ಗುಡ್ಡ ಕುಸಿತ : ಬೆಂಗಳೂರು-ಮಂಗಳೂರು ರೈಲು ಸ್ಥಗಿತ
ಹಾಸನ, ಜೂ.15 : ಬೆಂಗಳೂರು-ಮಂಗಳೂರು ರೈಲಿನ ಒಂದು ಬೋಗಿ ಹಳಿ ತಪ್ಪಿದ್ದು, ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಸಕಲೇಶಪುರ ಬಳಿ ಸೋಮವಾರ ಮುಂಜಾನೆ ಈ ಘಟನೆ ನಡೆದಿದೆ.
ಹಾಸನ ಜಿಲ್ಲೆ ಸಕಲೇಶಪುರ ಸಮೀಪದ ಅರೆಬೆಟ್ಟ ಬಳಿ ಗುಡ್ಡ ಕುಸಿದು ದೊಡ್ಡ ಕಲ್ಲು ಬಂಡೆ ಹಳಿಯ ಮೇಲೆ ಬಿದ್ದಿದೆ. ಇದರಿಂದ ಬೆಂಳೂರು-ಮಂಗಳೂರು ರೈಲಿನ ಒಂದು ಬೋಗಿ ಹಳಿ ತಪ್ಪಿದೆ. ರೈಲ್ವೆ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದು, ಬಂಡೆಯನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭಿಸಿದ್ದಾರೆ. [ತತ್ಕಾಲ್ ಬುಕ್ಕಿಂಗ್ ಸಮಯ ಬದಲು]

ಬಂಡೆ ತೆಗೆಯುವ ಕಾರ್ಯಾಚರಣೆಯಿಂದಾಗಿ ಬೆಂಗಳೂರು-ಮಂಗಳೂರು ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. [ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು ಏಕಿಲ್ಲ?]
ಬಸ್ ವ್ಯವಸ್ಥೆ : ಮಂಗಳೂರು, ಕೇರಳಕ್ಕೆ ತೆರಳುವ ಪ್ರಯಾಣಿಕರಿಗಾಗಿ ಸಕಲೇಶಪುರದಿಂದ 10 ಕೆಎಸ್ಆರ್‌ಟಿಸಿ ಬಸ್ಸುಗಳ ವ್ಯವಸ್ಥೆಯನ್ನು ಮಾಡಲಾಗಿದೆ.












Click it and Unblock the Notifications