ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾಂಗ್ರೆಸ್‌ನಿಂದ ಮುಸ್ಲಿಮರ ಪ್ರಚೋದನೆ: ಬಿಜೆಪಿ ಕೆಂಡಾಮಂಡಲ

By Nayana
|
Google Oneindia Kannada News

ಬೆಂಗಳೂರು, ಮೇ3: ಚುನಾವಣೆಯಲ್ಲಿ ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಕಾಂಗ್ರೆಸ್ ಅಳವಡಿಸಿಕೊಂಡಿರುವ ಕೋಮುವಾದಿ ಕಾರ್ಯಸೂಚಿಯನ್ನು ಬಿಜೆಪಿ ತೀವ್ರವಾಗಿ ಖಂಡಿಸಿದೆ.

ಈ ಕುರಿತು ಬಿಜೆಪಿ ರಾಷ್ಟ್ರೀಯ ವಕ್ತಾರರಾದ ಡಾ, ಸಂಬಿತ್ ಪಾತ್ರ ಮಾತನಾಡಿ, ಕಲಬುರಗಿಯಲ್ಲಿ ಬುಧವಾರ ನಡೆದ ಕಾಂಗ್ರೆಸ್ ಸಮಾವೇಶದಲ್ಲಿ ಮಲ್ಲಿಕಾರ್ಜುನ ಖರ್ಗೆಯವರು ಮುಸಲ್ಮಾನರೆಲ್ಲ ಕಾಂಗ್ರೆಸ್‌ಗೆ ಮತ ನೀಡಬೇಕು ಎಂದು ಕರೆ ನೀಡಿದ್ದಾರೆ.

ರಾಹುಲ್ ಅವರು ತಂತ್ರಜ್ಞಾನ ಅನಕ್ಷರಸ್ಥ : ಸಂಬಿತ್ ಪಾತ್ರ ರಾಹುಲ್ ಅವರು ತಂತ್ರಜ್ಞಾನ ಅನಕ್ಷರಸ್ಥ : ಸಂಬಿತ್ ಪಾತ್ರ

ಮತ್ತೊಬ್ಬ ನಾಯಕರಾದ ಗುಲಾಂ ನಬೀ ಆಜಾದ್ ಅವರು ಹಿಂದೂಗಳ ಬಗ್ಗೆ ಮಾತನಾಡಬೇಡಿ ಇದರಿಂದ ಬಿಜೆಪಿ ಲಾಭವಾಗುತ್ತದೆ ಎಂದಿದ್ದಾರೆ. ಕಾಂಗ್ರೆಸ್ ಈ ಮೂಲಕ ಕೋಮು ಹಿಂಸೆಗೆ ಪ್ರಚೋದನೆ ನೀಡುತ್ತಿದ್ದು, ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ತಿಳಿಸಿದರು.

BJP alleges Congress communal agenda exposed

ಕಾಂಗ್ರೆಸ್‌ಗೆ ಹೊರದೇಶದ ಸಂಸ್ಥೆ(ಕೇಂಬ್ರಿಡ್ಜ್ ಅನಾಲಿಟಿಕ) ದಿಂದ ಇಲ್ಲಿನ ಮಾಹಿತಿ ಪೂರೈಕೆಯಾಗುತ್ತಿತ್ತು. ರಾಹುಲ್‌ಗಾಂಧಿ ಅವರು ಈ ಮಾಹಿತಿಯನ್ನು ಸುಳ್ಳು ಅಂಕಿ-ಅಂಶಗಳನ್ನು ನೀಡಿ ಜನರನ್ನು ದಾರಿ ತಪ್ಪಿಸುತ್ತಿದ್ದರು. ಈಗ ಮಾಹಿತಿ ಪೂರೈಕೆ ಬಂದ್ ಆಗಿರುವುದರಿಂದ ಕಾಂಗ್ರೆಸ್‌ನಲ್ಲಿ ಗಲಾಟೆ, ಗೊಂದಲ ಉಂಟಾಗಿದೆ ಎಂದಿದ್ದಾರೆ.

ರಾಹುಲ್‌ ಗಾಂಧಿ ಟ್ವೀಟ್ ಮಾಡುವುದನ್ನು ನಿಲ್ಲಿಸಿದ್ದು, ಅವರ ಪರವಾಗಿ ಸಿದ್ದರಾಮಯ್ಯ ಮತ್ತಿತರೆ ರಕ್ಷಣೆಗೆ ನಿಂತು ಟ್ವೀಟ್ ಮಾಡುತ್ತಿದ್ದಾರೆ. ಯಾವುದೇ ಪಕ್ಷ ಚುನಾವಣೆ ಎದುರಿಸುವಾಗ ಸಾಧನೆಗಳ ಲೆಕ್ಕ ನೀಡಬೇಕು. ಯಡಿಯೂರಪ್ಪ ಅವರು ಹಿಂದಿನ ಬಿಜೆಪಿ ಸರ್ಕಾರದ ಸಾಧನೆಯನ್ನು ಜನರ ಮುಂದಿಡುತ್ತಿದ್ದಾರೆ.

ಸಿದ್ದರಾಮಯ್ಯ ಏಳು ಕೆರೆ ನೀರು ಕುಡಿದ್ದಿದ್ದಾರೆ: ಮೋದಿ ಸಿದ್ದರಾಮಯ್ಯ ಏಳು ಕೆರೆ ನೀರು ಕುಡಿದ್ದಿದ್ದಾರೆ: ಮೋದಿ

ಕಾಂಗ್ರೆಸ್ ಪಕ್ಷಕ್ಕೆ ನಿಷ್ಠರಾಗಿರುವ ಉಡುಪಿ ಜಿಲ್ಲಾಧಿಕಾರಿ ಪ್ರಿಯಾಂಕ ಫ್ರಾನ್ಸಿಸ್ ಅವರು ದೇವಸ್ಥಾನಗಳಲ್ಲಿ ಭಗವಾಧ್ವಜಗಳನ್ನು ತೆಗೆಸಲು ಸೂಚಿಸಿದ್ದಾರೆ. ಆಧ್ಯಾತ್ಮಿಕ, ಧಾರ್ಮಿಕ ಮತ್ತು ಸಾಂಸ್ಕೃತಿಕ ನಗರಿಯಾದ ಉಡುಪಿಯ ದೇವಚಾಲಯಗಳಲ್ಲಿ ಕೇಸರಿ ಧ್ವಜವನ್ನು ಸಾವಿರಾರು ವರ್ಷಗಳಿಂದ ಹಾರಿಸಲಾಗುತ್ತಿದೆ.

ಅಭಿವೃದ್ಧಿಯೊಂದೇ ಬಿಜೆಪಿ ಪಕ್ಷದ ಕಾರ್ಯಸೂಚಿಯನ್ನು ಪ್ರಧಾನಿಯವರು ಹೇಳಿರುವುದಕ್ಕೆ ಹೆಮ್ಮೆ ಪಡುತ್ತೇವೆ. ಆದರೆ ಕಾಂಗ್ರೆಸ್ ಪಕ್ಷ ಸಮಾಜಕ್ಕೆ, ಧರ್ಮ ಜಾತಿಗಳನ್ನು ಪಡೆಯುವುದೇ ತನ್ನ ಸಿದ್ಧಾಂತ ಎಂದು ಭಾವಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

English summary
Bjp national spokesman Dr Sambith Pathra has alleged that Congress leaders provoking Muslims not to support their counterpart and exposed themselves with their communal agenda in ongoing state assembly poll.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X