ಬೆಂಗಳೂರಿನಿಂದ ವಿಜಯವಾಡಕ್ಕೆ ಐರಾವತ್ ಕ್ಲಬ್ ಕ್ಲಾಸ್ ಬಸ್ ಸೇವೆ, ವೇಳಾಪಟ್ಟಿ
ಶುಕ್ರವಾರ ಮತ್ತು ಶನಿವಾರದಂದು ಬೆಂಗಳೂರು ಮತ್ತು ವಿಜಯವಾಡ ನಡುವೆ ಐರಾವತ್ ಕ್ಲಬ್ ಕ್ಲಾಸ್ ಬಸ್ ಸೇವೆ ಇರಲಿದೆ.
ಬೆಂಗಳೂರು, ಜನವರಿ 31: ಕೆಎಸ್‌ಆರ್‌ಟಿಸಿ ಶುಕ್ರವಾರ ಮತ್ತು ಶನಿವಾರದಂದು ಬೆಂಗಳೂರು ಮತ್ತು ವಿಜಯವಾಡ ನಡುವೆ ಐರಾವತ್ ಕ್ಲಬ್ ಕ್ಲಾಸ್ ಬಸ್ ಸೇವೆಯನ್ನು ಒದಗಿಸಲಿದೆ.
ಶುಕ್ರವಾರದಂದು 1,420 ರೂಪಾಯಿ ಮತ್ತು ಶನಿವಾರದಂದು 1,310 ರೂಪಾಯಿ ದರ ವಿಧಿಸಿದೆ. ಎರಡೂ ದಿನಗಳಲ್ಲಿ ಬಸ್ ಬೆಂಗಳೂರು ಮತ್ತು ವಿಜಯವಾಡದಿಂದ ರಾತ್ರಿ 7.30 ಕ್ಕೆ ಹೊರಟು ಬೆಳಿಗ್ಗೆ 8.30ಕ್ಕೆ ತನ್ನ ಗಮ್ಯಸ್ಥಾನವನ್ನು ತಲುಪುತ್ತದೆ.
ಬೆಂಗಳೂರಿನಲ್ಲಿ ಬಸ್ ಶಾಂತಿನಗರ ಬಸ್ ನಿಲ್ದಾಣದಿಂದ ಹೊರಟು ಸಿಲ್ಕ್ ಬೋರ್ಡ್ ಜಂಕ್ಷನ್, ಇಬ್ಲೂರು ಜಂಕ್ಷನ್, ಮಾರತ್ತಹಳ್ಳಿ, ಐಟಿಐ ಗೇಟ್, ಕೆಆರ್ ಪುರಂ ಮತ್ತು ಹೊಸಕೋಟೆಯಲ್ಲಿ ನಿಲ್ಲುತ್ತದೆ. ಆಂಧ್ರಪ್ರದೇಶದಲ್ಲಿ ತಿರುಪತಿ, ನೆಲ್ಲೂರು ಮತ್ತು ಗುಂಟೂರಿನಲ್ಲಿ ನಿಲ್ದಾಣಗಳು ಇರುತ್ತವೆ.
ಕಳೆದ ವರ್ಷ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್‌ಆರ್‌ಟಿಸಿ) ಸುಮಾರು ಮೂರು ವರ್ಷಗಳ ನಂತರ ಬುಧವಾರ ರಾತ್ರಿ ಬೆಂಗಳೂರಿನಿಂದ ನೆರೆಯ ರಾಜ್ಯಗಳ ವಿವಿಧ ನಗರಗಳಿಗೆ ತನ್ನ ಎಲ್ಲಾ 800 ಪ್ರೀಮಿಯಂ ಬಸ್‌ಗಳನ್ನು ಓಡಿಸಲು ಪ್ರಾರಂಭಿಸಿತ್ತು. ಕೋವಿಡ್ -19 ಪ್ರಕರಣಗಳಲ್ಲಿ ಇಳಿಕೆಯಾದ ನಂತರ ಎಲ್ಲಾ ಪ್ರೀಮಿಯಂ ಬಸ್‌ಗಳನ್ನು ಓಡಿಸಲು ನಿರ್ಧರಿಸಿದೆ.
"ಕಳೆದ ಮೂರು ವರ್ಷಗಳ ನಂತರ ಬೆಂಗಳೂರು ಕೇಂದ್ರ ವಿಭಾಗದಲ್ಲಿ ಲಭ್ಯವಿರುವ ಸಂಪೂರ್ಣ ಪ್ರೀಮಿಯಂ ಬಸ್‌ಗಳ ಸೇವೆ ಒದಗಿಸಲಾಗುವುದು. ನಾವು ಪ್ರಯಾಣಿಕರಿಗೆ ಗುಲಾಬಿಗಳನ್ನು ಮತ್ತು ಮಕ್ಕಳಿಗೆ ಚಾಕೊಲೇಟ್‌ಗಳನ್ನು ನೀಡಿ ಬರಮಾಡಿಕೊಂಡಿದ್ದೇವೆ ಎಂದು ನಿಗಮದ ಅಧಿಕಾರಿಗಳು ತಿಳಿಸಿದ್ದರು.
ಪುದುಚೇರಿ, ಗೋವಾ, ಎರ್ನಾಕುಲಂ, ಕಣ್ಣೂರು, ಕೊಟ್ಟಾಯಂ, ತ್ರಿಶೂರ್, ಪಾಲಕ್ಕಾಡ್, ತಿರುವನಂತಪುರಂ, ಕ್ಯಾಲಿಕಟ್, ಕಾಸರಗೋಡು, ಕೊಯಮತ್ತೂರು, ಕೊಡೈಕೆನಾಲ್, ತಂಜಾವೂರು, ತಿರುಚ್ಚಿ, ವಿಝುಪ್ಪುರಂ, ತೆಲಂಗಾಣ, ವಿಜಯವಾಡ, ಹೈದರಾಬಾದ್, ಪಣಜಿ, ನೆಲ್ಲೂರು ಮತ್ತು ಶಿರಡಿ ಸೇರಿದಂತೆ ವಿವಿಧ ಸ್ಥಳಗಳಿಗೆ 200 ಹೆಚ್ಚುವರಿ ಬಸ್‌ಗಳನ್ನು ವಿಭಾಗವು ನಿಯೋಜಿಸಿತ್ತು.

ವೈದ್ಯಕೀಯ, ಯಾತ್ರಾ ಕೇಂದ್ರಗಳಿಗೆ ಬಸ್
ಪ್ರಯಾಣಿಕರಿಗೆ ಹೆಚ್ಚುವರಿ ಸೌಲಭ್ಯಗಳಾದ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ಮೊಬೈಲ್ ಶೌಚಾಲಯಗಳು, ಸಹಾಯ ಕೇಂದ್ರಗಳು ಇತ್ಯಾದಿಗಳನ್ನು ಸಹ ಜಾರಿಗೆ ತರಲಾಗುವುದು ಎಂದು ಪ್ರಕಟಣೆ ತಿಳಿಸಿತ್ತು. ದಕ್ಷಿಣ ಭಾರತ ಮತ್ತು ಉತ್ತರ ಭಾರತದ ಭಾಗಗಳಲ್ಲಿ ಕಳೆದ ದಶಕದಲ್ಲಿ ಹೊಸ ಪ್ರವಾಸಿ ತಾಣಗಳು, ವ್ಯಾಪಾರ, ಐಟಿ ಮತ್ತು ವೈದ್ಯಕೀಯ ಕೇಂದ್ರಗಳು ಮತ್ತು ಯಾತ್ರಾ ಕೇಂದ್ರಗಳು ಬರುತ್ತಿದ್ದು, ಕರ್ನಾಟಕ ರಾಜ್ಯ ರಸ್ತೆ ರಸ್ತೆ ಸಾರಿಗೆ ಸಂಸ್ಥೆ ಈ ಸ್ಥಳಗಳಿಗೆ ಬಸ್‌ಗಳನ್ನು ಓಡಿಸುವ ಚಿಂತನೆ ನಡೆಸಿದೆ ಎಂದು ಟಿಎನ್‌ಐಇ ವರದಿ ಮಾಡಿದೆ.

ಪ್ರಯಾಣಿಕರ ಅಗತ್ಯಗಳು ಬದಲಾಗಿವೆ
ನಿಗಮವು ಈಗಾಗಲೇ ಕೇರಳ, ಆಂಧ್ರಪ್ರದೇಶ, ತೆಲಂಗಾಣ ಮತ್ತು ತಮಿಳುನಾಡು ಸಾರಿಗೆ ಅಧಿಕಾರಿಗಳೊಂದಿಗೆ ಸಭೆಯನ್ನು ನಡೆಸಿದ್ದು, ಹೊಸ ಮಾರ್ಗಗಳ ಕುರಿತು ಶೀಘ್ರದಲ್ಲೇ ನಿರ್ಧರಿಸಲಿದೆ. ಕೆಎಸ್‌ಆರ್‌ಟಿಸಿಯ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್, "ವರ್ಷಗಳು ಕಳೆದಂತೆ ಪ್ರಯಾಣಿಕರ ಅಗತ್ಯಗಳು ಬದಲಾಗಿವೆ. ಹೊಸ ಪ್ರವಾಸಿ ತಾಣಗಳು ಅಭಿವೃದ್ಧಿಗೊಂಡಿವೆ. ಕೆಲವು ರಾಜ್ಯಗಳಲ್ಲಿ, ಮಲ್ಟಿ-ಸ್ಪೆಷಾಲಿಟಿ ಆಸ್ಪತ್ರೆಗಳು ಬಂದಿವೆ, ಐಟಿ ಕಂಪನಿಗಳು ಹೆಚ್ಚಾಗಿ ಹುಟ್ಟಿಕೊಂಡಿವೆ ಮತ್ತು ಅನೇಕ ಸ್ಥಳಗಳು ವ್ಯಾಪಾರ ಕೇಂದ್ರವಾಗಿ ಬದಲಾಗಿವೆ. ಈ ಬೆಳವಣಿಗೆಗಳ ಜೊತೆಗೆ ಹೊಸ ಬಡಾವಣೆಗಳೂ ಹುಟ್ಟಿಕೊಂಡಿರುವುದನ್ನು ಕಾಣಬಹುದು. ಜನಸಂಖ್ಯೆಯು ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಆಂಧ್ರ, ತಮಿಳುನಾಡು ಅಧಿಕಾರಿಗಳೊಂದಿಗೆ ಸಭೆ
ಹಳೆಯ ಅಂತರ-ರಾಜ್ಯ ಮಾರ್ಗ ಒಪ್ಪಂದಗಳಲ್ಲಿ ಈ ಅಗತ್ಯಗಳನ್ನು ತಿಳಿಸಲಾಗಿಲ್ಲ. "ನಾವು ವಿವಿಧ ರಾಜ್ಯಗಳೊಂದಿಗೆ ನಮ್ಮ ಮಾರ್ಗ ಒಪ್ಪಂದಗಳನ್ನು ನವೀಕರಿಸದೆ 12 ವರ್ಷಗಳಿಗಿಂತ ಹೆಚ್ಚು ಕಳೆದಿವೆ. ಈಗಾಗಲೇ ಕೇರಳ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಸಾರಿಗೆ ಸಂಸ್ಥೆ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದು, ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಅವರಿಗೂ ಕೆಲವು ಮಾರ್ಗಗಳು ಬೇಕು ಮತ್ತು ನಮಗೂ ಕೆಲವು ಮಾರ್ಗಗಳು ಬೇಕು ಎಂದು ತಿಳಿಸಿದ್ದಾರೆ.

ಅಹಮದಾಬಾದ್ ಮತ್ತು ಒಡಿಶಾದ ಪುರಿಗೂ ಬಸ್
ದಕ್ಷಿಣ ಭಾರತದ ರಾಜ್ಯಗಳಲ್ಲಿ, ಕೇರಳ, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಹೆಚ್ಚಿನ ಬಸ್‌ಗಳು ಓಡಲಿವೆ. ನಮಗೆ ಹೆಚ್ಚಿನ ಬೇಡಿಕೆ ಇರುವುದರಿಂದ ನಾವು ಗುಜರಾತ್‌ನ ಅಹಮದಾಬಾದ್ ಮತ್ತು ಒಡಿಶಾದ ಪುರಿ ಜಗನ್ನಾಥ್‌ಗೆ ನಮ್ಮ ಸೇವೆಗಳನ್ನು ನೀಡಲು ಪ್ರಯತ್ನಿಸುತ್ತಿದ್ದೇವೆ. ಅಂತರರಾಜ್ಯ ಮಾರ್ಗದ ಪ್ರಸ್ತಾವನೆಯನ್ನು ಸರ್ಕಾರದೊಂದಿಗೆ ಹಂಚಿಕೊಳ್ಳಲಾಗಿದ್ದು, ಅದು ಒಪ್ಪಿಗೆ ನೀಡಿ ಹೊಸ ಮಾರ್ಗಗಳನ್ನು ಸೂಚಿಸಿದ ನಂತರ ಕೆಎಸ್‌ಆರ್‌ಟಿಸಿ ಕಾರ್ಯಾಚರಣೆಯನ್ನು ಪ್ರಾರಂಭಿಸಬಹುದು ಎಂದು ಅವರು ಹೇಳಿದರು.
-
Karnataka Weather: ಬಿಸಿಲಿನಿಂದ ಕಂಗೆಟ್ಟಿದ್ದ ಕರುನಾಡಿಗೆ ತಂಪೆರೆಯಲಿದ್ದಾನೆ ವರುಣ; ಎಲ್ಲೆಲ್ಲಿ ಮಳೆ? ಇಲ್ಲಿದೆ ಮಾಹಿತಿ -
ಐಪಿಎಲ್ಗೂ ಮುನ್ನ ಆರ್ಸಿಬಿ ಹೊಸ ದಾಖಲೆ: 16,000 ಕೋಟಿಗೆ ಆದಿತ್ಯ ಬಿರ್ಲಾ ಗ್ರೂಪ್ ಪಾಲಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
ಬೆಂಗಳೂರು ಇ-ಖಾತಾ ದಂಧೆ ಬಯಲು: ಬ್ರ್ಯಾಂಡ್ ಬೆಂಗಳೂರಿಗೆ ಆರ್ ಅಶೋಕ್ ತೀವ್ರ ಟೀಕೆ -
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD










Click it and Unblock the Notifications