ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಾಸಕಾಂಗ ಸಭೆಯಲ್ಲಿ ಯಡಿಯೂರಪ್ಪ ಬಳಿ ಬಿಜೆಪಿ ಮುಖಂಡರ ದೂರು

|
Google Oneindia Kannada News

ಬೆಂಗಳೂರು, ನವೆಂಬರ್ 30: ರಾಜ್ಯ ಬಿಜೆಪಿಯು ಈ ಹಿಂದೆ ಬಿಡುಗಡೆ ಮಾಡಿದ್ದ ಕ್ಷೇತ್ರವಾರು ಚುನಾವಣೆ ಉಸ್ತುವಾರಿಗಳು ಮತ್ತು ಪ್ರಭಾರಿಗಳ ಪಟ್ಟಿಯೂ ತಂತ್ರಗಾರಿಕೆ ಹೊಂದಿಲ್ಲ, ಅದನ್ನು ಬದಲಾಯಿಸುವಂತೆ ಬಿಜೆಪಿ ಪ್ರಮುಖ ಶಾಸಕರು ಪಟ್ಟು ಹಿಡಿದಿದ್ದಾರೆ.

ನಿನ್ನೆ ನಗರದಲ್ಲಿ ನಡೆದ ಬಿಜೆಪಿ ಪಕ್ಷ ಶಾಸಕಾಂಗ ಸಭೆಯಲ್ಲಿ ಬಹುತೇಕ ಶಾಸಕರು ಕ್ಷೇತ್ರವಾರು ಉಸ್ತುವಾರಿ ಮತ್ತು ಪ್ರಭಾರಿಗಳನ್ನು ಬದಲಾಯಿಸಿ ಎಂದು ಯಡಿಯೂರಪ್ಪ ಅವರ ಬಳಿ ಒತ್ತಾಯಿಸಿದ್ದಾರೆ.

ಬಿಜೆಪಿಯಲ್ಲಿ ಅಸಮಾಧಾನ: ಜಿಲ್ಲಾ ಉಸ್ತುವಾರಿ ಬದಲಿಗೆ ಒತ್ತಾಯ?ಬಿಜೆಪಿಯಲ್ಲಿ ಅಸಮಾಧಾನ: ಜಿಲ್ಲಾ ಉಸ್ತುವಾರಿ ಬದಲಿಗೆ ಒತ್ತಾಯ?

ಶಾಸಕರ ಒತ್ತಾಯ ಹೆಚ್ಚಾದ ಕಾರಣ ಯಡಿಯೂರಪ್ಪ ಅವರು ಬದಲಾವಣೆಗೆ ಒಪ್ಪಿದ್ದು, ಶೀಘ್ರದಲ್ಲಿಯೇ ಕ್ಷೇತ್ರವಾರು ಲೋಕಸಭಾ ಚುನಾವಣಾ ಉಸ್ತುವಾರಿ ಮತ್ತು ಪ್ರಭಾರಿಗಳ ಪರಿಷ್ಕೃತ ಪಟ್ಟಿಯನ್ನು ಸಿದ್ದಪಡಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕೆ.ಎಸ್.ಈಶ್ವರಪ್ಪ, ಸಂಪಂಗಿ, ವಿ.ಸೋಮಣ್ಣ, ಸದಾನಂದಗೌಡ ಇನ್ನೂ ಹಲವು ಪ್ರಮುಖ ಮುಖಂಡರುಗಳೇ ಉಸ್ತುವಾರಿ ಹಾಗೂ ಪ್ರಭಾರಿ ಪಟ್ಟಿಗೆ ಬೇಸರ ವ್ಯಕ್ತಪಡಿಸಿರುವ ಕಾರಣ ಉಸ್ತುವಾರಿ ಹಾಗೂ ಪ್ರಭಾರಿ ಪಟ್ಟಿಯನ್ನು ತಿದ್ದುವ ಭರವಸೆಯನ್ನು ಯಡಿಯೂರಪ್ಪ ನೀಡಿದ್ದಾರೆ.

ಈಶ್ವರಪ್ಪ ತೀವ್ರ ಅಸಮಾಧಾನ

ಈಶ್ವರಪ್ಪ ತೀವ್ರ ಅಸಮಾಧಾನ

ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಅವರಿಗೆ ಮೈಸೂರು-ಕೊಡಗು ಕ್ಷೇತ್ರದ ಉಸ್ತುವಾರಿ ನೀಡಲಾಗಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತಪಡಿಸಿದ ಅವರು, ಶಿವಮೊಗ್ಗ ಉಸ್ತುವಾರಿ ನೋಡಿಕೊಳ್ಳುತ್ತಿದ್ದ ನನಗೆ ಮೈಸೂರು-ಕೊಡಗು ನೀಡಿರುವುದು ಸರಿಯಲ್ಲ, ಕ್ಷೇತ್ರ ಬದಲಾಯಿಸಬೇಕು ಎಂದು ಪಟ್ಟು ಹಿಡಿದಿದ್ದರು ಎನ್ನಲಾಗಿದೆ.

ವಿ.ಸೋಮಣ್ಣ ತಕರಾರರು

ವಿ.ಸೋಮಣ್ಣ ತಕರಾರರು

ವಿ.ಸೋಮಣ್ಣ ಅವರಿಗೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಉಸ್ತುವಾರಿ ನೀಡಲಾಗಿದೆ. ಇದು ಸೋಮಣ್ಣ ಅವರನ್ನು ಕೆರಳಿಸಿದೆ. 'ನಾನು ಲಿಂಗಾಯತ ಸಮುದಾಯವನು, ಒಕ್ಕಲಿಗ ಸಮುದಾಯ ಹೆಚ್ಚಿಗೆ ಇರುವ ಕ್ಷೇತ್ರದ ಉಸ್ತುವಾರಿ ನನಗೆ ನೀಡಲಾಗಿದೆ, ಇದು

ಲೋಕಸಭಾ ಚುನಾವಣೆ 2019 : ಕರ್ನಾಟಕ ಬಿಜೆಪಿ ಸಂಚಾಲಕರ ಪಟ್ಟಿ ಲೋಕಸಭಾ ಚುನಾವಣೆ 2019 : ಕರ್ನಾಟಕ ಬಿಜೆಪಿ ಸಂಚಾಲಕರ ಪಟ್ಟಿ

ಕೋಲಾರ ಕ್ಷೇತ್ರಕ್ಕೂ ಬದಲಾವಣೆ

ಕೋಲಾರ ಕ್ಷೇತ್ರಕ್ಕೂ ಬದಲಾವಣೆ

ಕೋಲಾರ ಲೋಕಸಭಾ ಕ್ಷೇತ್ರದ ಉಸ್ತುವಾರಿಯನ್ನು ಸಂಪಂಗಿ ಅವರಿಗೆ ಕೊಡಲಾಗಿತ್ತು. ಆದರೆ ತಮ್ಮ ಕ್ಷೇತ್ರ ಬದಲಾಯಿಸುವಂತೆ ಸಂಪಂಗಿ ಅವರು ಮನವಿ ಮಾಡಿದ್ದಾರೆ.

ಸದಾನಂದಗೌಡ ಅಸಮಾಧಾನ

ಸದಾನಂದಗೌಡ ಅಸಮಾಧಾನ

ಕೃಷ್ಣಾರೆಡ್ಡಿ ಅವರಿಗೆ ಬೆಂಗಳೂರು ಉತ್ತರ ಕ್ಷೇತ್ರದ ಉಸ್ತುವಾರಿ ನೀಡಿರುವುದಕ್ಕೆ ಸದಾನಂದಗೌಡ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೃಷ್ಣಾರೆಡ್ಡಿ ಅವರು ಕೋಲಾರದವರು, ಅವರಿಗೆ ಕೋಲಾರ ಅಥವಾ ಚಿಕ್ಕಬಳ್ಳಾಪುರ ನೀಡಿ ಎಂದು ಸದಾನಂದಗೌಡ ಅವರು ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಯಿಂದ ಪ್ರಭಾರಿಗಳ ನೇಮಕಲೋಕಸಭೆ ಚುನಾವಣೆ : ಕರ್ನಾಟಕ ಬಿಜೆಪಿಯಿಂದ ಪ್ರಭಾರಿಗಳ ನೇಮಕ

ಅಧಿವೇಶನದ ಬಳಿಕ ಪರಿಷ್ಕರಣೆ

ಅಧಿವೇಶನದ ಬಳಿಕ ಪರಿಷ್ಕರಣೆ

ಎಲ್ಲರ ಅಸಮಾಧಾನ, ಮನವಿಗಳನ್ನು ಕೇಳಿದ ಯಡಿಯೂರಪ್ಪ ಅವರು, ಬೆಳಗಾವಿ ಅಧಿವೇಶನದ ಬಳಿಕ ಲೋಕಸಭೆ ಚುನಾವಣೆ ಕ್ಷೇತ್ರ ಉಸ್ತುವಾರಿ ಮತ್ತು ಪ್ರಭಾರಿಗಳ ಪಟ್ಟಿಯನ್ನು ಬದಲಾಯಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಲೋಕಸಭೆ ಚುನಾವಣೆ 2019 : ಬಿಜೆಪಿ ಕಾರ್ಯತಂತ್ರ ದಿಢೀರ್ ಬದಲು!ಲೋಕಸಭೆ ಚುನಾವಣೆ 2019 : ಬಿಜೆಪಿ ಕಾರ್ಯತಂತ್ರ ದಿಢೀರ್ ಬದಲು!

English summary
BJP MLAs demand Yeddyurappa to change Lok Sabha elections 2019 constituency incharge list. Many well leaders were also unhappy with the incharge list.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X