Bengaluru Rain: ಬೆಂಗಳೂರಿನಲ್ಲಿ ಮಳೆಯ ಆರ್ಭಟ ಶುರು, ಕೆಲಸಕ್ಕೆ ಹೋಗಲು ಆಗದೆ ಒದ್ದಾಡಿದ ಜನ!
ಅಯ್ಯಯ್ಯೋ... ಅದೇನು ಸುಡುಗಾಡು ಮಳೆಯೋ ಏನೋ... ಒಂದು ನಿಮಿಷ.. ಒಂದೇ ನಿಮಿಷ... ಹೀಗೆ ಮಳೆ ಬಗ್ಗೆ ಬೈತಾ ಇರೋದು ನಾವಲ್ಲ ರೀ, ಬದಲಾಗಿ ಬೆಂಗಳೂರಿನಲ್ಲಿ ಇವತ್ತು ಮಳೆಯ ನಡುವೆ ಕೆಲಸಕ್ಕೆ ಹೊರಟ ಜನರು ಹೀಗೆಲ್ಲಾ ಮಳೆರಾಯನಿಗೆ ಶಾಪ ಹಾಕಿ ತಮ್ಮ ಸಿಟ್ಟು ತೀರಿಸಿಕೊಂಡರು. ಯಾಕಂದ್ರೆ, ಇವತ್ತು ಬೆಂಗಳೂರಲ್ಲಿ ಬೆಳ್ಳಂ ಬೆಳಗ್ಗೆ ಮಳೆಯ ಆರ್ಭಟ ಶುರುವಾಗಿತ್ತು.
ಬೆಂಗಳೂರಿನಲ್ಲಿ ಡಿಸೆಂಬರ್ 11ರ ರಾತ್ರಿ ವಾತಾವರಣ ಮಾಮೂಲಿ ಆಗಿತ್ತು, ಹೀಗಾಗಿ ಜನರು ಕೂಡ ಡಿಸೆಂಬರ್ 12ರ ಬೆಳಗ್ಗೆ ಭರ್ಜರಿ ಬಿಸಿಲು ಬೀಳುತ್ತೆ ಬಿಡು ಅಂತಾ ಅಂದುಕೊಂಡಿದ್ರು. ಆದರೆ ನಿನ್ನೆ ರಾತ್ರಿ ನ್ಯೂಸ್ ಓದಿದ್ದ ಅಥವಾ ನೋಡಿದ್ದ ಜನರಿಗೆ ಮಾತ್ರ ಇವತ್ತು ಭಾರಿ & ಭರ್ಜರಿ ಮಳೆ ಬೀಳುತ್ತೆ ಅನ್ನೋದು ಗೊತ್ತಿತ್ತು. ಹೀಗಿದ್ದಾಗಲೇ ಇಂದು ಬೆಳಗ್ಗೆಯೇ ಮಳೆಯ ಮೋಡಗಳು ಎಂಟ್ರಿ ಕೊಟ್ಟು ಆಘಾತ ನೀಡಿದ್ದವು!

ಮಳೆಯಲ್ಲಿ ಕೆಲಸಕ್ಕೆ ಹೋಗಲು ಪರದಾಟ!
ಹೌದು, ಬೆಂಗಳೂರು ಮಹಾನಗರದಲ್ಲಿ ಕೆಲಸ ಮಾಡದೇ ಹೋದರೆ ಜೀವನ ನಡೆಸುವುದೇ ಕಷ್ಟ ಕಷ್ಟ. ಯಾಕಪ್ಪಾ ಅಂದ್ರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಯಾವುದೂ ಉಚಿತವಾಗಿ ಸಿಗಲ್ಲ. ಹೀಗಿದ್ದಾಗ ಮನೆಯ ಮಂದಿ ಎಲ್ಲಾ ದುಡಿದು ಬದುಕುತ್ತಾರೆ. ಹೀಗಾಗಿಯೇ ಇಂದು ಬೆಳಗ್ಗೆ ಮಾಮೂಲಿಯಂತೆ ಕೆಲಸಕ್ಕೆ ಹೋಗಲು ಸಿದ್ಧವಾಗುತ್ತಿದ್ದ ಜನರಿಗೆ ಶಾಕ್ ಆಗಿತ್ತು. ಯಾಕೆ ಅಂದ್ರೆ ಚಳಿಗಾಲದಲ್ಲಿ ಮತ್ತೆ ಮಳೆ ಶುರುವಾಗಿತ್ತು.
ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ....
ಅಂದಹಾಗೆ ಬೆಳಗ್ಗೆಯಿಂದಲೇ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ಮಳೆ ಶುರುವಾಗಿದೆ. ಈ ಪೈಕಿ ಬೆಂಗಳೂರಿನ ದಕ್ಷಿಣ ಭಾಗ ಅಂದ್ರೆ ತಮಿಳುನಾಡಿಗೆ ಹತ್ತಿರ ಇರುವ ಬೆಂಗಳೂರಿನ ಜಾಗ & ಪ್ರದೇಶಗಳಲ್ಲಿ ಇಂದು ಬೆಳಗ್ಗೆಯಿಂದ ಮಳೆರಾಯ ಅಬ್ಬರಿಸಲು ಶುರು ಮಾಡಿದ್ದಾನೆ. ಈ ಮೂಲಕ ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿ, ಬೊಮ್ಮಸಂದ್ರ, ಚಂದಾಪುರ, ಆನೇಕಲ್ ಸೇರಿ, ಬೊಮ್ಮನಹಳ್ಳಿ, ಮಡಿವಾಳ, ಗಾರೇಪಾಳ್ಯ, ಆಡುಗೋಡಿ, ಬನಶಂಕರಿ, ಜಯನಗರ ಸೇರಿ ಬೆಂಗಳೂರಿನ ಹೃದಯ ಭಾಗದಲ್ಲೂ ಮಳೆ ಶುರುವಾಗಿತ್ತು. ಹೀಗಿದ್ದಾಗ ಕೆಲಸಕ್ಕೆ ಹೊರಡಲು ಅರ್ಜೆಂಟ್ ಆಗಿದ್ದ ಜನರು ಮಳೆಯಲ್ಲಿ ಪರದಾಡಿಬಿಟ್ಟರು.












Click it and Unblock the Notifications