ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೇಸ್‌ಬುಕ್ ಬಳಸಿ ಜೀವಂತ ಅಂಗಾಂಗ ಸಾಗಿಸಿದ ಬೆಂಗಳೂರು ಪೊಲೀಸರು

|
Google Oneindia Kannada News

ಬೆಂಗಳೂರು, ಅಕ್ಟೋಬರ್.21: ಬೆಂಗಳೂರು ಪೊಲೀಸರು ಸಾಮಾಜಿಕ ತಾಣವನ್ನು ಬಳಸಿಕೊಂಡು ಮತ್ತೊಂದು ಸಾಧನೆ ಮಾಡಿದ್ದಾರೆ. ಫೇಸ್ ಬುಕ್ ಮೂಲಕ ನಾಗರಿಕರನ್ನು ಮುಟ್ಟಿದ ಪೊಲೀಸರು ಮೈಸೂರು-ಬೆಂಗಳೂರು ನಡುವೆ ಜೀವಂತ ಅಂಗಾಂಗಳನ್ನುಯಾವುದೇ ತೊಡಕಿಲ್ಲದೇ ಸಾಗಿಸಿದ್ದಾರೆ.

ಈ ಹಿಂದೆ ಬೆಂಗಳೂರಿನ ನಗರದ ಒಳಗಡೆಯೇ ಹೃದಯ, ಕಿಡ್ನಿ, ಲೀವರ್ ಗಳನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಯಶಸ್ವಿಯಾಗಿ ಸಾಗಿಸಿದ್ದ ಪೊಲೀಸರು ಅಕ್ಟೋಬರ್ 21 ರಂದು ಮತ್ತೊಂದು ಸಾಧನೆ ಮಾಡಿದ್ದಾರೆ.[ಬೆಂಗಳೂರು ಬಿಜಿಎಸ್ ಗೆ ಜೀವಂತ ಹೃದಯ ಸಾಗಾಟ]

Bengaluru Police appeals on Facebook to make way for 'Live Organs' transportation

ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಹೊರಟ ಅಂಗಾಂಗಗಳು ಬೆಂಗಳೂರಿನ ಬಿ ಜಿ ರಸ್ತೆಯಲ್ಲಿರುವ ಅಪೊಲೋ ಆಸ್ಪತ್ರೆಯನ್ನು ಸುರಕ್ಷಿತವಾಗಿ ತಲುಪಿದೆ. ವೈದ್ಯರ ವಿನಂತಿಯಂತೆ ಕೆಂಗೇರಿಯಿಂದ ಅಪೋಲೋ ಆಸ್ಪತ್ರೆವರೆಗೆ ಗ್ರೀನ್ ಕಾರಿಡಾಡ್ ನಿರ್ಮಾಣ ಮಾಡಿಕೊಟ್ಟ ಪೊಲೀಸರಿಗೆ ಒಂದು ಸಲಾಂ ಹೇಳಲೇಬೇಕು.[ಬಡವರಿಗಾಗಿ ಮಿಡಿಯುತ್ತಿರುವ 'ಹೃದಯ'ವಂತೆ ರೀನಾ]

ಪೊಲೀಸರು ಮಾಡಿಕೊಂಡ ವಿನಂತಿ
ಸ್ನೇಹಿತರೇ, ಮಿದುಳು ನಿಷ್ಕ್ರಿಯಗೊಂಡ ಮಹಿಳೆಯೊಬ್ಬರ ದೇಹದ ಅಂಗಾಂಗಗಳನ್ನು ಮೈಸೂರಿನ ಅಪೋಲೋ ಆಸ್ಪತ್ರೆಯಿಂದ ಬೆಂಗಳೂರಿನ ಬಿಜಿ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರಗೆ ಸಾಗಿಸುವ ಕಾರ್ಯ ಹಮ್ಮಿಕೊಂಡಿದ್ದೇವೆ. ಅಂಗಾಂಗಳನ್ನು ಹೊತ್ತ ಆಂಬುಲೆನ್ಸ್ 2.20ಕ್ಕೆ ಮೈಸೂರನ್ನು ಬಿಟ್ಟಿದೆ. ನಿರೀಕ್ಷೆಯಂತೆ ಬೆಂಗಳೂರಿನ ಆಸ್ಪತ್ರೆಗೆ 4.30ಕ್ಕೆ ತಲುಪಬೇಕು. ಸದ್ಯ ಆಂಬುಲೆನ್ಸ್ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿದ್ದು ನೈಸ್ ರಸ್ತೆ ಮೂಲಕ ಕೆಂಗೇರಿ ತಲುಪಲಿದೆ. ಗೊಟ್ಟಿಗೆರೆ-ಹುಳಿಮಾವು ಗೇಟ್-ಅರಕೆರೆ ಗೇಟ್-ಮೂಲಕ ಅಪೋಲೋ ಆಸ್ಪತ್ರೆ ತಲುಪುವಂತೆ ಮಾಡಲಾಗಿದೆ.

ವೈದ್ಯರ ವಿನಂತಿಯಂತೆ ಕೆಂಗೇರಿಯಿಂದ-ಅಪೊಲೋ ಆಸ್ಪತ್ರೆವರೆಗೆ ಗ್ರೀನ್ ಕಾರಿಡಾರ್ ನಿರ್ಮಾಣ ಮಾಡಲು ಬೆಂಗಳೂರು ಪೊಲೀಸ್ ಒಪ್ಪಿಗೆ ನೀಡಿದೆ. ದಯವಿಟ್ಟು ಈ ಸಮಯದಲ್ಲಿ ನಾಗರಿಕರು ಸಂಪೂರ್ಣ ಸಹಕಾರ ನೀಡಬೇಕು ಎಂದು ಕೇಳಿಕೊಳ್ಳುತ್ತಿದ್ದೇವೆ.

English summary
In an attempt to execute the noble plan of transporting the "live organs" of a brain dead woman successfully, the Bengaluru City police has reached out on social networking site Facebook. Earlier also, Bengaluru has achieved the feat of saving lives by transporting organs like hearts, kidneys and livers to the needy patients, by creating green corridor and coordinating with the traffic police, for smooth and hassle-free transportation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X