ಬೆಂಗಳೂರು ರೌಡಿ ಶೀಟರ್ ಬರ್ಬರ ಕೊಲೆ, ತಮಿಳುನಾಡಲ್ಲಿ ಮೃತದೇಹ ಪತ್ತೆ

ಬೆಂಗಳೂರು, ಮೇ 21: ರೌಡಿ ಶೀಟರ್ ಎಂಬ ಹಣೆಪಟ್ಟಿ ಹೊತ್ತು ತಿರುಗುವವರ ಜೀವಕ್ಕೆ ಯಾರಿಂದ ಯಾವಾಗ ಕುತ್ತು ಬರತ್ತದೋ ಹೇಳಲಾಗುವುದಿಲ್ಲ. ಅವರ ಕುಟುಂಬ-ಮಕ್ಕಳಿಗೆ ಯಾರು ಧಿಕ್ಕು ಎಂಬಂತಾಗುತ್ತದೆ. ಇದೀಗ ಬೆಂಗಳೂರಿನ ನಟೋರಿಯಸ್ ರೌಡಿಶೀಟರ್ ಕಥೆ ಹೀಗೆ ಆಗಿದ್ದು, ತಮಿಳುನಾಡಿನ ಕೃಷ್ಣಗಿರಿ ಬಳಿ ಆತನ ಶವ ಪತ್ತೆಯಾಗಿದೆ.

ರಾಜ್ಯ ರಾಜಾಧಾನಿ ಬೆಂಗಳೂರಿನ ಜಯನಗರದ ಪೊಲೀಸ್ ಠಾಣೆ ವ್ಯಾಪ್ತಿಯ ನಟೋರಿಯಸ್ ರೌಡಿಶೀಟರ್ ಆಗಿದ್ದ ಅಲ್ಯೂಮಿನಿಯಂ ಬಾಬುನನ್ನು ನೆರೆ ರಾಜ್ಯ ತಮಿಳುನಾಡಿನ ಕೃಷ್ಣಗಿರಿ ಹತ್ಯೆ ಮಾಡಲಾಗಿದೆ. ಮಾರಾಕಾಸ್ತ್ರಗಳಿಂದ ದುಷ್ಕರ್ಮಿಗಳ ಕೊಚ್ಚಿ ಕೊಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಪೊಲೀಸರು ಪ್ರಕರಣದ ತನಿಖೆ ಆರಂಭಿಸಿದ್ದಾರೆ.

Bengaluru Rowdy Sheeter Aluminium Babu Dead Body Detected In Krishnagiri Of Tamil Nadu

ಜಯನಗರ ಪೊಲೀಸ್ ಠಾಣೆಯಲ್ಲಿ ಮೃತ ರೌಡಿ ಶೀಟರ್ ಅಲ್ಯೂಮಿನಿಯಂ ಬಾಬು ಮೇಲೆ ಕೊಲೆ, ಸುಲಿಗೆ, ಬೆದರಿಕೆ, ದರೋಡೆ ಸೇರಿದಂತೆ ಅನೇಕ ಪ್ರಕರಣಗಳಲ್ಲಿ ಕೈವಾಡ ಹೊಂದಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಕೆಲವು ವರ್ಷಗಳಿಂದ ಬೆಂಗಳೂರಿನಲ್ಲಿದ್ದ ಬಾಬು ಸ್ವಲ್ಪದಿನಗಳ ಹಿಂದಷ್ಟೇ ನೆರೆ ರಾಜ್ಯ ತಮಿಳುನಾಡಿಗೆ ವಾಸ್ತವ್ಯ ಬದಲಿಸಿಕೊಂಡಿದ್ದ. ಕೊತ್ತನೂರಿನ ದಿಣ್ಣೆ ಬಳಿಕ ವ್ಯವಹಾರವೊಂದನ್ನು ನಡೆಸುತ್ತಿದ್ದ ಬಾಬುನನ್ನು ಅಪಹರಿಸಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಶಂಕಿಸಿದ್ದಾರೆ.

ಮೊದಲೇ ರೌಡಿ ಶೀಟರ್ ಆಗಿದ್ದ ಬಾಬು ಕೆಲವು ರಾಜಕಾರಣಿಗಳನ್ನು ಎದುರು ಹಾಕಿಕೊಂಡಿದ್ದ. ಅರಸಯ್ಯ ಎಂಬ ರೌಡಿಗಳ ಗ್ಯಾಂಗ್‌ನಲ್ಲಿ ಆತ ಗುರುತಿಸಿಕೊಂಡಿದ್ದ. ಆತನನ್ನು ಇದೀಗ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ತಮಿಳುನಾಡಿನ ಡೆಂಕಣಕೋಟೆ ಕಾಡಿನಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಅರೆಸುಟ್ಟ ಸ್ಥಿತಿಯಲ್ಲಿ ಬಾಬುನ ಶವ ಪತ್ತೆಯಾಗಿದೆ. ಈ ಕುರಿತು ತಮಿಳುನಾಡಿನ ತಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಹತ್ಯೆ ಹಂತಕರಿಗೆ ಬಲೆ ಬೀಸಿದ್ದಾರೆ.

Bengaluru Rowdy Sheeter Aluminium Babu Dead Body Detected In Krishnagiri Of Tamil Nadu

ಇನ್ನೂ ಪ್ರತ್ಯೇಕ ಪ್ರಕರಣವೊಂದರಲ್ಲಿ ಮೈಸೂರು ನಗರದ ರೌಡಿಶೀಟರ್​ ಆಗಿದ್ದ ಚಂದ್ರಶೇಖರ್ ಹತ್ಯೆಯ ಪ್ರಕರಣದಲ್ಲಿ ಸಿಸಿಬಿ ಪೊಲೀಸರು ಸುಮಾರು ಏಳು ಮಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಚಂದ್ರಶೇಖರ್ ಅಲಿಯಾಸ್ ಚಂದುನನ್ನ ದುಷ್ಕರ್ಮಿಕಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈದಿದ್ದರು. ಈ ಕುರಿತು ಮೈಸೂರಿನ ವಿವಿಪುರಂ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+