ಬಿಹಾರದಲ್ಲಿ ನಾಲ್ಕು ನಿಮಿಷದಲ್ಲಿ HDFC Bank ನಲ್ಲಿ 1.19 ಕೋಟಿ ರೂ. ದರೋಡೆ ಪ್ರಕರಣ
ಬೆಂಗಳೂರು, ಜೂ. 12: ಕೋವಿಡ್ 19 ನಿಂದ ಕೋಟ್ಯಂತರ ಮಂದಿ ಉದ್ಯೋಗ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಕೊರೊನಾ ಲಾಕ್‌ಡೌನ್ ಕಾಲದಲ್ಲಿ ಅಪರಾಧಗಳು ಕಡಿಮೆಯಾಗಿರುವ ಅಂಕಿ ಅಂಶಗಳನ್ನು ಪೊಲೀಸ್ ಇಲಾಖೆ ಬಿಡುಗಡೆ ಮಾಡುತ್ತಿದೆ. ಬಿಹಾರದ ವೈಶಾಲಿ ಜಿಲ್ಲೆಯ ಹಜಿಪುರ ಪಟ್ಟಣದ ಎಚ್‌ಡಿಎಫ್ ಸಿ ಬ್ಯಾಂಕ್ ನ " ನಾಲ್ಕು ನಿಮಿಷದ ರಾಬರಿ" ಪ್ರಕರಣ ಇಡೀ ದೇಶಕ್ಕೆ ಎಚ್ಚರಕೆ ಸಂದೇಶ ರವಾನಿಸಿದೆ. " ಎಚ್‌ಡಿಎಫ್ ಸಿ ಬ್ಯಾಂಕ್ ರಾಬರಿ" ಸಿಸಿಟಿವಿ ದೃಶ್ಯ ಆಧರಿಸಿದ ಎಚ್ಚರಿಕೆ ಸಂದೇಶ ಬ್ಯಾಂಕಿಂಗ್ ಉದ್ಯೋಗ ವಲಯದಲ್ಲಿ ವೈರಲ್ ಆಗಿದೆ. ಬ್ಯಾಂಕಿಂಗ್ ಕ್ಷೇತ್ರದವರು ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ "ರೆಡ್ ಅಲರ್ಟ್ " ಸಂದೇಶ ರವಾನಿಸಲಾಗಿದೆ.
ಕೊರೊನಾ ಸೋಂಕಿನಿಂದ ಕೋಟ್ಯಂತರ ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಜನ ಸಾಮಾನ್ಯರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಇಂತಹ ಸಂಕಷ್ಟ ಸ್ಥಿತಿಯಲ್ಲಿ ಕ್ರಿಮಿನಲ್ ಗಳು ಗನ್ ಹಿಡಿದು ಅಪರಾಧ ಲೋಕಕ್ಕೆ ಎಂಟ್ರಿ ಕೊಡುವ ಸ್ಥಿತಿ ನಿರ್ಮಾಣವಾಗಿದೆ. ಕೊರೊನಾ ಸಂಕಷ್ಟದಲ್ಲಿ ಸೈಬರ್ ಕ್ರಿಮಿನಲ್ ಗಳು "ಕೊರೊನಾ ಸೋಂಕು ಸ್ಕೀಮ್" ಹೆಸರಿನಲ್ಲಿಯೇ ಲಕ್ಷಾಂತರ ಮಂದಿಗೆ ಮೋಸ ಮಾಡುತ್ತಿರುವ ಪ್ರಕರಣಗಳು ವರದಿಯಾಗುತ್ತಿವೆ. ಭವಿಷ್ಯದಲ್ಲಿ ಅಪರಾಧ ಕೃತ್ಯಗಳು ಕೈ ಮೀರಲಿದ್ದು, ಸಾರ್ವಜನಿಕರ ಜಾಗರೂಕರಾಗಿರಬೇಕು.
ಅಮಾವಾಸ್ಯೆ ಮತ್ತು ತಿಪ್ಪೆ ಗಿರಿನಗರ ಪೊಲೀಸರ ಬಲೆಗೆ!

ದೇಶದ ಬ್ಯಾಂಕಿಂಗ್ ಉದ್ಯೋಗಿಗಳಿಗೆ "ಕೊರೊನಾ ರೆಡ್ ಅಲರ್ಟ್ " ಸಂದೇಶ
ಪೊಲೀಸರಂತೂ ಮೈಯಲ್ಲಾ ಕಣ್ಣಿಟ್ಟು ಕೆಲಸ ಮಾಡಬೇಕು. ಬ್ಯಾಂಕಿಂಗ್ ಕ್ಷೇತ್ರವಂತೂ ಅತಿ ಜಾಗರೂಕರಾಗಿರಬೇಕು. ಸ್ವಲ್ಪ ಯಾಮಾರಿದರೂ ಬದುಕು, ಭವಿಷ್ಯ ಕಳೆದುಕೊಳ್ಳವ ಸಂಕಷ್ಟ ಎದುರಾಗಬಹುದು. ಬಿಹಾರದ ವೈಶಾಲಿ ಜಿಲ್ಲೆಯ ಹಜಿಪುರ್ ನಲ್ಲಿ ನಡೆದಿರುವ ಎಚ್‌ಡಿಎಸ್ ಸಿ ಬ್ಯಾಂಕ್ ರಾಬರಿ ಪ್ರಕರಣ ಇಂತಹ ಸಂದೇಶವೊಂದು ರವಾನಿಸಿದೆ. ಬ್ಯಾಂಕಿಂಗ್ ವಲಯದ ಪ್ರತಿ ಉದ್ಯೋಗಿಗೂ ಎಚ್ಚರಿಕೆ ಸಂದೇಶ ರವಾನಿಸಿದೆ.

ಏನಿದು ಘಟನೆ
ಬಿಹಾರ ರಾಜ್ಯದ ವೈಶಾಲಿ ಜಿಲ್ಲೆಯ ಹಜಿಪುರ ಪಟ್ಟಣದಲ್ಲಿ ಎಚ್‌ಡಿಎಫ್ ಸಿ ಬ್ಯಾಂಕ್ ಇದೆ. ಜೂ. 10 ರಂದು ಬೆಳಗ್ಗೆ ಗ್ರಾಹಕರ ಸೋಗಿನಲ್ಲಿ ನುಗ್ಗಿರುವ ದರೋಡೆಕೋರರು ಬ್ಯಾಂಕ್ ಸಿಬ್ಬಂದಿಗೆ ಗನ್ ಪಾಯಿಂಟ್ ತೋರಿಸಿ ಕೇವಲ ನಾಲ್ಕು ನಿಮಿಷದಲ್ಲಿ 1.19 ಕೋಟಿ ರೂ. ದೋಚಿ ಪರಾರಿಯಾಗಿದ್ದಾರೆ. ದರೋಡೆಕೋರರು ಗನ್ ತೋರಿಸಿ ಬೆದರಿಸಿದ ಶೈಲಿಗೆ ಬ್ಯಾಂಕ್ ಸಿಬ್ಬಂದಿಯಲ್ಲಿ ಒಬ್ಬ ಕೂಡ ಪೊಲೀಸರಿಗೆ ವಿಷಯ ತಿಳಿಸುವ ಧೈರ್ಯ ಮಾಡಿಲ್ಲ. ಮಾತ್ರವಲ್ಲ ಸೈರನ್ ಬಟನ್ ಕೂಡ ಒತ್ತಲು ಬಿಟ್ಟಿಲ್ಲ. ಹಾಡ ಹಗಲೇ ನಡೆದಿರುವ ಈ ಘಟನೆ ಬ್ಯಾಂಕಿಂಗ್ ವಲಯವನ್ನೇ ಬೆಚ್ಚಿ ಬೀಳಿಸಿದೆ. ಅದರಲ್ಲೂ ಕೇಂದ್ರ ಸಚಿವ ನಿತ್ಯಾನಂದ ರೈ ಮನೆಯ ಸಮೀಪದಲ್ಲೇ ಈ ರೀತಿಯ ಕೃತ್ಯ ನಡೆದಿರುವುದು ಗಾಬರಿ ಹುಟ್ಟಿಸುವಂತಿದೆ. ದರೋಡೆಕೋರರ ಸಿನಿಮಾ ಮಾದರಿಯ ದರೋಡೆ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಕುರಿತು ಹಜಿಪುರ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಎಚ್ಚರಿಕೆ ಸಂದೇಶ
ಎಚ್ ಡಿ ಎಫ್ ಸಿ ಬ್ಯಾಂಕ್ ದರೋಡೆ ಸಿಸಿಟಿವಿ ದೃಶ್ಯ ನೋಡಿ ಇಡೀ ಬ್ಯಾಂಕಿಂಗ್ ಕ್ಷೇತ್ರವೇ ಬೆಚ್ಚಿ ಬಿದ್ದಿದೆ. ಮಾತ್ರವಲ್ಲ, ಬ್ಯಾಂಕ್ ಸಿಬ್ಬಂದಿಗೆ ಇದೊಂದು ಪಾಠ. ಕೂಡಲೇ ಎಚ್ಚೆತ್ತುಕೊಳ್ಳಬೇಕು. ಬ್ಯಾಂಕಿಂಗ್ ಸಿಬ್ಬಂದಿ ಜಾಗರೂಕರಾಗಿರಬೇಕು ಎಂದು ಕೆಲವು ಸಲಹೆಗಳನ್ನು ಕೂಡ ನೀಡಲಾಗಿದೆ. ರಾಜ್ಯದ ಬ್ಯಾಂಕ್ ಉದ್ಯೋಗಿಗಳ ವಲಯಲ್ಲೂ ಈ ಸಂದೇಶ ವೈರಲ್ ಆಗಿದೆ. ಶ್ರೀನಿವಾಸ್ ರಾವ್ ಎಂಬುವರು ಬ್ಯಾಂಕಿಂಗ್ ವಲಯದಲ್ಲಿ ಕೆಲಸ ಮಾಡುವ ಸಿಬ್ಬಂದಿ ವಹಿಸಬೇಕಾದ ಮುನ್ನೆಚ್ಚರಿಕೆ ಸಲಹೆ ನೀಡಿದ್ದಾರೆ.

ಎಚ್ಚರಿಕೆ ಇರಬೇಕು
1.ಬ್ಯಾಂಕ್ ಬಾಗಿಲು ತೆರೆಯುವಾಗ ಎಚ್ಚರಿಕೆ ಇರಬೇಕು.
2. ಬ್ಯಾಂಕ್ ಕ್ಲೋಸ್ ಮಾಡುವಾಗಲೂ ಸುತ್ತ ಮುತ್ತ ಅನುಮಾನಾಸ್ಪದ ವ್ಯಕ್ತಿಗಳ ಕಡೆ ಗಮನವಿರಲಿ.
3. ಮಧ್ಯಾಹ್ನ ಊಟದ ಸಮಯದಲ್ಲಿ ಅನವಶ್ಯಕ ಅಪರಿಚಿತರ ಜತೆ ಹರಟೆ ಹೊಡೆಯಬೇಡಿ.
4. ಬ್ಯಾಂಕ್ ಸಿಬ್ಬಂದಿ ಸುತ್ತುವರೆಯುವ ಅಪರಿಚಿತರ ಬಗ್ಗೆ ಸದಾ ಎಚ್ಚರಿಕೆ ವಹಿಸಬೇಕು.
5. ಇಡೀ ದರೋಡೆ ಕೃತ್ಯ ನಾಲ್ಕು ನಿಮಿಷದಲ್ಲಿ ಮುಗಿದಿದೆ. ಹೀಗಾಗಿ ನಿಮ್ಮ ಸುತ್ತ ಮುತ್ತ ಅಪರಿಚಿತರು ನಿಲ್ಲಲು ಬಿಡಬೇಡಿ.
6. ಬ್ಯಾಂಕ್ ಅಲಾರಮ್ ಸ್ವಿಚ್ ಗಳು ಎಲ್ಲಿವೆ ಎಂಬುದನ್ನು ಪ್ರತಿಯೊಬ್ಬರು ನೋಡಿಕೊಳ್ಳಿ. ಸಂದರ್ಭ ಬಂದಾಗ ಬಳಕೆ ಮಾಡಲು ಭಯ ಪಡಬೇಡಿ.
7. ಬ್ಯಾಂಕ್ ಗೆ ಅಗ್ಯ ಇರುವ ನಗದನ್ನು ಮಾತ್ರ ಇಟ್ಟುಕೊಳ್ಳಿ. ನಗದು ಹಣ ಹೊರಗೆ ತೆಗೆದುಕೊಂಡು ಹೋಗುವಾಗಲೂ ಎಚ್ಚರಿಕೆ ವಹಿಸಿ.
8. ಸಾರ್ವಜನಿಕರಿಗೆ ಕಾಣುವ ರೀತಿ, ನಗದು, ಜ್ಯುವೆಲರಿಯನ್ನು ಬ್ಯಾಂಕ್ ನಲ್ಲಿ ಇಡಬೇಡಿ.
9. ನಗದು, ಜ್ಯುವೆಲರಿ ರಕ್ಷಣೆಗೆ ಸುರಕ್ಷಿತ ಲಾಕರ್ ರೂಮ್ ಗಳ ಸೌಲಭ್ಯ ಬಳಸಿಕೊಳ್ಳಿ.
10. ನಗದು ವಹಿವಾಟಿನ ಟೇಬಲ್ ಗಳ ಬಗ್ಗೆ ಗಮನ ನೀಡಬೇಕು.