ಮುಖಂಡರು ಬಳಸಿಕೊಳ್ಳಲಿದ್ದಾರೆ.

5 ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳು5 ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣಗಳು

English summary
BJP party faces defeat in by election 2018. congress and jds saying that this result showing that people were against BJP. Is this statment true, Is BJP going to loose Lok Sabha elections 2019.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X