ಬನ್ನಿ..ಬನ್ನಿ..10 ಪೈಸೆಗೊಂದು ಸೀರೆ..ತಗೋಳ್ಳಿ..!

Posted By:
Subscribe to Oneindia Kannada

ಬೀದರ್, ಜೂನ್ 20 : ಬನ್ನಿ..ಬನ್ನಿ.. ಹತ್ ಪೈಸೆಗೊಂದು, ಇಪ್ಪತ್ ಪೈಸೆಗೊಂದ್..ಐವತ್ ಪೈಸೆಗೊಂದ್ ಸೀರೆ..ಸೀರೆ.. ಅರೇ ಇದೇನಪ್ಪಾ..! ಇಷ್ಟು ಕಡಿಮೆ ಬೆಲೆಗೆ ಸೀರೆ ಕೊಡ್ತವ್ರೆ ಅಂತೀರಾ...?

ಸುಳ್ಳಲ್ಲ ನಿಜ ಕಣ್ರಿ..ಬೀದರ್ ನ ಮಳಿಗೆಯೊಂದು ಗ್ರಾಹಕರಿಗಾಗಿ ಈ ವಿಶೇಷವಾದ ಸೀರೆ ಆಫರ್ ಗಳನ್ನು ನೀಡುತ್ತಿದೆ. 'ಸೃಷ್ಟಿ ದೃಷ್ಟಿ' ಸೀರೆ ಮಾರಾಟ ಮಳಿಗೆ ತನ್ನ ಗ್ರಾಹಕರಿಗೆ ರಂಜಾನ್ ಹಬ್ಬದ ಪ್ರಯುಕ್ತ ಕೇವಲ 10 ಪೈಸೆ, 20 ಪೈಸೆ ಹಾಗೂ 50 ಪೈಸೆಗಳಿಗೆ ಸೀರೆ ಮಾರಾಟ ಮಾಡುತ್ತಿದೆ.

ಇದೇ ಮಳಿಗೆ ಈ ಹಿಂದೆ ಕೇವಲ 20 ರು.ಗೆ ಸೀರೆ ಮಾರಾಟ ಮಾಡಿ ಸುದ್ದಿಮಾಡಿತ್ತು. ಇದೀಗ 10 ಪೈಸೆಗೆ ಸೀರೆ ಮಾರಾಟಕ್ಕಿಟ್ಟು ಮತ್ತೆ ಸುದ್ದಿಯಲ್ಲಿದೆ. ಈ ವಿಶೇಷವಾದ ಆಫರ್ ಇಂದಿನಿಂದ(ಜೂನ್ 20) ಜೂನ್ 25ರ ವರೆಗೆ ಬೆಳಿಗ್ಗೆ 10ಗಂಟೆಯಿಂದ 12:30ರವೆಗೆ ಇರಲಿದೆ. ಸೀರೆಗಳನ್ನು ಖರೀದಿಸುವುದಕ್ಕೂ ಕೆಲ ನಿಯಮಗಳು ಇವೆ. ಅವುಗಳನ್ನು ತಿಳಿಯಲು ಮುಂದೆ ಓದಿ..

 10, 20 ಹಾಗೂ 50 ಪೈಸೆಯ ನಾಣ್ಯ ಕೊಟ್ಟರೆ ಮಾತ್ರ ಸೇರೆ

10, 20 ಹಾಗೂ 50 ಪೈಸೆಯ ನಾಣ್ಯ ಕೊಟ್ಟರೆ ಮಾತ್ರ ಸೇರೆ

ಸೀರೆ ಆಯ್ಕೆಗೂ ಸಮಯ ನಿಗದಿ ಪಡಿಸಲಾಗಿದೆಯಂತೆ. ಆದರೆ, ಗ್ರಾಹಕರು ಸೀರೆ ಖರೀದಿಗೆ ಹೋಗುವಾವ 10, 20 ಹಾಗೂ 50 ಪೈಸೆಯ ನಾಣ್ಯಗಳನ್ನು ತೆಗೆದುಕೊಂಡು ಹೋಗಬೇಕು.

ಒಬ್ಬರಿಗೆ ಒಂದು ಸೀರೆ ಮಾತ್ರ

ಒಬ್ಬರಿಗೆ ಒಂದು ಸೀರೆ ಮಾತ್ರ

ಈ ನಾಣ್ಯ ನೀಡಿದರೆ ಮಾತ್ರ ನಿಮಗೆ ಸೀರೆ ಲಭ್ಯ ಎಂದು ಮಳಿಗೆ ಮಾಲೀಕ ಚಂದ್ರಶೇಖರ್ ಮಾತು. ಒಬ್ಬ ಗ್ರಾಹಕರು ಒಂದು ಸೀರೆ ಮಾತ್ರ ಆಯ್ಕೆ ಮಾಡಿಕೊಳ್ಳಬೇಕು.

350 ರು. ಬೆಲೆಬಾಳುವ ಸೀರೆ

350 ರು. ಬೆಲೆಬಾಳುವ ಸೀರೆ

10, 20 ಹಾಗೂ 50 ಪೈಸೆಗಳಿಗೆ ನೀಡಲಾಗುತ್ತಿರುವ ಸೀರೆ ತೀರಾ ಕಳಪೆ ಸೀರೆಯಲ್ಲ. ಅದು 350 ರು. ಬೆಲೆಬಾಳುವ ಸೀರೆಯನ್ನು ಕಡಿಮೆ ಬೆಲೆಗೆ ನಿಡಲಾಗುತ್ತಿದೆ. ಹೀಗಾಗಿ ಗ್ರಾಹಕರು ಸೀರೆ ಕೊಲ್ಳಲು ಅಂಗಡಿಗೆ ಮುಗೀಬೀಳುತ್ತಿದ್ದಾರೆ.

ನಾಣ್ಯಗಳಿಲ್ಲದೆ ಕೆಲವರು ನಿರಾಸೆ

ನಾಣ್ಯಗಳಿಲ್ಲದೆ ಕೆಲವರು ನಿರಾಸೆ

10, 20 ಹಾಗೂ 50 ಪೈಸೆಗಳ ನಾಣ್ಯಗಳ ಇಲ್ಲದಿದ್ದರಿಂದ ಕೆಲವರು ನಿರಾಸೆಯಿಂದ ಸೀರೆಗಳನ್ನ ನೋಡುತ್ತಾ ನಿಂತು ಮನೆಗೆ ತೆರಳಿದರು.

ಜನ ಮರುಳೋ ಜಾತ್ರೆ ಮರುಳೋ

ಜನ ಮರುಳೋ ಜಾತ್ರೆ ಮರುಳೋ

ಒಟ್ಟಿನಲ್ಲಿ ಜನ ಮರುಳೋ ಜಾತ್ರೆ ಮರುಳೋ ಎಂಬ ಮಾತಿನಂತೆ ಜನ ಮಳಿಗೆಗೆ ದಾಪುಗಾಲಿಡುತ್ತಿರುವುದು ಮಾತ್ರ ಅಚ್ಚರಿಯೇ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Bidar Srishti Drishti Store romzan offers to sale sarees each at 10, 20 and 50 paisa coins. The offer from June 20th to June 25th.
Please Wait while comments are loading...