ಜನರನ್ನು ಕತ್ತಲೆಗೆ ದೂಡುವುದೇ ಕಾಂಗ್ರೆಸ್ಸಿನ ಗ್ಯಾರಂಟಿ..?

ಬೆಂಗಳೂರು, ಅಕ್ಟೋಬರ್‌ 12: ಅಂದು ವಿಶ್ವೇಶ್ವರಯ್ಯ ಅವರು ಬೀದಿ ದೀಪದಲ್ಲಿ ಓದಿ ಎಂಜಿನಿಯರ್ ಆದರು, ಇಂದು ಕಾಂಗ್ರೆಸ್‌ ಮನೆಗೆ ವಿದ್ಯುತ್ ಇರಲಿ, ಬೀದಿ ದೀಪವನ್ನೂ ಆರಿಸಿದೆ‌. ಜನರನ್ನು ಕತ್ತಲೆಗೆ ದೂಡುವುದೇ ಕಾಂಗ್ರೆಸ್ಸಿನ ಗ್ಯಾರಂಟಿ..? ಎಂದು ರಾಜ್ಯ ಬಿಜೆಪಿ ಕಿಡಿಕಾರಿದೆ.

ಈ ಕುರಿತು ಟ್ವೀಟ್‌ ಮಾಡಿರುವ ಬಿಜೆಪಿ, ಬಿಜೆಪಿ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ನಿರಂತರ ವಿದ್ಯುತ್ ನೀಡಿದೆ..! ಆದರೆ, ಕಾಂಗ್ರೆಸ್ 2 ಗಂಟೆಯೂ ರೈತರಿಗೆ ವಿದ್ಯುತ್ ‌ನೀಡುತ್ತಿಲ್ಲ..! ಬಿಜೆಪಿ ಸರ್ಕಾರ ಪ್ರತಿ ಮನೆಗೂ 24 ಗಂಟೆ ವಿದ್ಯುತ್ ನೀಡಿದೆ.‌ ಆದರೆ ಕಾಂಗ್ರೆಸ್ ಗ್ರಾಮೀಣ ಪ್ರದೇಶದಲ್ಲಿ 8 ತಾಸೂ ವಿದ್ಯುತ್ ನೀಡುತ್ತಿಲ್ಲ ಎಂದು ಬಿಜೆಪಿ ಹೇಳಿದೆ.

BJP Fierce Attack Against Congress Guarantee

ಬಿಜೆಪಿ ಸರ್ಕಾರ ಕೈಗಾರಿಕೆಗಳಿಗೆ ಭರಪೂರ ವಿದ್ಯುತ್ ಪೂರೈಕೆ ನೀಡಿದೆ. ಆದರೆ, ಕಾಂಗ್ರೆಸ್ ವಿದ್ಯುತ್ ದರ ದುಪ್ಪಟ್ಟು ಹೆಚ್ಚಿಸಿ ವಿದ್ಯುತ್ ನೀಡದೆ ಕೈಗಾರಿಕೆಗಳನ್ನು ಮುಚ್ಚಿಸಿದೆ. ಇನ್ನೂ ಬಿಜೆಪಿ ಸರ್ಕಾರ ಶಾಲಾ ಮಕ್ಕಳು ಡಿಜಿಟಲ್ ಮೂಲಕ ಕಲಿಯಲು ಅವಕಾಶ ‌ಮಾಡಿತು. ಆದರೆ, ಕಾಂಗ್ರೆಸ್ ಮೇಣದ ಬತ್ತಿ ಮುಂದೆ ಕೂತು ಮಕ್ಕಳು ಓದುವ ಹಾಗೆ ಮಾಡಿದೆ. ಬಿಜೆಪಿ ಸರ್ಕಾರ ವಿದ್ಯುತ್ ಉತ್ಪಾದನೆಯಲ್ಲಿ ಕರ್ನಾಟಕವನ್ನು ಪವರ್ ಸರ್‌ಪ್ಲಸ್‌ ಸ್ಟೇಟ್ ಆಗಿ ಮಾಡಿತು. ಆದರೆ, ಕಾಂಗ್ರೆಸ್ ಕರ್ನಾಟಕದ ಘನತೆ ಕಳೆದು ಹೊರ ರಾಜ್ಯಗಳ ಮುಂದೆ ವಿದ್ಯುತ್ ಭಿಕ್ಷೆ ಬೇಡುತ್ತಿದೆ ಎಂದು ಟ್ವೀಟ್‌ ಮೂಲಕ ರಾಜ್ಯ ಬಿಜೆಪಿ ವಾಗ್ದಾಳಿ ನಡೆಸಿದೆ.

ಬಿಜೆಪಿ ಸರ್ಕಾರದ ಅವಧಿಯಲ್ಲಿ ಮರೆತೇ ಹೋಗಿದ್ದ ಲೋಡ್‌‌ ಶೆಡ್ಡಿಂಗನ್ನು ಕಾಂಗ್ರೆಸ್‌ ಬಂದ ನಾಲ್ಕೇ ತಿಂಗಳಲ್ಲಿ ಜಾರಿ ಮಾಡಿದೆ. ವಿದ್ಯುತ್‌ ಅಭಾವದಿಂದಾಗಿ ಉದ್ಯಮಗಳು ಮತ್ತು ಸಣ್ಣ ಕೈಗಾರಿಕೆಗಳು ಕೆಲಸ ಮಾಡಲಾರದೆ ಉದ್ಯೋಗ ಕಡಿತ ಮಾಡುತ್ತಿವೆ. ಇನ್ನೊಂದೆಡೆ, ರೈತರಿಗೆ ಬಿಜೆಪಿ ಸರ್ಕಾರ ನೀಡುತ್ತಿದ್ದ ದಿನಕ್ಕೆ 7 ಗಂಟೆ ಮೂರು ಫೇಸ್‌ ವಿದ್ಯುತ್‌ ಈಗ ಕೇವಲ ಒಂದೆರಡು ಗಂಟೆಗಳಿಗೆ ಇಳಿದಿದೆ. ರಾಜ್ಯದ ಜನತೆಯ ಕೈಯಿಂದ ಅನ್ನ-ನೀರು ಎರಡನ್ನೂ ಕಸಿದುಕೊಂಡಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರದ ನಾಲ್ಕು ತಿಂಗಳ ಸಾಧನೆ ಎಂದು ಬಿಜೆಪಿ ಹೇಳಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+