BJP Manifesto 2023: ಒಲಿಂಪಿಕ್ ದರ್ಜೆಯ 7 ಮಲ್ಟಿಸ್ಪೋಟ್ಸ್ ಅರೆನಾ, ಯುವಜನ ಮತ್ತು ಕ್ರೀಡಾ ಕ್ಷೇತ್ರಕ್ಕೆ ಬಿಜೆಪಿ ಭರವಸೆ
ಬೆಂಗಳೂರು, ಮೇ 1: ಕರ್ನಾಟಕ ವಿಧಾನಸಭಾ ಚುನಾವಣೆ ಹತ್ತಿರುವಾಗುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಶಾಂಗ್ರಿ ಲಾ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು.
ಬಿಜೆಪಿ ಚುನಾವಣಾ ಪ್ರಣಾಳಿಕೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಯುವಜನ ಮತ್ತು ಕ್ರೀಡಾ ಸಚಿವ ಕೆ.ಸಿ ನಾರಾಯಣ ಗೌಡ ನೇತೃತ್ವದಲ್ಲಿ ಯುವಜನ ಮತ್ತು ಕ್ರೀಡಾ ಕ್ಷೇತ್ರದ ಸಾಧನೆ ಬಗ್ಗೆ ವಿವರಿಸಲಾಗಿದೆ.

*2022ರ ಡಿಸೆಂಬರ್‌ನಲ್ಲಿ ರಾಜ್ಯದ 10,000 ಯುವ ಜನರಿಗೆ ಉದ್ಯೋಗ ಪತ್ರಗಳನ್ನು ಒದಗಿಸಿದ್ದು, ಹೆಚ್ಚಿನವರು 18,000 ರೂನಿಂದ 45,000ರೂ ವರೆಗಿನ ಆರಂಭಿಕ ಮಾಸಿಕ ವೇತನ ಪಡೆಯುತ್ತಿದ್ದಾರೆ
*ಕರ್ನಾಟಕದ ಯುವ ಜನರ ಕೌಶಲ್ಯಕ್ಕೆ ಅಗತ್ಯವಾದ ತರಬೇತಿ, ಪ್ರೋತ್ಸಾಹ ಒದಗಿಸಿದ್ದೇವೆ.
* ಮಹಾತ್ವಕಾಂಕ್ಷೆಯ 'ಪ್ರಧಾನ ಮಂತ್ರಿ ಕೌಶಲ್ ವಿಕಾಸ್ ಯೋಜನೆ'ಯಡಿ ಕರ್ನಾಟಕದಲ್ಲಿ 5.5 ಲಕ್ಷಕ್ಕೂ ಮೀರಿ ಯುವ ಜನರಿಗೆ ತರಬೇತಿ ನೀಡಲಾಗಿದೆ. ಅದರಲ್ಲಿ 4.4 ಲಕ್ಷ ಅಭ್ಯರ್ಥಿಗಳು ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿ, ಪ್ರಮಾಣಪತ್ರ ಪಡೆದಿದ್ದಾರೆ.
* ಮುಖ್ಯಮಂತ್ರಿ ಕೌಶಲ್ಯ ಕರ್ನಾಟಕ ಯೋಜನೆ ಇದರ ಅಡಿಯಲ್ಲಿ 25,000ಕ್ಕೂ ಹೆಚ್ಚು ಯುವ ಜನರಿಗೆ ತರಬೇತಿ ನೀಡಲಾಗಿದೆ. ಈ ತರಬೇತಿ ಪಡೆದವರ ಪೈಕಿ ಶೇಕಡಾ83ಕ್ಕಿಂತ ಹೆಚ್ಚು ಜನರು (2022ರ ನವೆಂಬರ್ ವರೆಗೆ) ಉದ್ಯೋಗ ಪಡೆದಿದ್ದಾರೆ.

*KGTTI ಗಳ ಮೂಲಕ 25,000 ಅಭ್ಯರ್ಥಿಗಳಿಗೆ ಕೌಶಲ್ಯ- ನಿರ್ದಿಷ್ಟ ತಾಂತ್ರಿಕ ತರಬೇತಿಯನ್ನು ಒದಗಿಸಲಾಗಿದೆ. ಗ್ರಾಮೀಣ ಭಾಗದಲ್ಲಿ ಯುವ ಜನರು ಸ್ವಯಂ ಉದ್ಯೋಗ ಮತ್ತು ಆರ್ಥಿಕ ಚಟುವಟಿಕೆಗಳಲ್ಲಿ ಭಾಗಿಯಾಗುವಂತೆ ಪ್ರೋತ್ಸಾಹಿಸಲು' ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ' ಅಡಿಯಲ್ಲಿ 27,395 ಸ್ವ ಸಹಾಯ ಗುಂಪುಗಳನ್ನು ಸ್ಥಾಪಿಸಲಾಗುತ್ತಿದೆ.
* ವಿಶೇಷ ಉದ್ಯೋಗ ನೀತಿಯ ಮೂಲಕ ಕಳೆದ ನಾಲ್ಕು ವರ್ಷಗಳಲ್ಲಿ 55 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದ್ದೇವೆ.
* ಭಾರತೀಯ ಸೇನೆಯಲ್ಲಿ ಅಗ್ನಿ ವೀರರಾಗಿ ನೇಮಕಗೊಳ್ಳಲು ಎಸ್ಸಿ ಎಸ್ಟಿ ಮತ್ತು ಹಿಂದುಳಿದ ವರ್ಗಗಳ ಹತ್ತು ಸಾವಿರ ಯುವ ಜನರಿಗೆ ಉಚಿತ ತರಬೇತಿ ನೀಡಲು ಬದ್ಧರಾಗಿದ್ದೇವೆ.
* ಬೆಂಗಳೂರಿನಲ್ಲಿ ಆಯೋಜಿಸಲಾದ 2022 ಖೇಲೋ ಇಂಡಿಯಾ ವಿಶ್ವವಿದ್ಯಾನಿಲಯದ ಕ್ರೀಡಾಕೂಟದಲ್ಲಿ 200ಕ್ಕೂ ಹೆಚ್ಚು ವಿಶ್ವವಿದ್ಯಾನಿಲಯಗಳಿಂದ ನಾಲ್ಕು ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು 20 ವಿವಿಧ ಕ್ರೀಡಾ ವಿಭಾಗದಲ್ಲಿ ಭಾಗವಹಿಸಿದ್ದರು.

ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಯುವಜನ ಮತ್ತು ಕ್ರೀಡಾ ಕ್ಷೇತ್ರಕ್ಕೆ ಬಿಜೆಪಿ ನೀಡಿರುವ ಭರವಸೆಗಳು
1. ಸಮನ್ವಯ ಯೋಜನೆ ಅಡಿ ತ್ವರಿತಗತಿಯಲ್ಲಿ SMEಗಳು ಮತ್ತು ITI ಗಳ ನಡುವೆ ಸಮನ್ವಯತೆ ಸಾಧಿಸುತ್ತೇವೆ. ಪ್ರತಿಭಾವಂತ ಯುವ ವೃತ್ತಿ ಪರರಿಗೆ ಶಿಕ್ಷಣ ಮತ್ತು ಉದ್ಯೋಗಕ್ಕಾಗಿ ಕ್ರಿಯಾತ್ಮಕ ಪರಿಸರ ವ್ಯವಸ್ಥೆಯನ್ನು ನಿರ್ಮಾಣ ಮಾಡುತ್ತೇವೆ.
2. ಮಹತ್ವಾಕಾಂಕ್ಷೆಯ ಯುವ ಜನರಿಗೆ ಈ ಬೆಂಬಲಗಳನ್ನು ಒದಗಿಸುತ್ತೇವೆ
*ಐಎಎಸ್/ಕೆಎಎಸ್/ಬ್ಯಾಂಕಿಂಗ್/ ಸರ್ಕಾರಿ ಉದ್ಯೋಗದ ಪರೀಕ್ಷೆಗಳಿಗೆ ಕೋಚಿಂಗ್ ಪಡೆಯಲು ಧನ ಸಹಾಯ ಒದಗಿಸುತ್ತೇವೆ.
*ಲೋಕಾಸೇವಾ ಆಯೋಗ ನಡೆಸುವ ಪರೀಕ್ಷೆಗಳಿಗೆ ಹಾಜರಾಗಲು ಪರಸ್ಥರಗಳಿಗೆ ತೆರಳುವ ಎಲ್ಲಾ ಅಭ್ಯರ್ಥಿಗಳಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಒದಗಿಸುತ್ತೇವೆ.
3.ಸ್ವಾಮಿ ವಿವೇಕಾನಂದ ಯುವ ಶಕ್ತಿ ಯೋಜನೆ ಅಡಿಯಲ್ಲಿ ರಾಜ್ಯದ ಎಲ್ಲಾ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಸ್ವ ಸಹಾಯ ಸಂಘದ ಒಬ್ಬ ಸದಸ್ಯರಿಗೆ ಸ್ಟಾರ್ಟ್ ಅಪ್ ಆರಂಭಿಸಲು ಹತ್ತು ಲಕ್ಷ ಬಂಡವಾಳ ನಿಧಿ ಒದಗಿಸುತ್ತೇವೆ.
4. ಕ್ರೀಡಾ ಪಟುಗಳನ್ನು ಪ್ರೋತ್ಸಾಹಿಸುವ ಮೂಲಕ ವಿಶ್ವ ದರ್ಜೆಯ ಪರಿಸರ ವ್ಯವಸ್ಥೆಯನ್ನು ರಚಿಸಿ ಕರ್ನಾಟಕವನ್ನು ಜಾಗತಿಕ ಕ್ರೀಡಾ ಶಕ್ತಿಯಾಗಿ ರೂಪಿಸುತ್ತೇವೆ.
*ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವ ಕರ್ನಾಟಕದ ಕ್ರೀಡಾಪಟುಗಳಿಗೆ ಆರ್ಥಿಕ ನೆರವು ಮತ್ತು ಗುಣಮಟ್ಟದ ತರಬೇತಿ ಒದಗಿಸುತ್ತೇವೆ.
*ಪ್ರತಿ ವಲಯಕ್ಕೆ ಒಂದರಂತೆ ವಸತಿ ಮತ್ತು ತರಬೇತಿ ಸೌಲಭ್ಯಗಳೊಂದಿಗೆ ಒಲಿಂಪಿಕ್ ದರ್ಜೆಯ ಏಳು ಮಲ್ಟಿಸ್ಪೋಟ್ಸ್ ಅರೆನಾಗಳನ್ನು ಸ್ಥಾಪಿಸುತ್ತೇವೆ ಜೊತೆಗೆ ಕೊಡಗಿನಲ್ಲಿ ಹಾಕಿ ಕ್ರೀಡಾಂಗಣವನ್ನು ನಿರ್ಮಿಸುತ್ತೇವೆ.
5.ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಸ್ವದೇಶಿ ಕ್ರೀಡೆ ಕಬ್ಬಡಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸಿ, ಕಬ್ಬಡಿ ಮ್ಯಾಟ್‌ಗಳನ್ನು ಒದಗಿಸುತ್ತೇವೆ. ಕಬ್ಬಡಿಗಾಗಿ ರಾಷ್ಟ್ರೀಯ ಉತ್ಕೃಷತಾ ಕೇಂದ್ರವನ್ನು ಸ್ಥಾಪಿಸುತ್ತೇವೆ ಎಂದು ಬಿಜೆಪಿ ಭರವಸೆ ನೀಡಿದ್ದಾರೆ.












Click it and Unblock the Notifications