ಬೆಳಗಾವಿಯಲ್ಲಿ ಬಿಜೆಪಿ ಅಭಿಯಾನ ಹಾಗೂ ಇನ್ನಿತರ ಫ್ಲಾಷ್ ನ್ಯೂಸ್
ಇಂದು ಬೆಳಗಾವಿಯಲ್ಲಿ ರಾಜ್ಯ ಬಿಜೆಪಿ ವತಿಯಿಂದ ಜನ ಸಂಪರ್ಕ ಅಭಿಯಾನ; ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಂದ ಚಾಲನೆ.
ಬೆಂಗಳೂರು, ಜೂನ್ 6: ಇಂದು ಬೆಳಗಾವಿಯಲ್ಲಿ ಬಿಜೆಪಿ ವತಿಯಿಂದ ಜನಸಂಪರ್ಕ ಅಭಿಯಾನವನ್ನು ನಡೆಸಲಾಗುತ್ತದೆ. ಬೆಳಗ್ಗೆ 9 ಗಂಟೆಗೆ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಆರಂಭವಾಗಲಿರುವ ಈ ಅಭಿಯಾನ ಆನಂತರ ಖಾನಾಪುರಕ್ಕೆ ತೆರಳಲಿದೆ.
ಜಂತಕಲ್ ಮೈನಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರು, ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರ ಸ್ವಾಮಿ ವಿರುದ್ಧ ಇಂದು ವಿಶೇಷ ತನಿಖಾ ದಳ (ಎಸ್ಐಟಿ) ಮುಂದೆ ಸಾಕ್ಷ್ಯಾಧಾರಗಳನ್ನು ಸಲ್ಲಿಸಲಿದ್ದಾರೆ.

ನೇರಳೆ ಕುಂಟೆಯಲ್ಲಿ ವಿದ್ಯುತ್ ತಂತಿ ತಗುಲಿ ವ್ಯಕ್ತಿಯೊಬ್ಬ ಅಸ್ವಸ್ಥನಾದ ಘಟನೆ ಮಂಗಳವಾರ (ಜೂನ್ 6) ಬೆಳಗಿನ ಜಾವ ನಡೆದಿದೆ. ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ನೇರಳೆಕುಂಟೆ ಗ್ರಾಮದಲ್ಲಿ ಹನುಮಂತ ರಾಯಪ್ಪ ಅವರು ಈ ವಿದ್ಯುದಾಘಾತಕ್ಕೆ ಒಳಗಾದವರು.
ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು ನೋಡದೇ ನಡೆದುಕೊಂಡು ಬಂದಿದ್ದರಿಂದಾಗಿ ಈ ಘಟನೆ ನಡೆದಿದೆ. ಈ ಅವಗಢದಲ್ಲಿ 11 ಕುರಿ, 3 ಮೇಕೆ ಸಾವನ್ನಪ್ಪಿವೆ. ಹನುಮಂತ ರಾಯಪ್ಪ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗ್ರಾಮಸ್ಥರು ಪರಿಹಾರಕ್ಕಾಗಿ ಸರ್ಕಾರವನ್ನು ಆಗ್ರಹಿಸಿದ್ದಾರೆ.












Click it and Unblock the Notifications