ಹಕ್ಕಿ ಜ್ವರದ ಲಕ್ಷಣಗಳು ಮತ್ತು ಮುನ್ನೆಚ್ಚರಿಕೆ

ಬೆ೦ಗಳೂರು, ಮೇ 12: ಹಕ್ಕಿಜ್ವರ ಹರಡದ೦ತೆ ಎಲ್ಲ ರೀತಿಯ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ನಾಗರಿಕರು ಹಕ್ಕಿ ಜ್ವರದ ಬಗ್ಗೆ ಯಾವುದೇ ರೀತಿಯ ಭಯ ಪಡೆಬೇಕಾದ ಅಗತ್ಯ ಇಲ್ಲ ಎಂದು ಪಶುಸ೦ಗೋಪನಾ ಇಲಾಖೆ ತಿಳಿಸಿದೆ.

ಎಚ್‌5 ಎನ್‌1 (ಹಕ್ಕಿಜ್ವರ) ವೈರಸ್‌ ಪತ್ತೆಯಾದ ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ಮೊಳಕೇರಾ ಸಮೀಪದ ಕೋಳಿಫಾರ್ಮ್ ನಲ್ಲಿ ಬುಧವಾರ ಸಂಜೆವರೆಗೆ ಅಂದಾಜು 80 ಸಾವಿರ ಕೋಳಿ ನಾಶಪಡಿಸಲಾಗಿದೆ. ಕೋಳಿ ನಾಶಪಡಿಸುತ್ತಿರುವವರು ಕಾರ್ಯಾಚರಣೆ ಮುಗಿದ ಅನಂತರ 10 ದಿನಗಳ ಕಾಲ ಮನೆಗಳಿಗೆ ತೆರಳುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.[ಹಕ್ಕಿ ಜ್ವರ : ಬೀದರ್‌ನಲ್ಲಿ ಕೋಳಿಗಳ ಸಂಹಾರ ಆರಂಭ]

health

ಬೆ೦ಗಳೂರಿಗೆ ರಾಜ್ಯ ಹಾಗೂ ಹೊರ ರಾಜ್ಯಗಳಿ೦ದ ಸರಬರಾಜಾಗುತ್ತಿರುವ ಕೋಳಿ ಹಾಗೂ ಮೊಟ್ಟೆಗಳನ್ನು ಪರೀಕ್ಷಿಸಲಾಗುತ್ತಿದೆ. ಬೆ೦ಗಳೂರಿನಲ್ಲಿ ಇದುವರೆಗೆ ಹಕ್ಕಿಜ್ವರದ ಪ್ರಕರಣಗಳು ಪತ್ತೆಯಾಗಿಲ್ಲ. ಸೋ೦ಕು ತಗುಲಿದ ಕೋಳಿಗಳನ್ನು ಪರೀಕ್ಷೆಗಾಗಿ ಪ್ರಯೋಗಾಲಕ್ಕೆ ಕಳುಹಿಸಲು ಮತ್ತು ಸ್ವಚ್ಛತೆ ಕಾಪಾಡಿಕೊಳ್ಳಲು ಪಶುಸಂಗೋಪನಾ ಇಲಾಖೆ ತಿಳಿಸಿದೆ.

ಹಕ್ಕಿ ಜ್ವರ ಮುನ್ನೆಚ್ಚರಿಕೆ ಕ್ರಮಗಳು ಯಾವವು?
* ಹಕ್ಕಿಜ್ವರ ಮನುಷ್ಯರಿ೦ದ ಮನುಷ್ಯರಿಗೆ ಹರಡುವುದಿಲ್ಲ. ಸೋ೦ಕು ತಗುಲಿದ ಕೋಳಿ ಹಾಗೂ ಪಕ್ಷಿಗಳಿ೦ದ ಹರಡುತ್ತದೆ.
* ಈ ಜ್ವರದ ವೈರಾಣುಗಳು ಗಾಳಿಯಲ್ಲಿ ಹರಡುವುದರಿ೦ದ ಮನೆ ಹಾಗೂ ಕೋಳಿ ಫಾರ೦ಗಳಲ್ಲಿ ಕೋಳಿ ಸಾಕುವವರು ಮೂಗಿಗೆ ಮಾಸ್ಕ್ ಧರಿಸಬೇಕು.
* ಫಾರ೦ನಿ೦ದ ಹೊರಬ೦ದ ನ೦ತರ ಸ್ನಾನ ಮಾಡುವುದು ಕಡ್ಡಾಯ
* ಹಕ್ಕಿಜ್ವರ ಬ೦ದ ಕೋಳಿ ಹಾಗೂ ಮೊಟ್ಟೆಯನ್ನು ಚೆನ್ನಾಗಿ ಬೇಯಿಸಿ ತಿ೦ದರೆ ರೋಗ ಹರಡುವ ಭೀತಿ ಇಲ್ಲ.
* ಆದರೆ, ಹಸಿಯಾಗಿ ಅಥವಾ ಅರೆಬೆ೦ದ ಮಾ೦ಸ ಸೇವಿಸಿದರೆ ರೋಗ ತಗಲುತ್ತದೆ ಎಂಬುದು ಎಚ್ಚರಿಕೆಯಲ್ಲಿರಲಿ
* ಹಕ್ಕಿಜ್ವರದ ಚಿಕಿತ್ಸೆಯಲ್ಲಿ "ಟ್ಯಾಮಿಫ್ಲೂ' ಮಾತ್ರೆ ಬಳಸಲಾಗುತ್ತದೆ. ಮಾತ್ರೆಗಳ ಸ೦ಗ್ರಹ ಸಾಕಷ್ಟು ಇರುವುದರಿ೦ದ ಚಿಕಿತ್ಸೆಗೂ ಯಾವುದೇ ತೊ೦ದರೆಯಾಗುವುದಿಲ್ಲ ಎ೦ದು ಆರೋಗ್ಯ ಇಲಾಖೆ ಸಹ ಮಾಹಿತಿ ನೀಡಿದೆ.

ಹಕ್ಕಿ ಜ್ವರದ ಲಕ್ಷಣಗಳೇನು?
* ಸೋಂಕಿಗೆ ಒಳಗಾಗುವ ವ್ಯಕ್ತಿಗಳಲ್ಲಿ 2-3 ದಿನದಲ್ಲಿ ರೋಗ ಲಕ್ಷಣಗಳು ಪ್ರಕಟವಾಗುತ್ತವೆ.
* ಅತಿಯಾದ ಜ್ವರ, ಕೆಮ್ಮು, ತಲೆನೋವು, ಉಸಿರಾಡಲು ತೊಂದರೆಯಾಗುವುದು ಕಾಯಿಲೆಯ ಪ್ರಮುಖ ಲಕ್ಷಣಗಳು.
* ಎಕ್ಸ್‌ರೇ ಪರೀಕ್ಷೆಯಿಂದ ಎದೆಯಲ್ಲಿ ಉಂಟಾಗಿರುವ ಬದಲಾವಣೆಗಳು ಎದ್ದು ಕಾಣುತ್ತವೆ.
* ಹಕ್ಕಿ ಜ್ವರದಿಂದ ಉಸಿರಾಟ ಸಮಸ್ಯೆ ಎದುರಾಗಿ ಸಾವು ಸಂಭವಿಸಬಹುದು.
* ಕಾಯಿಲೆ ಆರಂಭದ 48 ಗಂಟೆಗಳಲ್ಲಿ ಔಷಧ ತೆಗೆದುಕೊಂಡರೆ ಪರಿಣಾಮ ಹೆಚ್ಚು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+