ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿದ್ದರಾಮಯ್ಯ ಹೆಣ ನಾಯಿನು ಮೂಸುವುದಿಲ್ಲ,ಅದನ್ನು ನಾವು ಯಾಕೆ ಮುಟ್ಟಬೇಕು: ಸಿದ್ದರಾಮಯ್ಯ ವಿರುದ್ದ ಈಶ್ವರಪ್ಪ ವಾಗ್ದಾಳಿ

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಚ್ಚರ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ. ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ ಎಂದು ಮಾಜಿ ಸಚಿವ ಕೆ ಎಸ್ ಈಶ್ವರಪ್ಪ ಕಿಡಿಕಾರಿದರು.

|
Google Oneindia Kannada News

ಶಿವಮೊಗ್ಗ,ಜನವರಿ31: ಸಿದ್ದರಾಮಯ್ಯ ಅವರನ್ನು ಜೀವಂತವಾಗಿ ಬಿಜೆಪಿಗೆ ಸೇರಿಸಿಕೊಳ್ಳುವುದಿಲ್ಲ.ಇನ್ನೂ ಸಿದ್ದು ಹೆಣ ತೆಗೆದುಕೊಂಡು ನಾವು ಏನು ಮಾಡಬೇಕು. ಅವರ ಹೆಣ ನಾಯಿನು ಮೂಸುವುದಿಲ್ಲ. ಅದನ್ನು ನಾವು ಯಾಕೆ ಮುಟ್ಟಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ವಾಗ್ದಾಳಿ ನಡೆಸಿದರು.

ಈ ಕುರಿತು ಮಂಗಳವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹುಚ್ಚರ ರೀತಿ ಮಾತನಾಡುವುದು ಶೋಭೆ ತರುವುದಿಲ್ಲ. ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ. ಸಿದ್ದರಾಮಯ್ಯ ಚಾಮುಂಡೇಶ್ವರದಲ್ಲಿ ಸೋತರು. ಬಾದಾಮಿ ಗೆ ಹೋದರೂ ಬಾರ್ಡರ್ ನಲ್ಲಿ ಗೆದ್ದರು. ಇನ್ನೂ ಅಲ್ಲಿ ಗೆಲ್ಲುವುದಿಲ್ಲ ಎನ್ನುವುದು ಗೊತ್ತಾಯಿತು. ಇನ್ನೂ ಕೋಲರದಲ್ಲಿ ಮನೆ ಹುಡುಕುತ್ತಿದ್ದಾರೆ, ಹುಡುಕಲಿ ನನ್ನದು ಅಭ್ಯಂತರ ಇಲ್ಲ ಎಂದು ಹೇಳಿದರು.

ಶಿವಮೊಗ್ಗ; ಸಹ್ಯಾದ್ರಿ ಕಾಲೇಜಿನಲ್ಲಿ ಫೆ.4ರಂದು ಉದ್ಯೋಗ ಮೇಳಶಿವಮೊಗ್ಗ; ಸಹ್ಯಾದ್ರಿ ಕಾಲೇಜಿನಲ್ಲಿ ಫೆ.4ರಂದು ಉದ್ಯೋಗ ಮೇಳ

ಒಬ್ಬ ವ್ಯಕ್ತಿ ಹತಾಶೆ ಆಗಿರುವುದು ಕಂಡು ಬರುತ್ತಿದೆ. ಅಲೆಮಾರಿಯಂತೆ ಕ್ಷೇತ್ರಕ್ಕಾಗಿ ಓಡಾಟ ನಡೆಸಿದ್ದಾರೆ. ಬಾದಾಮಿ ದೂರ ಆಗುವುದಿದ್ದರೆ ಮತ್ತೆ ಚಾಮುಂಡೇಶ್ವರಿಗೆ ವಾಪಸ್ ಹೋಗಿ. ಅದು ನಿಮ್ಮದೆ ಕ್ಷೇತ್ರ. ಅನೇಕ ಬಾರಿ ಅಲ್ಲಿಂದ ಗೆಲುವು ಆಗಿದೆ. ಅಲ್ಲಿ ಯಾಕೆ ಹೋಗುತ್ತಿಲ್ಲ. ಯಾಕೇ ಕೋಲಾರ ಹುಡುಕಿಕೊಂಡು ಹೊರಟಿದ್ದೀರಿ...? ಆಯಾ ಮತದಾರರಿಗೆ ನಿಮ್ಮ ಹಣೆಬರಹ ಗೊತ್ತು, ಈ ವ್ಯಕ್ತಿ ನಂಬಿಕಸ್ಥನಲ್ಲ ಎನ್ನುವುದು ಮತದಾರರಿಗೆ ಗೊತ್ತಾಗಿದೆ. ಈ ಹಿನ್ನಲೆಯಲ್ಲಿ ಸೋಲುವ ಭಯದಿಂದ ಸಿದ್ದರಾಮಯ್ಯ ಕ್ಷೇತ್ರದ ಹುಡುಕಾಟ ಮಾಡುತ್ತಿದ್ದಾರೆ ಎಂದು ಹೇಳಿದರು.

BJP leader KS Eshwarappa Slams former Chief Minister Siddaramaiah

ನಳಿನ ಕುಮಾರ್ ಕಟೀಲ್ ಬಫೂನ್ ಅಂತ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ತಮ್ಮ ಸ್ಥಾನದ ಗೌರವ ಉಳಿಸಿಕೊಳ್ಳ ಬೇಕಿರುವುದು ಸಿದ್ದರಾಮಯ್ಯ ಅವರ ಜವಾಬ್ದಾರಿ. ವಿಪಕ್ಷದ ನಾಯಕರು ಕೂಡಾ ಆಗಿದ್ದಾರೆ, ಆಡಳಿತ ಪಕ್ಷದ ಅಧ್ಯಕ್ಷರ ವಿರುದ್ಧ ಇಂತಹ ಪದ ಬಳಕೆ ಸರಿಯಲ್ಲ. ಇದರಿಂದ ನಮಗೆಲ್ಲರಿಗೂ ತುಂಬಾ ನೋವು ಆಗಿದೆ. ಅಂತಹ ಪದಗಳಿಗೆ ಉತ್ತರ ಕೊಡುವುದಕ್ಕೆ ನಮಗೆ ಬರುತ್ತದೆ. ಆದರೆ, ನಮ್ಮ ಪಕ್ಷದ ಸಂಸ್ಕೃತಿ ಅದಲ್ಲ. ಮತ್ತೆ ಇಂತಹ ಪದ ಬಳಕೆ ಮಾಡಿದರೆ ಯಾವ ರೀತಿ ಉತ್ತರ ಕೊಡಬೇಕು ಆ ರೀತಿ ಕೊಡುತ್ತೇವೆ ಎಂದು ವಾರ್ನಿಂಗ್ ನೀಡಿದರು.

ಡಿ.ಕೆ.ಶಿವಕುಮಾರ್ ಆಡಿಯೋ ಬಿಡುಗಡೆ ಮಾಡಿದ ರಮೇಶ್ ಜಾರಕಿಹೊಳಿ ವಿಚಾರವಾಗಿ ಉತ್ತರಿಸಿ, ಇಲ್ಲಿಯವರೆಗೆ ಡಿ.ಕೆ.ಶಿವಕುಮಾಜರ್ ಯಾವುದೇ ಉತ್ತರ ಕೊಟ್ಟಿಲ್ಲ. ತಲೆಹರಟೆ ಮಾತು ಏನೇನೋ ಹೇಳುತ್ತಿದ್ದಾರೆ. ಆ ಆಡಿಯೋ ಕುರಿತು ಉತ್ತರ ಏನು.? ಆಡಿಯೋದಲ್ಲಿ ಡಿ ಕೆ ಶಿವಕುಮಾರ್ ಅವರು 40 ಮತ್ತು 50 ಕೋಟಿ ಕುರಿತು ಅವರೇ ಒಪ್ಪಿಕೊಂಡಿದ್ದಾರೆ. ಯಾವ ಯಾವ ದೇಶದಲ್ಲಿ ನನ್ನ ಮನೆ ಇದೆ ಅಂತಾ. ಅದು ಅವರ ವೈಯಕ್ತಿಕ ಅದರ ಬಗ್ಗೆ ನಾನು ಮಾತನಾಡುವುದಿಲ್ಲ. ರಮೇಶ್ ಜಾರಕಿಹೊಳಿ ಹೇಳಿಕೆ ಮೊದಲು ಉತ್ತರ ಕೊಡಲಿ. ಇದು ಸರಿನೋ ತಪ್ಪು ಸುಳ್ಳೋ ಮೊದಲು ಉತ್ತರ ನೀಡಲಿ, ಅದು ಬಿಟ್ಟು ಬೇರೆ ಬೇರೆ ಉತ್ತರ ಕೊಡುತ್ತಿರುವುದು ಸರಿಯಲ್ಲ ಎಂದು ಹೇಳಿದರು.

ಭವಾನಿ ರೇವಣ್ಣ ಹಾಸನ ಅಭ್ಯರ್ಥಿ ಎಂಬ ವಿಚಾರವಾಗಿ ಮಾತನಾಡಿ, ಒಂದು ರಾಜಕೀಯ ಪಕ್ಷಕ್ಕೆ ರಾಜ್ಯಾಧ್ಯಕ್ಷರು, ಸಂವಿಧಾನ, ಚುನಾವಣೆ ಸಮಿತಿ ಇರುತ್ತೆ. ಅದು ಬಿಟ್ಟು ಇವರೇ ನಾನೇ ಅಭ್ಯರ್ಥಿ ಅಂತಾ ಘೋಷಣೆ ಮಾಡುತ್ತಿದ್ದಾರೆ. ಅನಿತಾ ಕುಮಾರಸ್ವಾಮಿ, ಮಗ ನಿಖಿಲ್ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ. ಭವಾನಿ ರೇವಣ್ಣ ನಾನೇ ಅಭ್ಯರ್ಥಿಯ ಅಂತಾ ಘೋಷಣೆ ಮಾಡಿದ್ದಾರೆ.

ಸಿದ್ದರಾಮಯ್ಯ ಕೋಲಾರಕ್ಕೆ ನಾನೇ ಅಭ್ಯರ್ಥಿ ಎಂದು ಹೇಳಿದ್ದಾರೆ. ಅದನ್ನು ಹೇಳಲು ಇವರು ಯಾರು.? ಅವರಿಗೆ ಪಕ್ಷ, ಚುನಾವಣೆ ಸಮಿತಿ ಇಲ್ಲವೇ ? ಚುನಾವಣೆ ಸಮಿತಿ ಹೇಳಿದರೆ ಸರಿ. ಇದು ಪ್ರಜಾಪ್ರಭುತ್ವ ಅಂತ ಮಾತನಾಡುವ ವ್ಯಕ್ತಿಗೆ. ಅದರ ಬಗ್ಗೆ ನಂಬಿಕೆ ಇಲ್ಲ. ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪಕ್ಷ ನೋಡಿದರೆ ಗೊತ್ತಾಗುತ್ತದೆ. ಯಾವ ಶಕುನಿಗಳು ಬೆನ್ನತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಲಿ, ಅವರು ತಿದ್ದಿಕೊಳ್ಳಲಿ ಇದು ಅವರ ಪಕ್ಷದ ಆಂತರಿಕ ವಿಚಾರ ಎಂದು ಈಶ್ವರಪ್ಪ ಹೇಳಿದರು.

English summary
karnataka assembly elections 2023; KS Eshwarappa said that Congress leaders are desperate
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X