'ಕುಕ್ಕರ್‌ ಬಾಂಬ್‌ ಬ್ಲಾಸ್ಟ್ ಮಾಡಿದ ಬ್ರದರ್ಸ್‌ಗಳ ಬ್ರದರ್‌ರಿಂದ ಕುಕ್ಕರ್‌ ಹಂಚಿಕೆ'

ಬೆಂಗಳೂರು, ಫೆಬ್ರವರಿ 23: 2024ರ ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಾಂಗ್ರೆಸ್ ಸಂಸದ ಡಿ.ಕೆ ಸುರೇಶ್ ಮತದಾರರನ್ನು ಸೆಳೆಯಲು ಕುಕ್ಕರ್ ವಿತರಿಸಿ ಆಮಿಷವೊಡ್ಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಟ್ವೀಟ್ ಮೂಲಕ ಕ್ರಮಕ್ಕೆ ಒತ್ತಾಯಿಸಿದೆ.

ಕುಕ್ಕರ್‌ ಬಾಂಬ್‌ ಬ್ಲಾಸ್ಟ್ ಮಾಡಿದ ಬ್ರದರ್ಸ್‌ಗಳ ಬ್ರದರ್‌ರಿಂದ ಕುಕ್ಕರ್‌ ಹಂಚಿಕೆ ಎಂದು ಕಾಂಗ್ರೆಸ್‌ ಸಂಸದ ಡಿ.ಕೆ ಸುರೇಶ್ ವಿರುದ್ಧ ಬಿಜೆಪಿ ವ್ಯಂಗ್ಯವಾಡಿದ್ದಾರೆ.

 BJP Alleged That Congress MP D.K Suresh Is Luring Voters By Distributing Cookers

ದೇಶದ ವಿಭಜನೆ ಮಾಡುವ ಸಂಚು ರೂಪಿಸಿದ್ದ ಬೆಂಗಳೂರು ಗ್ರಾಮಾಂತರ ಸಂಸದ ಡಿ. ಕೆ. ಸುರೇಶ್ ಅವರಿಗೆ ಚುನಾವಣೆ ಘೋಷಣೆ ಮುನ್ನವೇ ಸೋಲಿನ ಭೀತಿ ಶುರುವಾಗಿದೆ. ಗೂಂಡಾಗಿರಿ ಮಾಡುವ ಜೊತೆಗೆ ಸ್ವಲ್ಪ ಅಭಿವೃದ್ಧಿಯನ್ನು ಮಾಡಿದ್ದರೆ, ಈಗ ಊರಿಗಿಂತ ಮುಂಚೆ ಮತದಾರರಿಗೆ ಕುಕ್ಕರ್‌ ಹಂಚುವ ಪ್ರಮೇಯ ಬರುತ್ತಿರಲಿಲ್ಲಾ ಡಿ .ಕೆ. ಸುರೇಶ್‌ ಅವರೇ.

ಅಂದ ಹಾಗೆ ಕನಕಪುರದಲ್ಲಿ ನೀವು ಪ್ರತಿ ಬಾರಿ ಗೆಲ್ಲುವುದು ಗೂಂಡಾಗಿರಿಯಿಂದ ಎಂದು ತಿಳಿದಿತ್ತು, ಆದರೆ ನಿಮ್ಮ ಗೂಂಡಾ ಮನಸ್ಸಿನೊಳಗೆ ವಾಮಮಾರ್ಗದ ಕುಕ್ಕರ್‌ ವಿಶಲ್‌ ಸಹ ಇದೆ ಎಂಬುದು ಇಂದು ಜಗಜ್ಜಾಹೀರಾಗಿದೆ. ಚುನಾವಣಾ ಆಯೋಗದವರೇ, ಮತದಾರರಿಗೆ ಕುಕ್ಕರ್‌ ಆಮಿಷ ಒಡ್ಡುತ್ತಿರುವ ಸಂಸದ ಡಿ. ಕೆ. ಸುರೇಶ್‌ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ ಎಂದು ಬಿಜೆಪಿ ಆಗ್ರಹಿಸಿದೆ.

ಅಯೋಧ್ಯೆಗೆ ಹೊರಟ ರೈಲಿಗೆ ಬೆಂಕಿ ಹಾಕುವ ಬೆದರಿಕೆ

ಮೈಸೂರಿನಿಂದ ಅಯೋಧ್ಯೆಗೆ ಹೊರಟ ರೈಲು ಹೊಸಕೋಟೆಗೆ ಬಂದಾಗ ದುಷ್ಕರ್ಮಿಗಳು ರೈಲಿಗೆ ಬೆಂಕಿ ಹಾಕುವ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಈ ಬಗ್ಗೆ ಬಿಜೆಪಿ ಪ್ರತಿಕ್ರಿಸಿದ್ದು, ಕೋಮು ಗಲಭೆ ಸೃಷ್ಟಿಸಿ ಕೋಲಾಹಲದಲ್ಲಿ ಲಾಭ ಮಾಡಿಕೊಳ್ಳುವ ತವಕದಲ್ಲಿ ಕಾಂಗ್ರೆಸ್‌ ಸರ್ಕಾರ ಇರುವುದು ಸ್ಪಷ್ಟವಾಗುತ್ತಿದೆ.

 BJP Alleged That Congress MP D.K Suresh Is Luring Voters By Distributing Cookers

ಅಯೋಧ್ಯೆಗೆ ತೆರಳುವ ರೈಲನ್ನು ತಡೆದು ಕೆಲ ಅನ್ಯಕೋಮಿನ ಯುವಕರು ರೈಲಿಗೆ ಬೆಂಕಿ ಹಚ್ಚುತ್ತೇವೆ ಎಂದು ಧಮ್ಕಿ ಹಾಕುತ್ತಿರುವುದು ಕೋಮು ಗಲಭೆ ಸೃಷ್ಟಿಗೆ ಸರ್ಕಾರದ ಪ್ರಾಯೋಜಕತ್ವ ಇರುವ ಕಾರಣದಿಂದ ಎಂದು ಬಿಜೆಪಿ ಆರೋಪಿಸಿದೆ.

ಇದುವರೆಗೆ ಕಲ್ಲು ತೂರಾಟ, ತಲವಾರು ಝಳಪಿಸುವಿಕೆಗೆ ಸೀಮಿತವಾಗಿದ್ದ ಕಿಡಿಗೇಡಿಗಳ ದಾಂಧಲೆ, ಇದೀಗ ತಮ್ಮ ರಾಜಕೀಯ ರಕ್ಷಣೆ ಇದೆ ಎಂಬುದರ ಖಾತರಿಯಿಂದ ಅಯೋಧ್ಯೆ ರೈಲಿಗೆ ಬೆಂಕಿ ಹಚ್ಚುವ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದೆ. ಗೃಹಸಚಿವ ಡಾ. ಪರಮೇಶ್ವರ್ ಅವರೇ, ಕಾಂಗ್ರೆಸ್‌ನಿಂದಲೇ ಆಯ್ಕೆಯಾಗಿದ್ದ ದಲಿತ ಶಾಸಕರ ಮನೆಯ ಮೇಲೆ ಬೆಂಕಿ ಹಚ್ಚಿಸಿದಂತೆ ಈ ಪ್ರಕರಣವನ್ನೂ ಪರಿಗಣಿಸಬೇಡಿ.

ತಪ್ಪಿತಸ್ಥರನ್ನು ಕೂಡಲೇ ಹೆಡೆಮುರಿಕಟ್ಟಿ ದಾಂಧಲೆಕೋರರಿಗೆ ಸ್ಪಷ್ಟ ಸಂದೇಶ ರವಾನಿಸಿ. ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಹದ್ದುಬಸ್ತಿನಲ್ಲಿದೆ ಎಂಬುದನ್ನು ಖಾತರಿಪಡಿಸಿ, ಇಲ್ಲವೇ ಗೃಹ ಸಚಿವರ ಜವಾಬ್ದಾರಿಯಿಂದ ಹೊರಬಂದು ಸಮರ್ಥರಿಗೆ ಅವಕಾಶ ಮಾಡಿಕೊಡಿ ಎಂದು ಆಗ್ರಹಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+