ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್ಸಿಗೆ ಆನಂದ್ ಸಿಂಗ್, ಬಿಜೆಪಿಗೆ ಡಿಕೆಶಿ ಟಾಂಗ್!

|
Google Oneindia Kannada News

Recommended Video

ಕಾಂಗ್ರೆಸ್ಸಿಗೆ ಆನಂದ್ ಸಿಂಗ್, ಬಿಜೆಪಿಗೆ ಡಿಕೆಶಿ ಟಾಂಗ್ | Oneindia Kannada

ಬೆಂಗಳೂರು, ಜನವರಿ 31 : ಮಾಜಿ ಸಚಿವ, ವಿಜಯನಗರ ಕ್ಷೇತ್ರದ ಮಾಜಿ ಶಾಸಕ ಆನಂದ್ ಸಿಂಗ್ ಕಾಂಗ್ರೆಸ್ ಸೇರಿದರು. ಶನಿವಾರ ಅವರು ಶಾಸಕ ಸ್ಥಾನ ಮತ್ತು ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಪರಮೇಶ್ವರ ಸಮ್ಮುಖದಲ್ಲಿ ಆನಂದ್ ಸಿಂಗ್ ತಮ್ಮ ಬೆಂಬಲಿಗರ ಜೊತೆ ಪಕ್ಷ ಸೇರ್ಪಡೆಯಾದರು.

ಶಾಸಕ ಸ್ಥಾನಕ್ಕೆ ಬಳ್ಳಾರಿಯ ಆನಂದ್ ಸಿಂಗ್ ರಾಜೀನಾಮೆ!ಶಾಸಕ ಸ್ಥಾನಕ್ಕೆ ಬಳ್ಳಾರಿಯ ಆನಂದ್ ಸಿಂಗ್ ರಾಜೀನಾಮೆ!

ಮಾಧ್ಯಮಗಳ ಜೊತೆ ಮಾತನಾಡಿದ ಸಿದ್ದರಾಮಯ್ಯ, 'ಕಾಂಗ್ರೆಸ್ ಪಕ್ಷದ ತತ್ವ, ಸಿದ್ದಾಂತ ಬಯಸಿ ಬರುವವರಿಗೆ ಸ್ವಾಗತ. ಸಾಮಾಜಿಕ ನ್ಯಾಯ, ಸೌಹಾರ್ದ ತತ್ವದಲ್ಲಿ ನಂಬಿಕೆ ಹೊಂದಿರುವವರು ಬಿಜೆಪಿಯಲ್ಲಿರುವ ಸಾಧ್ಯವಿಲ್ಲ' ಎಂದು ಹೇಳಿದರು.

ಬಿಜೆಪಿ ತೊರೆಯುವ ಬಗ್ಗೆ ಆನಂದ್ ಸಿಂಗ್ ಹೇಳಿದ್ದೇನು?ಬಿಜೆಪಿ ತೊರೆಯುವ ಬಗ್ಗೆ ಆನಂದ್ ಸಿಂಗ್ ಹೇಳಿದ್ದೇನು?

ಸಮಾರಂಭದಲ್ಲಿ ಮಾತನಾಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, 'ಚುನಾವಣೆ ಹತ್ತಿರವಾಗುವಾಗ ಇನ್ನಷ್ಟು ಬಿಜೆಪಿ ಶಾಸಕರು ಕಾಂಗ್ರೆಸ್ ಸೇರಲಿದ್ದಾರೆ' ಎಂದು ಹೊಸ ಬಾಂಬ್ ಸಿಡಿಸಿದರು.

ಬಳ್ಳಾರಿ ಜಿಲ್ಲೆಯ ವಿಜಯನಗರ ಕ್ಷೇತ್ರದ ಶಾಸಕಾಗಿದ್ದ ಆನಂದ್ ಸಿಂಗ್ ಜನಾರ್ದನ ರೆಡ್ಡಿ, ಶ್ರೀರಾಮುಲು ಅವರ ಪರಮಾಪ್ತರಾಗಿದ್ದರು. ಶ್ರೀರಾಮುಲು ಅವರು ಬಿಜೆಪಿ ತೊರೆದಾಗಲೂ ಆನಂದ್ ಸಿಂಗ್ ಪಕ್ಷದಲ್ಲೇ ಉಳಿದಿದ್ದರು. ಪಕ್ಷದ ನಾಯಕರ ವರ್ತನೆಯಿಂದ ಬೇಸತ್ತು ಈಗ ಪಕ್ಷ ತೊರೆದಿದ್ದಾರೆ.

ಶಕ್ತಿ ಪ್ರದರ್ಶಿಸಲು ಡಿಕೆಶಿ ಕರೆ

ಶಕ್ತಿ ಪ್ರದರ್ಶಿಸಲು ಡಿಕೆಶಿ ಕರೆ

ಆನಂದ್ ಸಿಂಗ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, 'ಆನಂದ್ ಸಿಂಗ್ ಮತ್ತು ಕಾರ್ಯಕರ್ತರು ಬಳ್ಳಾರಿಯಲ್ಲಿ ನಡೆಯಲಿದರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಸಮಾವೇಶ ಯಶಸ್ವಿಯಾಗಲು ಕೆಲಸ ಮಾಡಬೇಕು' ಎಂದು ಕರೆ ನೀಡಿದರು.

ಇನ್ನಷ್ಟು ನಾಯಕರು ಬಿಜೆಪಿಗೆ ಸೇರಲಿದ್ದಾರೆ

ಇನ್ನಷ್ಟು ನಾಯಕರು ಬಿಜೆಪಿಗೆ ಸೇರಲಿದ್ದಾರೆ

'ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಜೆಪಿ ಶಾಸಕರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತ್ತಷ್ಟು ನಾಯಕರು ಪಕ್ಷ ಸೇರಲಿದ್ದಾರೆ' ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಹೊಸ ಬಾಂಬ್ ಸಿಡಿಸಿದರು.

ಶನಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ

ಶನಿವಾರ ಶಾಸಕ ಸ್ಥಾನಕ್ಕೆ ರಾಜೀನಾಮೆ

ಶನಿವಾರ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ತಮ್ಮ ಸ್ಥಾನಕ್ಕೆ, ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇಂದು ಅವರು ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ.

ಪಕ್ಷದ ಗೊಂದಲದಿಂದಾಗಿ ರಾಜೀನಾಮೆ

ಪಕ್ಷದ ಗೊಂದಲದಿಂದಾಗಿ ರಾಜೀನಾಮೆ

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ್ದ ಆನಂದ್ ಸಿಂಗ್, 'ಪಕ್ಷದ ಆಂತರಿಕ ಗೊಂದಲದಿಂದ ಬೇಸತ್ತು ರಾಜೀನಾಮೆ ಸಲ್ಲಿಸಿದ್ದೇನೆ. ಗೊಂದಲದ ಬಗ್ಗೆ ರಾಜ್ಯ ಮತ್ತು ಜಿಲ್ಲಾ ಬಿಜೆಪಿ ನಾಯಕರ ಗಮನಕ್ಕೂ ತಂದಿದ್ದೆ. ಆದರೆ, ಯಾರೂ ಸಹ ನನ್ನನ್ನು ಕರೆದು ಮಾತನಾಡಲಿಲ್ಲ' ಎಂದು ಆರೋಪ ಮಾಡಿದ್ದರು.

ವಿಜಯನಗರ ಕ್ಷೇತ್ರದ ಫಲಿತಾಂಶ

ವಿಜಯನಗರ ಕ್ಷೇತ್ರದ ಫಲಿತಾಂಶ

2013ರ ಚುನಾವಣೆಯಲ್ಲಿ ಆನಂದ್ ಸಿಂಗ್ 69,995 ಮತ, ಕಾಂಗ್ರೆಸ್‌ನ ಎಚ್.ಅಬ್ದುಲ್ ವಾಹಬ್ 39,358 ಮತ, ಜೆಡಿಎಸ್‌ನ ಕೆ.ಬಸವರಾಜ ಅವರು 611 ಮತಗಳನ್ನು ಪಡೆದಿದ್ದರು.

English summary
Vijayanagara (Hospet) assembly constituency Former MLA Anand Singh joind Congress in the presence of Chief Minister Siddaramaiah and KPCC president Dr.G.Parameshwara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X