ಬೆಂಗಳೂರು-ಮಂಗಳೂರು ರೈಲು ಮಾರ್ಗ ಬದಲಾವಣೆ

ಬೆಂಗಳೂರು, ನವೆಂಬರ್ 19 : ಬೆಂಗಳೂರು-ಕಣ್ಣೂರು ಹಾಗೂ ಬೆಂಗಳೂರು-ಕಾರವಾರ ರೈಲಿನ ಮಾರ್ಗ ಬದಲಾವಣೆಯಾಗಿದೆ. ಶ್ರವಣಬೆಳಗೊಳ ಮಾರ್ಗವಾಗಿ ರೈಲು ಸಂಚಾರ ನಡೆಸಲಿದೆ.

ಯಶವಂತಪುರ-ಶ್ರವಣಬೆಳಗೊಳ ಮಾರ್ಗ ಸಿದ್ಧಗೊಂಡಿದ್ದು 2018ರ ಫೆಬ್ರವರಿ 10ರಿಂದ ಈ ಮಾರ್ಗದಲ್ಲಿ ಸಂಚಾರ ನಡೆಸಲಿದೆ ಎಂದು ರೈಲ್ವೆ ಇಲಾಖೆಯ ಪ್ರಕಟಣೆ ತಿಳಿಸಿದೆ.

Bengaluru-Mangaluru train route changed

ಬೆಂಗಳೂರು-ಕಣ್ಣೂರು ಹಾಗೂ ಬೆಂಗಳೂರು-ಕಾರವಾರ ರೈಲು ವಾರದಲ್ಲಿ 4 ದಿನ ಯಶವಂತಪುರ-ಶ್ರವಣಬೆಳಗೊಳ ಹಾಗೂ ವಾರದಲ್ಲಿ ಮೂರು ದಿನ ಮೈಸೂರು ಮಾರ್ಗದಲ್ಲಿ ಸಂಚಾರ ನಡೆಸಲಿದೆ.

ಈಗಾಗಲೇ ಶ್ರವಣಬೆಳಗೊಳ ಮೂಲಕ ಮಂಗಳೂರಿಗೆ ರೈಲು ಸಂಚಾರ ನಡೆಸಲು ಅನುಮತಿ ಸಿಕ್ಕಿದೆ. 2018ರ ಫೆಬ್ರವರಿಯಲ್ಲಿ ಬೆಂಗಳೂರು-ಶ್ರವಣಬೆಳಗೊಳ-ಮಂಗಳೂರು ರೈಲು ಸಂಚಾರ ಆರಂಭವಾಗಲಿದೆ.

ಬೆಂಗಳೂರಿನಿಂದ ಹೊರಡುವ ರೈಲು ಯಶವಂತಪುರ, ಕುಣಿಗಲ್, ಶ್ರವಣಬೆಳಗೊಳ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಸುಬ್ರಮಣ್ಯ ರಸ್ತೆ, ಬಂಟ್ವಾಳ ನಿಲ್ದಾಣದಲ್ಲಿ ನಿಂತು ಮಂಗಳೂರು ತಲುಪಲಿದ್ದು, ಅಲ್ಲಿಂದ ಮುಂದೆ ಸಾಗಲಿದೆ.

ವೇಳಾಪಟ್ಟಿ : ಫೆಬ್ರವರಿ 10ರಿಂದ ಬುಧವಾರ, ಗುರುವಾರ, ಶುಕ್ರವಾರ ಮತ್ತು ಶನಿವಾರ ಬೆಂಗಳೂರಿನಿಂದ ಸಂಜೆ 7.15ಕ್ಕೆ ಹೊರಡುವ ರೈಲು, ಮರುದಿನ ಬೆಳಗ್ಗೆ 6.20ಕ್ಕೆ ಮಂಗಳೂರನ್ನು ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+