ಬಿಜೆಪಿ, ಕಾಂಗ್ರೆಸ್ಸಿನ ಈ ಸೂಪರ್ ಫೋಟೋಗೆ ಶೀರ್ಷಿಕೆ ಕೊಡಿ!

ರಾಜ್ಯದಲ್ಲಿ ಬಿಸಿಲಿನ ತಾಪಮಾನ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವುದು ಒಂದೆಡೆಯಾದರೆ, ಮೂರೂ ಪಕ್ಷಗಳ ಅಬ್ಬರದ ಪ್ರಚಾರದ ಕಾವೂ ಜೋರಾಗಿಯೇ ಬೀಸುತ್ತಿದೆ. ಅವರು ಇವರನ್ನು ಬೈಯುತ್ತಾ, ಇವರು ಅವರನ್ನು ತೆಗಳುತ್ತಾ, ತಾವು ಮಾತ್ರ ಸಂಭಾವಿತರಂತೆ ಫೋಸ್ ಕೊಡುತ್ತಾ ಮತದಾರರ ಮುಂದೆ ಬರುತ್ತಿದ್ದಾರೆ..ಹುಷಾರ್..

ರಾಜಕಾರಣಿಗಳಿಗಿಂತ ನಾವೇನು ಕಮ್ಮಿ ಎನ್ನುವಂತೆ ನೆಟ್ಟಿಗರು ಎಂತೆಂತಾ ಚಿತ್ರಗಳು,ಮೇಮ್ಸ್ ಗಳನ್ನಾ ಸಾಮಾಜಿಕ ತಾಣದಲ್ಲಿ ಹರಿಯ ಬಿಡುತ್ತಿದ್ದಾರೆಂದರೆ, ಅಬ್ಬಬ್ಬಾ ಮುಂದಿನ ಚುನಾವಣೆಯ ಭವಿಷ್ಯವನ್ನು ಇವರೇ ಬರೆದುಬಿಡುತ್ತಾರೆ ಎನ್ನುವರಷ್ಟು ಮಟ್ಟಿಗೆ.

ಅವರವರ ಪಕ್ಷಗಳ ಬೆಂಬಲಿಗರು, ತಮಗೆ ಸೂಕ್ತವೆನಿಸಿದ ಫೋಟೋಗಳನ್ನು ಸಾಮಾಜಿಕ ತಾಣದಲ್ಲಿ ಹಾಕುತ್ತಿರುವುದರಿಂದ, ಒಬ್ಬರು ಇನ್ನೊಬ್ಬರ ಕಾಲೆಳೆಯುವ ಕೆಲಸವನ್ನು ಜೋರಾಗಿಯೇ ಮಾಡುತ್ತಿದ್ದಾರೆ. ಜೊತೆಗೆ, ಮಜಾ ತೆಗೆದುಕೊಳ್ಳುತ್ತಿದ್ದಾರೆ. ಅದಕ್ಕೊಂದಿಷ್ಟು ಕಾಮೆಂಟುಗಳು.. ಆಕ್ರೋಶಗಳು..

BJP and Congress photo in autorikshaw, jokes and memes in Social media

ಮೇಲಿನ ಚಿತ್ರವನ್ನೊಮ್ಮೆ ನೋಡಿ, ಬಹುಷ: ಇಬ್ಬರೂ ಆಟೋ ಸ್ನೇಹಿತರು ಬಿಜೆಪಿ ಮತ್ತು ಕಾಂಗ್ರೆಸ್ಸಿನ ಫೋಟೋ ಹಾಕಿಕೊಂಡು ಬೇರೆ ಬೇರೆ ಸಮಾವೇಶಕ್ಕೆ ಹೋಗಿರಬೇಕು. ದಾರಿಯಲ್ಲಿ ಬಿಜೆಪಿ ಫೋಟೋ ಹಾಕಿದ ಆಟೋ ಕೈಕೊಟ್ಟಿದೆ.

ತನ್ನ ಸ್ನೇಹಿತನ ಸಹಾಯಕ್ಕೆ ನಿಂತ ಕಾಂಗ್ರೆಸ್ ಫೋಟೋ ಹಾಕಿದ್ದ ಆಟೋ ಚಾಲಕ, ಇನ್ನೊಬ್ಬ ಆಟೋ ಚಾಲಕನಿಗೆ ಸಹಾಯ ಮಾಡುತ್ತಾನೆ. ಆ ಇಬ್ಬರು ಆಟೋ ಚಾಲಕರಲ್ಲಿದ್ದ ವ್ಯತ್ಯಾಸವೆಂದರೆ ಬಿಜೆಪಿ ಮತ್ತು ಕಾಂಗ್ರೆಸ್ ಫೋಟೋ ಮಾತ್ರವೋ ಏನೋ?

ಆದರೆ, ಇದನ್ನು ಯಾರೋ ಕ್ಲಿಕ್ಕಿಸಿ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ ಮತ್ತು ಅದಕ್ಕೊಂದಷ್ಟು ಕಾಮೆಂಟುಗಳು. ಎರಡು ರಾಜಕೀಯ ಪಕ್ಷಗಳು ಮತ್ತು ಪಕ್ಷದ ಕಾರ್ಯಕರ್ತರ ನಡುವೆ ಎಷ್ಟೇ ದುಷ್ಮನಿಯಿದ್ದರೂ, ಮನಸ್ಸಿಗೆ ಮುದ ನೀಡುವ ಫೋಟೋ ಅದು.

ರಾಜಕೀಯದಲ್ಲಿ ಯಾರೂ ಶತ್ರುಗಳಿಲ್ಲ, ಯಾರೂ ಮಿತ್ರರೂ ಅಲ್ಲ.. ರಾಜಕಾರಣ ನಿಂತ ನೀರಲ್ಲ ಎನ್ನುವ ಪದಕ್ಕೆ ಮೇಲಿನ ಚಿತ್ರ ಕನ್ನಡಿ ಹಿಡಿದಂತಿದೆ. ಈ ಫೋಟೊಗೆ ನೀವೂ ಒಂದು ಶೀರ್ಷಿಕೆ ನೀಡಿ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+