ಬೀದರ್ : ಫೇಸ್ ಬುಕ್‌ನಲ್ಲಿ ಕಾಡುತ್ತಿದ್ದ ಕಿರಾತಕ ಸೆರೆ
ಬೀದರ್, ಜೂ. 16 : ಪಕ್ಕದ ಮನೆಯ ಯುವತಿ ಹೆಸರಿನಲ್ಲಿ ನಕಲಿ ಫೇಸ್ ಬುಕ್ ಖಾತೆ ತೆರೆದು ಅದಕ್ಕೆ ಅಶ್ಲೀಲ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ದುಷ್ಟ ಡಿಪ್ಲೋಮೋ ಇಂಜಿನಿಯರ್ ನನ್ನು ಹುಮ್ನಾಬಾದ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಆಕಾಶ್ ದಂತಕಾಳೆ ಎಂದು ಗುರುತಿಸಲಾಗಿದೆ. ಡಿಪ್ಲೋಮಾ ಓದುತ್ತಿರುವ ಈತ ಪಕ್ಕದ ಮನೆಯ ಯುವತಿ ಹೆಸರಿನಲ್ಲಿ 6 ಕ್ಕೂ ಹೆಚ್ಚು ನಕಲಿ ಫೇಸ್ ಬುಕ್ ಖಾತೆ ತೆರೆದು, ಅಶ್ಲೀಲ ಫೋಟೋಗಳನ್ನು ಅಪ್ ಲೋಡ್ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಪಕ್ಕದ ಮನೆಯ ಯುವತಿಯ ಲ್ಯಾಪ್ ಟಾಪ್ ನಿಂದ ಅವಳ ಫೋಟೋಗಳನ್ನು ಕದ್ದಿದ್ದ ಈತ, ಆ ಫೋಟೋಗಳನ್ನು ಬಳಸಿ ನಕಲಿ ಖಾತೆಗಳನ್ನು ತೆರದಿದ್ದ. ನಕಲಿ ಖಾತೆಗಳಲ್ಲಿ ನಾನು ಕಾಲ್ ಗರ್ಲ್ ಎಂದು ಬರೆದು ಮೊಬೈಲ್ ನಂಬರ್ ಗಳನ್ನು ನಮೂದಿಸಿದ್ದ. [ಫೇಸ್ ಬುಕ್ ಅಕೌಂಟಿಗೆ ಎರಡು ನಿಮಿಷದ ಮೌನ!]
ಕಳೆದ ಎರಡು ತಿಂಗಳಿಂದ ಯುವತಿ ಕುಟುಂಬದವರಿಗೆ ನಿತ್ಯ ಅನಾಮಿಕ ಕರೆಗಳು ಹಾಗೂ ಅಶ್ಲೀಲ ಸಂದೇಶಗಳು ಬರುತ್ತಿದ್ದವು. ಇದರಿಂದ ಮಾನಸಿಕವಾಗಿ ನೊಂದ ಯುವತಿ ಕುಟುಂಬದವರು ಭಾರತ ಯುವಜನ ಸೇನೆಯ ಕಾರ್ಯಕರ್ತರಿಗೆ ವಿಷಯ ತಿಳಿಸಿದ್ದರು.
ಆಕಾಶ್ ದಂತಕಾಳೆ ನಕಲಿ ಖಾತೆ ತೆರೆದು ಹಿಂಸೆ ನೀಡುತ್ತಿದ್ದಾನೆ ಎಂಬ ವಿಷಯ ತಿಳಿದ ಭಾರತ ಯುವಜನ ಸೇನೆಯ ಕಾರ್ಯಕರ್ತರು ಹುಮ್ನಾಬಾದ್ ಪೊಲೀಸರಿಗೆ ದೂರು ನೀಡಿದ್ದರು, ಸೈಬರ್ ಕ್ರೈಂ ಪೊಲೀಸರ ಸಹಕಾರದೊಂದಿಗೆ ಪೋಲಿಸರು ಆಕಾಶ್ ನನ್ನು ಬಂಧಿಸಿದಾಗ, ವಿಷಯ ಬೆಳಕಿಗೆ ಬಂದಿದೆ.












Click it and Unblock the Notifications