School Holiday: 80,000 ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ? ಇಂದಿನ ರಜೆ ಬಗ್ಗೆ ಪಕ್ಕಾ ಮಾಹಿತಿ ಇಲ್ಲಿದೆ...
ಭಾರತ್ ಬಂದ್... ಕರ್ನಾಟಕ ಬಂದ್... ಬೆಂಗಳೂರು ಬಂದ್... ಹಿಂಗೆ ನಿನ್ನೆಯಿಂದಲೂ ಹತ್ತಾರು ಜನ ಹತ್ತಾರು ರೀತಿಯಲ್ಲಿ ಬಂದ್ ಬಗ್ಗೆ ಮಾತನಾಡುತ್ತಿದ್ದು, ಹಾಗೇ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಬಗ್ಗೆ ಕೂಡ ಸುದ್ದಿ ಹರಿದಾಡುತ್ತಿದೆ. ಜುಲೈ 9 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಫಿಕ್ಸ್ ಅಂತಾನೂ ಕೆಲವರು ಸುದ್ದಿ ಹಬ್ಬಿಸಿದ್ದಾರೆ. ಹಾಗಾದ್ರೆ ಇವತ್ತು ನಿಜವಾಗೂ ಕರ್ನಾಟಕದ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆಯೇ? ಬನ್ನಿ ಈ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿ ತಿಳಿಯೋಣ...
ದುಡಿಯುವ ವರ್ಗದ ಕಾರ್ಮಿಕರು ಬಿಡಿಗಾಸಿಗೂ ಕಷ್ಟಪಡುವ ಪರಿಸ್ಥಿತಿ ಇದೆ, ಈ ಮೂಲಕ ಸರ್ಕಾರಗಳು ಬಡವರು & ಮಧ್ಯಮ ವರ್ಗದ ಜನರ ಬಗ್ಗೆ ಕಾಳಜಿಯನ್ನೇ ವಹಿಸುತ್ತಿಲ್ಲ ಎಂಬ ಆರೋಪ ಪದೇ, ಪದೇ ಕೇಳಿ ಬರುತ್ತಿದೆ. ಇದೇ ಕಾರಣಕ್ಕೆ ಇದೀಗ ದುಡಿಯುವ ವರ್ಗದ ಕಾರ್ಮಿಕರು ಕರ್ನಾಟಕ & ಬೆಂಗಳೂರು, ಸೇರಿದಂತೆ ಭಾರತದ ಮೂಲೆ ಮೂಲೆಯಲ್ಲೂ ದೊಡ್ಡ ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಅದರಲ್ಲೂ, ಭಾರತ್ ಬಂದ್ ಮಾಡುವ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಕಾರ್ಮಿಕ ಸಂಘಟನೆಗಳು ಮಹತ್ವದ ನಿರ್ಣಯ ಕೈಗೊಂಡಿವೆ. ಹೀಗಾಗಿಯೇ, ಜುಲೈ 9 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ?

ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ?
ಕಾರ್ಮಿಕರು ಈಗ ಒಗ್ಗಟ್ಟಿನಿಂದ ದೊಡ್ಡ ಮಟ್ಟದಲ್ಲಿ ಹೋರಾಟ ನಡೆಸಲು ಸಂಪೂರ್ಣ ಸಿದ್ಧರಾಗಿದ್ದಾರೆ. ದೇಶದಲ್ಲಿ ಕಾರ್ಮಿಕರ ಹೋರಾಟಗಳು ದೊಡ್ಡ ಮಟ್ಟದಲ್ಲಿ ನಡೆಯುತ್ತವೆ, ಹಾಗೇ ಕಾರ್ಮಿಕರು ಹೋರಾಟ ಮಾಡುತ್ತಾರೆ ಅಂದರೆ ದೊಡ್ಡ ಪ್ರತಿಭಟನೆ & ಭಾರತ ಬಂದ್ ಆಗುವುದು ಕೂಡ ಗ್ಯಾರಂಟಿ. ಆದರೆ, ಇದೇ ಸಮಯದಲ್ಲಿ ಜುಲೈ 9 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ? ಅನ್ನೋ ಪ್ರಶ್ನೆಯು ಕೂಡ ಉದ್ಭವಿಸಿತ್ತು...
ರಜೆ ಸಿಗುತ್ತಾ? ರಜೆ ಸಿಗಲ್ವಾ?
ಜುಲೈ 9 ಬುಧವಾರ ಶಾಲಾ & ಕಾಲೇಜುಗಳಿಗೆ ರಜೆ ಘೋಷಣೆ ಆಗುತ್ತಾ? ಅನ್ನೋ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದ್ದು, ಈವರೆಗೂ ಯಾವುದೇ ಶಾಲೆಗಳಲ್ಲಿ ಅಧಿಕೃತವಾಗಿ ರಜೆ ಘೋಷಣೆ ಆಗಿಲ್ಲ, ಆದರೆ ಪ್ರತಿಭಟನೆ ಬಿಸಿ ಹೆಚ್ಚಾಗುವ ಸಾಧ್ಯತೆ ದಟ್ಟವಾಗಿರುವ ಹಿನ್ನೆಲೆ ಪೋಷಕರಲ್ಲಿ ಆತಂಕ ಹೆಚ್ಚಾಗಿದೆ. ಇನ್ನು ಮತ್ತೊಂದು ಕಡೆ ಶಾಲಾ ಒಕ್ಕೂಟಗಳು ಬಂದ್ ಬಗ್ಗೆ ಪ್ರತಿಕ್ರಿಯೆ ನೀಡಿವೆ. ಭಾರತ್ ಬಂದ್‌ಗೆ ನಮ್ಮ ಬೆಂಬಲ ಇದೆ, ಆದರೂ ಸರ್ಕಾರಿ & ಖಾಸಗಿ ಶಾಲಾ ಕಾಲೇಜುಗಳು ಎಂದಿನಂತೆ ನಡೆಯುತ್ತೆ ಅಂತಾ ಕೃಪಾ ಸಂಘಟನೆ ಅಧ್ಯಕ್ಷ ಲೋಕೇಶ್ ತಾಳಿಕಟ್ಟೆ ಹೇಳಿದ್ದಾರೆ. ಮತ್ತೊಂದು ಕಡೆಯಲ್ಲಿ ಕ್ಯಾಮ್ಸ್ ಖಾಸಗಿ ಶಾಲಾ ಸಂಘಟನೆ ಬಂದ್‌ಗೆ ಬೆಂಬಲ ಇಲ್ಲ ಅಂತಾ ತಿಳಿಸಿದ್ದು, ಈ ಬಗ್ಗೆ ಸ್ಪಷ್ಟನೆ ಸಿಕ್ಕಂತೆ ಆಗಿದೆ. ಇನ್ನೊಂದು ಕಡೆ, ಈ ಬಗ್ಗೆ ಇನ್ನೂ ಅಧಿಕೃತ ಮಾಹಿತಿ ಶಿಕ್ಷಣ ಇಲಾಖೆಯಿಂದ ಸಿಕ್ಕಿಲ್ಲ, ಹೀಗಾಗಿ ಪೋಷಕರು & ಮಕ್ಕಳು ಕಾಯುವಂತೆ ಆಗಿದೆ.












Click it and Unblock the Notifications