ಪ್ರಜ್ವಲ್ ರೇವಣ್ಣನ ವಿಡಿಯೋ ಲೀಕ್ ಆಗಿದ್ದೇಗೆ? ಡಿಕೆಶಿ ಕೈ ಸೇರಿದ್ದು ಹೇಗೆ? ಬಹಿರಂಗ ಪಡಿಸಿದ ಬಿಜೆಪಿ ನಾಯಕ

ಹಾಸನ, ಏಪ್ರಿಲ್30: ಹಾಸನದಲ್ಲಿ ಭಾರೀ ಸದ್ದು ಮಾಡಿರುವ ಲೈಂಗಿಕ ದೌರ್ಜನ್ಯಗಳ ಪೆನ್ ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಜ್ವಲ್‌ ರೇವಣ್ಣ ಸದ್ಯ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಪ್ರಜ್ವಲ್‌ ರೇವಣ್ಣ ಅವರಿಗೆ ಶಿಕ್ಷೆಯಾಗಬೇಕು ಎಂದು ಕಾಂಗ್ರೆಸ್‌ ಹಾಸನದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರಕರಣದ ತನಿಖೆಯನ್ನು ಎಸ್​ಐಟಿ ನಡೆಸಿದೆ.

ಇನ್ನೂ ಈ ವಿಡಿಯೋಗಳು ಲೀಕ್‌ ಆಗಿದ್ದೇಗೆ? ಚುನಾವಣೆ ಸಮೀಪದಲ್ಲಿ ಈ ವಿಡಿಯೋಗಳನ್ನ ಯಾರು? ಯಾಕೆ ಮಾಡಿದ್ರು ಎನ್ನುವ ಹಲವು ಪ್ರಶ್ನೆಗಳಿ ಉದ್ಭವಿಸಿದ್ದು, ವಿಡಿಯೋ ಲೀಕ್ ಆಗಿರುವುದೇಗೆ ಎನ್ನುವುದನ್ನು ಹೊಳೆ ನರಸೀಪುರ ವಿಧಾನಸಭೆ ಕ್ಷೇತ್ರದ ಪರಾಜಿತ ಬಿಜೆಪಿ ಅಭ್ಯರ್ಥಿ, ವಕೀಲ ದೇವರಾಜೇಗೌಡ ಬಹಿರಂಗಪಡಿಸಿದ್ದಾರೆ.

BJP Leader Devarajegouda Reveals Who And How Leaked Prajwal Revanna Videos

ಈ ಕುರಿತು ಮಾಧ್ಯಮಗಳ ಜೊತೆಗೆ ದೇವರಾಜೇಗೌಡ ಅವರು ಮಾತನಾಡಿ, ವಿಡಿಯೋ ವಿಚಾರ 2023 ರಲ್ಲೇ ಬಂದಿತ್ತು. ಆದರೆ, ಪ್ರಜ್ವಲ್ ರೇವಣ್ಣ ನ್ಯಾಯಾಲಯದಲ್ಲಿ ಸ್ಟೇ ಪಡೆದುಕೊಂಡಿದ್ದರು. ಈ ಹಿಂದೆ ಪ್ರಜ್ವಲ್‌ ರೇವಣ್ಣ ಅವರ ಕಾರು ಚಾಲಕ ಕಾರ್ತಿಕ್ ಮೇಲೂ ಸ್ಟೇ ಪಡೆದಿದ್ದರು. ಈ ವೇಳೆ ಕಾರ್ತಿಕ್ ನನ್ನ ಬಳಿಗೆ ಬಂದು ವಕಾಲತ್ತು ಹಾಕಿ ಎಂದಿದ್ದ, ಈ ವೇಳೆ ಪ್ರಜ್ವಲ್ ರೇವಣ್ಣನ ವಿಡಿಯೋಗಳನ್ನು ನೋಡಿದ್ದೆ ಎಂದು ಸ್ಫೋಟಕ ವಿಷಯವನ್ನ ಬಿಚ್ಚಿಟ್ಟಿದ್ದಾರೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಕಾರ್ತಿಕ್‌ ಬಂದು ನನ್ನ ಭೇಟಿ ಮಾಡಿದ ಸಂದರ್ಭದಲ್ಲಿ ಹಲವಾರು ಅಶ್ಲೀಲ ವೀಡಿಯೋ ಇತ್ತು. ನಂತರ ಈ ವಿಡಿಯೋ ಯಾರ್ಯಾರಿಗೆ ಕೊಟ್ಟಿದ್ದಿಯಾ ಎಂದು ಕಾರ್ತಿಕ್​ಗೆ ಕೇಳಿದ್ದೆ. ಅದಕ್ಕೆ ಆತ ಈಗಾಗಲೇ ವಿಡಿಯೋಗಳು ಡಿಕೆ ಶಿವಕುಮಾರ್ ಮತ್ತು ಡಿಕೆ ಸುರೇಶ್, ಸೇರಿ ಕೆಲ ಕಾಂಗ್ರೆಸ್ ಲೀಡರ್ ಗೆ ಹೋಗಿದೆ ಎಂದು ಹೇಳಿದ್ದ ಎಂದು ಅಚ್ಚರಿಯ ಹೇಳಿಕೆಯನ್ನ ನೀಡಿದ್ದಾರೆ. ಆದರೆ, ಈ ವಿಡಿಯೋ ಸಿಕ್ಕ ನಂತರ ಎರಡು ತಿಂಗಳಾದ್ದರೂ ಏನು ಮಾಡಿಲ್ಲಿಲ್ಲ. ಕೇಳಿದ್ರೆ ಇದನ್ನು ಯಾವಾಗ ಬಳಕೆ ಮಾಡಬೇಕು ಅನ್ನೊದು ಗೊತ್ತಿದೆ ಆಗ ಮಾಡುತ್ತೇನೆ ಎಂದು ಕಾರ್ತಿಕ್‌ ಹೇಳಿದ್ದ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ.

ಇನ್ನೂ ಈ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಗೃಹ ಸಚಿವರಾದ ಅಮಿತ್‌ ಶಾ ಅವರಿಗೆ ಪತ್ರ ಬರೆದು ಇ ಮೇಲ್ ಮಾಡಲಾಗಿತ್ತು. ಆದ್ರೆ ಇ ಮೇಲ್ ಡಿಲಿವರ್ ಆಗಿರಲಿಲ್ಲ. ನಂತರ ವಿಜೇಯೇಂದ್ರ ಅವರಿಗೂ ವಿಡಿಯೋ ಬಗ್ಗೆ ಪತ್ರ ಬರೆದು ಕಛೇರಿಗೆ ನೀಡಿದ್ದೆ ಅವರು ಹೇಳಿದಂತೆ ಪತ್ರ ಅವರಿಗೂ ತಲುಪಿಲ್ಲ ಎಂದು ಬಿಜೆಪಿ ಮುಖಂಡ ದೇವರಾಜೇಗೌಡ ಹೇಳಿದ್ದಾರೆ.

ಈ ತರಹದ ವಿಡಿಯೋಗಳನ್ನ ಮಾಡಿದ್ದು ದೊಡ್ಡ ತಪ್ಪು. ಅದೇ ರೀತಿ ಹೆಣ್ಣು ಮಕ್ಕಳ ವಿಡಿಯೋ ರಿಲೀಸ್ ಮಾಡಿದ್ದು ಸಹ ತಪ್ಪು. ಕಾರ್ಯಕ್ರಮ ಒಂದರಲ್ಲಿ ಸ್ಟೇಜ್ ಹತ್ತಲು ಬಿಡದೇ ಡರ್ಟಿ ಫೆಲೋ ಎಂದು ನಿಂದಿಸಿದ್ದ. ನಿನ್ನ ಮಗ ಕೋರ್ಟ್ ನಲ್ಲಿ ತೆಗೆದುಕೊಂಡಿರುವ ಸ್ಟೇ ವೆಕೇಟ್ ಮಾಡಿಸಿ ಮಹಿಳೆಯರ ಅನುಮತಿ ಕೊಡಿಸು ನಾನು ಎಲ್ ಇ ಡಿ ಪರದೆಯಲ್ಲಿ ಪ್ಲೇ ಮಾಡಿಸುತ್ತೆನೆ. ಆಗ ಯಾರು ಡರ್ಟಿ ಫೆಲೋ ಎಂದು ಆವಾಗಲೇ ನಾನು ರೇವಣ್ಣನಿಗೆ ಹೇಳಿದ್ದೆ ಎಂದು ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+