Belekeri port scam: ಬೇಲೆಕೇರಿ ಅದಿರು ಲೂಟಿ ಕೇಸ್‌ನಿಂದ ಬಿಜೆಪಿ ತಲೆತಗ್ಗಿಸಬೇಕು- ಹೆಚ್‌ಕೆ ಪಾಟೀಲ್
ಬೇಲೆಕೇರಿ ಅದಿರು ಲೂಟಿ ಕೇಸ್‌ನಲ್ಲಿ ಭಾಗಿಯಾಗಿದ್ದ 23 ಅಧಿಕಾರಿಗಳನ್ನ ಬಿಜೆಪಿ ದೋಷಮುಕ್ತ ಮಾಡಿದೆ ಎಂದು ಸಚಿವ ಹೆಚ್‌ಕೆ ಪಾಟೀಲ್ ಹೊಸ ಬಾಂಬ್ ಸಿಡಿಸಿದ್ದಾರೆ. ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಕಾರವಾರ ಶಾಸಕ ಸತೀಶ್ ಸೈಲ್‌ಗೆ ಏಳು ವರ್ಷಗಳು ಜೈಲು ಶಿಕ್ಷೆಯನ್ನು ಕೋರ್ಟ್ ವಿಧಿಸಿದೆ. ಈ ಪ್ರಕರಣ ಕಾಂಗ್ರೆಸ್ ವಿರುದ್ಧ ವಾಗ್ದಾಳಿಗೆ ಬಿಜೆಪಿಗೆ ಬಹುದೊಡ್ಡ ಅಸ್ತ್ರ ಸಿಕ್ಕಂತಾಗಿದೆ. ಆದರೆ ಇದಕ್ಕೆ ಪ್ರತಿಯಾಗಿ ಹೆಚ್‌ಕೆ ಪಾಟೀಲ್ ಬಿಜೆಪಿಗೆ ತಿರುಗುಬಾಣ ಬಿಟ್ಟಿದ್ದಾರೆ.
ಹೌದು.. ಇಂದು ಬೀದರ್‌ನಲ್ಲಿ ಮಾತನಾಡಿದ ಅವರು, ಬೇಲೆಕೇರಿ ಅದಿರು ಲೂಟಿ ಪ್ರಕರಣದಲ್ಲಿ ಬಿಜೆಪಿ ಕೆಲ ಅಧಿಕಾರಿಗಳನ್ನು ದೋಷಮುಕ್ತ ಮಾಡಿದೆ. ಹೀಗಾಗಿ ಆರ್.ಅಶೋಕ್, ಪ್ರಹ್ಲಾದ್ ಜೋಶಿ ಸೇರಿದಂತೆ' ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಕರಣದಲ್ಲಿ ಭಾಗಿಯಾಗಿದ್ದ 23 ಅಧಿಕಾರಿಗಳನ್ನ ಬಿಜೆಪಿ ದೋಷಮುಕ್ತ ಮಾಡಿದೆ. ಈ ತೀರ್ಪಿನಿಂದ ಬಿಜೆಪಿ ಮುಖ ಕೆಳಗಡೆ ಹಾಕಬೇಕು ಎಂದು ಆಕ್ರೋಶಗೊಂಡರು.

ನೀವು ಅಧಿಕಾರದಲ್ಲಿ ಇರುವಾಗಲೇ ಈ ಘಟನೆ ನಡೆದಿದೆ. ಬಳಿಕ ಅವರನ್ನು ದೋಷ ಮುಕ್ತರನ್ನಾಗಿ ಮಾಡಿದ್ದೀರಿ. ಈಗ ನೀವು ಸಮಾಜದಲ್ಲಿ ತಲೆ ತಗ್ಗಿಸಬೇಕು. ಸಮಾಜದಲ್ಲಿ ಮುಖ ತೋರಿಸಲು ನಿಮಗೆ ನಾಚಿಕೆ ಅನಿಸಬೇಕು. ನೀವು ಇದಕ್ಕೆ ಪಶ್ಚಾತ್ತಾಪ ಪಡಬೇಕು. ಆತ್ಮಾವಲೋಕ ಮಾಡಿಕೊಳ್ಳಿ ಎಂದು ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.
ಯಾರು ಉಪ್ಪು ತಿಂದಿದ್ದಾರೋ ಅವರು ನೀರು ಕುಡಿಲೇಬೇಕು. ತಪ್ಪು ಮಾಡಿದವರಿಗೆ ಶಿಕ್ಷೆ ಆಗುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಅಂತಲೇ ತನಿಖೆ ಮಾಡಿಸಿದ್ದು. ಕೋರ್ಟ್ ಸೈಲ್‌ಗೆ ಶಿಕ್ಷೆ ನೀಡಿದ್ದು, ಲೂಟಿ ಮಾಡಿದವರಿಗೆ ಈ ಮಟ್ಟದ ಶಿಕ್ಷೆ ನೀಡಬಹುದು ಎಂದು ಕೋರ್ಟ್ ತೋರಿಸಿದೆ ಎಂದರು.
2009-10ರಲ್ಲಿ ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದ ತೀರ್ಪು ಅ. 26ರಂದು ಹೊರಬಿದ್ದಿದೆ. ಇದೇ ಪ್ರಕರಣದಡಿ, ಕಾರವಾರ ಶಾಸಕರಾದ ಸತೀಶ್ ಸೈಲ್ ಅವರಿಗೆ ಏಳು ವರ್ಷ ಸಜೆಯಾಗಿದ್ದು, ಕೋಟ್ಯಂತರ ರೂ. ಗಳ ದಂಡ ವಿಧಿಸಲಾಗಿದೆ.
ಆದೇಶ ಉಲ್ಲಂಘಿಸಿದ ಆರೋಪ ಹೊತ್ತಿದ್ದ ಪ್ರಮುಖ ನಾಲ್ಕು ಕಂಪನಿಗಳಲ್ಲಿ ಸತೀಶ್ ಸೈಲ್ ಅವರ ಮಾಲೀಕತ್ವದ ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿಯೂ ಒಂದು. 2009ರಲ್ಲಿ ಅರಣ್ಯ ಇಲಾಖೆಗೆ ಈ ವಿಚಾರ ಗೊತ್ತಾಗಿ, ಅವರು ಬೇಲೆಕೇರಿ ಬಂದರಿನ ಮೇಲೆ ದಾಳಿ ನಡೆಸಿದ್ದರು. ಆ ಕಂಪನಿಯ ಹಡಗುಗಳಲ್ಲಿ ಸುಮಾರು 7 ಲಕ್ಷದ 23 ಸಾವಿರ ಮೆಟ್ರಿಕ್ ಟನ್ ಅದಿರು ಸಾಗಿಸಲಾಗಿತ್ತೆಂದು ಲೋಕಾಯುಕ್ತ ತನಿಖೆಯಲ್ಲಿ ಉಲ್ಲೇಖಿಸಲಾಗಿತ್ತು.
ಶ್ರೀ ಮಲ್ಲಿಕಾರ್ಜುನ ಶಿಪ್ಪಿಂಗ್ ಪ್ರೈವೇಟ್ ಲಿಮಿಟೆಡ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಸತೀಶ್ ಸೈಲ್, ಮಹೇಶ್ ಬಿಳಿಯೆ, ಕಾರಾಪುಡಿ ಮಹೇಶ್, ಸ್ವಸ್ತಿಕ್ ನಾಗರಾಜು ಸೇರಿದಂತೆ ಹಲವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿತ್ತು. ಅದೇ ಪ್ರಕರಣ ವಿಚಾರಣೆಗೊಳಪಟ್ಟು, ಈಗ 15 ವರ್ಷಗಳ ನಂತರದಲ್ಲಿ ಈಗ ತೀರ್ಪು ಬಂದಿದೆ.












Click it and Unblock the Notifications