ಕರ್ನಾಟಕದಲ್ಲಿ ‘ಟ್ಯಾಂಕರ್‌ ಮಾಫಿಯಾ’ ಬಗ್ಗೆ ಬಿಜೆಪಿ ಹೇಳಿದ್ದೇನು?

ಇನ್ನೇನು ಕೆಲವೇ ದಿನದಲ್ಲಿ ಲೋಕಸಭೆ ಚುನಾವಣೆ ಬರಲಿದೆ, ಹೀಗಾಗಿ ಬಿಜೆಪಿ & ಕಾಂಗ್ರೆಸ್ ನಾಯಕರ ಮಧ್ಯೆ ಫೈಟಿಂಗ್ ಬಲು ಜೋರಾಗಿದೆ. ಇದೇ ಸಮಯದಲ್ಲಿ ಕರ್ನಾಟಕದಲ್ಲಿ ಈಗ ನೀರಿಗೂ ಘೋರ ಪರಿಸ್ಥಿತಿ ಎದುರಾಗಿದ್ದು, ಇದೇ ವಿಚಾರವನ್ನ ಹೈಲೈಟ್ ಮಾಡಿ ಬಿಜೆಪಿಯ ನಾಯಕರು ಗಂಭೀರ ಆರೋಪ ಮಾಡಿದ್ದಾರೆ!

ಕರ್ನಾಟಕ ಬಿಜೆಪಿ & ಕರ್ನಾಟಕ ಕಾಂಗ್ರೆಸ್ ನಡುವೆ ಟ್ವೀಟ್ ಫೈಟ್ ಆಗಾಗ ಬಲು ಜೋರು ಅಂತಾನೇ ಹೇಳಬಹುದು. ಇಬ್ಬರೂ ಒಬ್ಬರಿಗೆ ಮತ್ತೊಬ್ಬರು ಠಕ್ಕರ್ ಕೊಡುತ್ತಲೇ, ಮಾತಿನ ಮಹಾಯುದ್ಧ ನಡೆಸುತ್ತಾರೆ. ಅದೇ ರೀತಿ ಈಗ ಕರ್ನಾಟಕದ ಕಾಂಗ್ರೆಸ್ ಸರ್ಕಾರದ ವಿರುದ್ಧ ಗಂಭೀರ ಆರೋಪ ಮಾಡಿದೆ ಬಿಜೆಪಿ. ಅದರಲ್ಲೂ ಕರ್ನಾಟಕ ಬಿಜೆಪಿ ಇದೀಗ, ರಾಜ್ಯದಲ್ಲಿ 'ಟ್ಯಾಂಕರ್‌ ಮಾಫಿಯಾ ದೊಡ್ಡದಾಗಿದೆ' ಎಂದು ಆರೋಪಿಸಿದೆ. ಅಸಲಿಗೆ ಬಿಜೆಪಿ ಹೇಳಿದ್ದು ಏನು? ಮುಂದೆ ಓದಿ.

 BJP Alleged That Karnataka Government Is Supporting Water Tanker Mafia In The State

'ಟ್ಯಾಂಕರ್‌ ಮಾಫಿಯಾ' ಆರೋಪ!

ಕರ್ನಾಟಕದಲ್ಲಿ 'ಟ್ಯಾಂಕರ್‌ ಮಾಫಿಯಾ' ಅಂತಾ ಆರೋಪ ಮಾಡಿ ಟ್ವೀಟ್ ಮಾಡಿರುವ ಬಿಜೆಪಿ, 'ಬಡಾವಣೆಗಳಲ್ಲಷ್ಟೇ ಅಲ್ಲದೆ, ಕೈಗಾರಿಕಾ ಪ್ರದೇಶಗಳಲ್ಲೂ ಟ್ಯಾಂಕರ್‌ ಮಾಫಿಯಾಗೆ ವ್ಯವಹಾರ ಕುದುರಲಿ ಎಂಬ ಉದ್ದೇಶದಿಂದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಸರಬರಾಜು ಮಾಡುತ್ತಿದ್ದ ನೀರಿನ ಪ್ರಮಾಣದಲ್ಲಿ @INCKarnataka ಸರ್ಕಾರ ದಿಢೀರನೆ ಶೇ. 60ರಷ್ಟು ಕಡಿತ ಮಾಡಿದೆ.' ಎಂದು ಗಂಭೀರ ಆರೋಪ ಮಾಡಿದೆ ಕರ್ನಾಟಕ ಬಿಜೆಪಿ.

ಹಾಗೇ ತನ್ನ ಟ್ವೀಟ್ ಆರೋಪ ಮುಂದುವರಿಸಿರುವ ಕರ್ನಾಟಕ ಬಿಜೆಪಿ, 'ಉತ್ಪಾದನೆಗೆ ನೀರು ಅಗತ್ಯವಿಲ್ಲದ ಗಾರ್ಮೆಂಟ್ಸ್‌ನಂಥಲ್ಲಿಯೂ ನೌಕರರಿಗೂ ನೀರಿಲ್ಲದೆ ಬೀಗ ಜಡಿಯುವ ಸ್ಥಿತಿ ನಿರ್ಮಾಣವಾಗಿ ಪೀಣ್ಯ ಕೈಗಾರಿಕಾ ಪ್ರದೇಶದ 12 ಲಕ್ಷ ಕಾರ್ಮಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. @siddaramaiah ಸರ್ಕಾರದ ಕಲೆಕ್ಷನ್‌ ದಾಹದಿಂದಾಗಿ ಪೀಣ್ಯ ಕೈಗಾರಿಕಾ ಪ್ರದೇಶವೊಂದರಲ್ಲೇ ಸುಮಾರು 4.5 ಲಕ್ಷ ಮಹಿಳೆಯರು ವೇತನ ಕಡಿತದ ತೂಗುಗತ್ತಿಯ ಅಡಿಯಲ್ಲಿ ದಿನದೂಡು ವಂತಾಗಿದೆ.' ಎಂದು ಗಂಭೀರ ಆರೋಪ ಮಾಡಿದೆ.

ಹೀಗೆ ರಾಜ್ಯದಲ್ಲಿ ರಾಜಕೀಯ ತಿಕ್ಕಾಟ ಈಗ ಟ್ಯಾಂಕರ್ ಮಾಫಿಯಾಗೂ ತಗುಲಿದೆ. ಆದರೆ, ಈ ತಿಕ್ಕಾಟ ಕೇವಲ ಮಾತಿಗೆ ಮಾತ್ರ ಸೀಮಿತ ಆಗಿರುತ್ತಾ? ಅಥವಾ ಜನರ ಸಮಸ್ಯೆಗಳನ್ನೂ ಬಗೆಹರಿಸುತ್ತಾ? ಅನ್ನೋದನ್ನ ಕಾದು ನೋಡಬೇಕಿದೆ. ಅದರಲ್ಲೂ ಬೆಂಗಳೂರು ನಗರದಲ್ಲಿ ನೀರಿಗೆ ಭಾರಿ ಸಮಸ್ಯೆ ಎದುರಾಗಿದ್ದು, ಜನರು ಹನಿ ಹನಿ ನೀರಿಗೂ ಪ್ರತಿನಿತ್ಯ ಕಷ್ಟಪಡುವ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಿದ್ದಾಗ ರಾಜ್ಯ ಸರ್ಕಾರ ಈ ಬಗ್ಗೆ ಯಾವಾಗ ಸೂಕ್ತವಾದ ಕ್ರಮ ಕೈಗೊಳ್ಳುತ್ತೆ, ಆ ಮೂಲಕ ಸಮಸ್ಯೆಯನ್ನು ಯಾವಾಗ ಸರಿ ಮಾಡುತ್ತೆ ಅಂತಾ ಈಗ ರಾಜಧಾನಿಯ ಜನರು ಕಾಯುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+