ಉದ್ಯಾನಗಳ ಶೇ.5 ಜಾಗ ಬಳಕೆಗೆ ವಿರೋಧ: ‘ಬೆಂಗಳೂರು ರಿಯಲ್ ಎಸ್ಟೇಟ್ ಪ್ರಯೋಗಾಲಯವಲ್ಲ: ಸಿಎಂಗೆ ತೇಜಸ್ವಿ ಸೂರ್ಯ ಪತ್ರ

ಬೆಂಗಳೂರು: ಬೆಂಗಳೂರು ಹೆಸರಿಗೆ ತಕ್ಕಂತೆ ಉದ್ಯಾನ ನಗರಿ ಆಗಿದೆ. ಆದರೆ ನಮ್ಮ ಮೆಟ್ರೋ, ಮೇಲ್ಸೇತುವೆ, ನಗರೀಕರಣ ಕಾರಣಗಳಿಂದ ಮರಗಿಡಗಳಿಗೆ ಕತ್ತರ ಬಿದ್ದಿವೆ. ಇದೀಗ ರಾಜ್ಯ ಸರ್ಕಾರ ಹಾಲಿ ಉದ್ಯಾನದ ಶೇ.5ರಷ್ಟು ಸ್ಥಳವನ್ನು ಇತರ ಕಾರ್ಯಗಳ ಬಳಕೆಗೆ ಮುಂದಾಗಿದ್ದಕ್ಕೆ ಸಾಕಷ್ಟು ಆಕ್ಷೇಪ ವ್ಯಕ್ತವಾಗಿದೆ. ಈ ಸಂಬಂಧ ಸಂಸದ ತೇಜಸ್ವಿ ಸೂರ್ಯ ಅವರು ಡಿಕೆ ಶಿವಕುಮಾರ್ ಅವರಿಗೆ ಮಹತ್ವದ ಪತ್ರ ಬರೆದಿದ್ದಾರೆ.

ರಾಜ್ಯ ಸರ್ಕಾರ ಬೆಂಗಳೂರು ಸೇರಿದಂತೆ ರಾಜ್ಯ ಉದ್ಯಾನಗಳ ಶೇ.5ರಷ್ಟು ಜಾಗವನ್ನು ಗುತ್ತಿಗೆ, ಅಡಮಾನ ಹಾಗೂ ಇನ್ನಿತರ ಸಾರ್ವಜನಿಕ ಬಳಕೆಗೆ ಉಪಯೋಗಿಸಲು ನಿರ್ಧರಿಸಿದೆ. ಈ ಸಂಬಂಧ ರಾಜ್ಯ ತೋಟಗಾರಿಕೆ ಇಲಾಖೆಯ 'ಸರ್ಕಾರ ಉದ್ಯಾನಗಳ ರಕ್ಷಣೆ ಕಾಯಿದೆ 1975'ರ ತಿದ್ದುಪಡಿ ಮಾಡುವ ಮಸೂದೆ ಮಂಡಿಸಿದೆ.

Bengaluru Parks Row

ಸರ್ಕಾರದ ಈ ನಿರ್ಧಾರಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ, ತೇಜಸ್ವಿ ಸೂರ್ಯ ಅವರು ಸಿಎಂಗೆ ಪತ್ರ ಬರೆದಿದ್ದಾಗಿ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ಅವರು ಪತ್ರದಲ್ಲಿ, 'ಮಾನ್ಯ ಸಿಎಂ ಡಿ.ಕೆ. ಶಿವಕುಮಾರ್ ಅವರೇ, ಕೆಂಪೇಗೌಡರು ದೂರದೃಷ್ಟಿಯಿಂದ ನಿರ್ಮಿಸಿರುವ ಐತಿಹಾಸಿಕ ಬೆಂಗಳೂರಿನ ಭವಿಷ್ಯವನ್ನೇ ಹಾಳು ಮಾಡಲು ಅದ್ಹೇಗೆ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆ?. ಬೆಂಗಳೂರು 'ಗಾರ್ಡನ್ ಸಿಟಿ' ಎಂಬ ಹೆಗ್ಗಳಿಕೆಯನ್ನು ಗಳಿಸಿದ್ದು ನಿಮ್ಮ ಸರ್ಕಾರದ ಭಿಕ್ಷೆಯಿಂದಲ್ಲ, ತಲೆಮಾರುಗಳ ಜನರ ಪರಿಶ್ರಮದಿಂದ, ಉಳಿದಿರುವ ಹಸಿರಿನಿಂದ'.

ರಿಯಲ್ ಎಸ್ಟೇಟ್‌ಗಾಗಿ ಮೀಸಲಿಟ್ಟ ಜಾವಲ್ಲ

ಇಂದು ಅದೇ ಸಾರ್ವಜನಿಕ ಉದ್ಯಾನವನಗಳ ಶೇ.5ರಷ್ಟು ಜಾಗವನ್ನು ಇತರೆ ಉದ್ದೇಶಗಳಿಗೆ ಬಳಸಲು ಅವಕಾಶ ಮಾಡಿಕೊಡುವ ಮೂಲಕ ಬೆಂಗಳೂರಿನ ಭವಿಷ್ಯವನ್ನೇ ಹಾಳುಗೆಡವಲು ಹೊರಟಿದ್ದೀರಿ. ಪಾರ್ಕ್‌ಗಳು ರಿಯಲ್ ಎಸ್ಟೇಟ್‌ಗಾಗಿ ಮೀಸಲಿಟ್ಟ ಖಾಲಿ ಜಾಗವಲ್ಲ. ಅವು ಬೆಂಗಳೂರಿನ ಶ್ವಾಸಕೋಶ.

ಈಗಾಗಲೇ ಕಾಂಕ್ರೀಟೀಕರಣ, ವಾಯುಮಾಲಿನ್ಯ, ಹೆಚ್ಚುತ್ತಿರುವ ನಗರ ಉಷ್ಣತೆ ಹಾಗೂ ಮಳೆನೀರು ಸಮಸ್ಯೆಯಿಂದ ಬೆಂಗಳೂರು ನಲುಗುತ್ತಿದೆ. ಇಂತಹ ಸಂದರ್ಭದಲ್ಲಿ ಉಳಿದಿರುವ ಹಸಿರು ಪ್ರದೇಶಗಳ ಮೇಲೂ ಕಣ್ಣು ಹಾಕುವುದು ಯಾವ ರೀತಿಯ 'ಅಭಿವೃದ್ಧಿ'? ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಇಂದು ಶೇ 5 ಜಾಗ ಎಂದು ಸುಮ್ಮನಾದರೆ ನಾಳೆ ಮತ್ತಷ್ಟು ಹಸಿರು ಪ್ರದೇಶಗಳ ಮೇಲೆ ಇದೇ ಒತ್ತಡ ಬರಲಿದೆ. ಒಮ್ಮೆ ಪಾರ್ಕ್ ಕಳೆದುಕೊಂಡರೆ, ಅದನ್ನು ಮತ್ತೆ ಸೃಷ್ಟಿಸಲು ಸಾಧ್ಯವಿಲ್ಲ. ಯಾವುದೇ ಯೋಜನೆಗೆ ಜಾಗ ಬೇಕಿದ್ದರೆ ಪರ್ಯಾಯ ಸರ್ಕಾರಿ ಜಾಗಗಳನ್ನು ಹುಡುಕಿ. ಬೆಂಗಳೂರಿನ ಹಸಿರನ್ನೇ ಬಲಿಕೊಡುವ ಸುಲಭ ದಾರಿ ಹಿಡಿಯಬೇಡಿ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಕೆಂಪೇಗೌಡರು ಕಟ್ಟಿದ ಬೆಂಗಳೂರು, ತಲೆಮಾರುಗಳು ಉಳಿಸಿದ ಬೆಂಗಳೂರು ಯಾರೊಬ್ಬರ ರಿಯಲ್ ಎಸ್ಟೇಟ್ ಪ್ರಯೋಗಾಲಯವಲ್ಲ. ಬೆಂಗಳೂರು ನಿಮ್ಮ ರಾಜಕೀಯ ಪ್ರಯೋಗಗಳಿಗೆ, ನಿಮ್ಮ ಸರ್ಕಾರದ ಅಸಮರ್ಥ ಯೋಜನೆಗಳಿಗೆ ಅಥವಾ ರಿಯಲ್ ಎಸ್ಟೇಟ್ ಲಾಬಿಯ ಹಿತಾಸಕ್ತಿಗಳಿಗೆ ಬಲಿಯಾಗಲು ನಾವು ಬಿಡುವುದಿಲ್ಲ.

ಡಿ.ಕೆ. ಶಿವಕುಮಾರ್ ಅವರೇ, ಬೆಂಗಳೂರಿನ ಹಸಿರನ್ನು ಮಾರಾಟಕ್ಕಿಡುವ ನಿರ್ಧಾರವನ್ನು ತಕ್ಷಣ ಹಿಂಪಡೆಯಿರಿ. ಅಭಿವೃದ್ಧಿ ಹೆಸರಿನಲ್ಲಿ ಬೆಂಗಳೂರಿನ ಉಸಿರನ್ನು ಕಸಿದುಕೊಳ್ಳಲು ಯಾವುದೇ ಕಾರಣಕ್ಕೂ ಬೆಂಗಳೂರಿನ ಜನತೆ ಸಿದ್ಧರಿಲ್ಲ. ಕೂಡಲೇ ಉದ್ಯಾನ ಜಾಗ ಬಳಕೆ ನಿರ್ಧಾರವ ಪುನರ್ ಪರಿಶೀಲಿಸುವಂತೆ ಅವರು ಆಗ್ರಹಿಸಿದ್ದಾರೆ.

ಬಿ.ವೈ.ವಿಜಯೇಂದ್ರ ಕಿಡಿ

ಇನ್ನೂ ಇದೇ ವಿಚಾರ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಸಹ ದೂರಿದ್ದಾರೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಉದ್ಯಾನವನಗಳ ಒಟ್ಟು ವಿಸ್ತೀರ್ಣದ ಶೇ.5 ರಷ್ಟು ಮಾರುವ, ವಿನಿಮಯ ಮಾಡುವ,ಉಡುಗೊರೆ ನೀಡುವ ಪ್ರಸ್ತಾವನೆಯನ್ನು ತಿದ್ದುಪಡಿ ಮಸೂದೆಯಲ್ಲಿ ಸೇರಿಸಲಾಗಿದೆ. ಅಂದರೆ ಪರಿಸರದ ರಕ್ಷಣೆಗೆ, ನಾಗರಿಕರ ಆರೋಗ್ಯ ಸಂರಕ್ಷಣೆಗೆ ಮತ್ತು ಇತ್ಯಾದಿ ಬಳಕೆಗೆ ತೋಟಗಾರಿಕೆ ಮೀಸಲಿಟ್ಟಿರುವ ಸರಕಾರಿ ಉದ್ಯಾನಗಳ ಲಪಟಾಯಿಸಲು ಈ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿದೆ. ಈ ತಿದ್ದುಪಡಿಯನ್ನು ಬಿಜೆಪಿ ತಡೆಯಲಿದೆ ಎಂದು ಅವರು ಕಿಡಿ ಕಾರಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+