Vande Bharat Express: ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್‌- ಕಲ್ಯಾಣ ಕರ್ನಾಟಕದ ಈ ಊರುಗಳಲ್ಲಿ ನಿಲುಗಡೆ

ಬೆಂಗಳೂರು, ಆಗಸ್ಟ್‌ 22: ಬೆಂಗಳೂರು ಮತ್ತು ಹೈದರಾಬಾದ್ ನಡುವಿನ ವಂದೇ ಭಾರತ್ ರೈಲು ಆಗಸ್ಟ್ ಅಂತ್ಯದ ವೇಳೆಗೆ ಕಾರ್ಯಾರಂಭ ಮಾಡುವ ನಿರೀಕ್ಷೆಯಿದೆ ಎಂದು ಭಾರತೀಯ ರೈಲ್ವೆ ಮಾಹಿತಿ ನೀಡಿದೆ. ಚೆನ್ನೈ-ಬೆಂಗಳೂರು-ಮೈಸೂರು ಮತ್ತು ಬೆಂಗಳೂರು-ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ರೈಲುಗಳ ನಂತರ ಕರ್ನಾಟಕದಲ್ಲಿ ಸಂಚರಿಸುವ ಮೂರನೇ ವಂದೇ ಭಾರತ್ ರೈಲು ಇದಾಗಲಿದೆ.

ಬೆಂಗಳೂರು-ಹೈದರಾಬಾದ್ ವಂದೇ ಭಾರತ್ ಎಕ್ಸ್‌ಪ್ರೆಸ್ 16 ಬೋಗಿಗಳ ರೈಲಾಗಿದ್ದು, 14 ಚೇರ್ ಕಾರ್ ಮತ್ತು ಎರಡು ಎಕ್ಸಿಕ್ಯೂಟಿವ್ ಕ್ಲಾಸ್ ಕೋಚ್‌ಗಳನ್ನು ಹೊಂದಿದೆ.

bengaluru-hyderabad-vande-bharat-express

ಯಶವಂತಪುರ, ಧರ್ಮಾವರಂ, ಧೋನೆ, ಕರ್ನೂಲ್ ಸಿಟಿ, ಗದ್ವಾಲ್ ಜಂಕ್ಷನ್, ಮಹೆಬೂಬ್‌ನಗರ, ಶಾದ್‌ನಗರ ಮತ್ತು ಕಾಚೇಗೌಡ ಮೂಲಕ ರೈಲು ಸಂಚರಿಸಲಿದೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಈ ರೈಲು ಯಶವಂತಪುರದಿಂದ ಕಾಚೇಗೌಡ ನಡುವಿನ 610 ಕಿ.ಮೀ ದೂರವನ್ನು ಏಳು ಗಂಟೆಗಳಲ್ಲಿ ಕ್ರಮಿಸುವ ನಿರೀಕ್ಷೆಯಿದೆ. ದಕ್ಷಿಣದ ಎರಡು ಐಟಿ ನಗರಗಳ ನಡುವಿನ ರೈಲು ಪ್ರಯಾಣದ ಸಮಯವನ್ನು ಎರಡು ಗಂಟೆಗಳಷ್ಟು ಕಡಿಮೆ ಮಾಡಲಿದೆ. ಪ್ರಸ್ತುತ, ಎರಡು ನಗರಗಳ ನಡುವಿನ ವೇಗದ ರೈಲು ಡುರೊಂಟೊ ಎಕ್ಸ್‌ಪ್ರೆಸ್ ಆಗಿದೆ. ಇದು ಒಂಬತ್ತು ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ವರದಿಗಳ ಪ್ರಕಾರ, ಸೇಡಂ ಮತ್ತು ರಾಯಚೂರು ಮತ್ತು ಗುಂತಕಲ್ ಜಂಕ್ಷನ್‌ಗಳಲ್ಲಿ ಈ ರೈಲು ನಿಲುಗಡೆ ಹೊಂದುವ ನಿರೀಕ್ಷೆಯಿದೆ.

bengaluru-hyderabad-vande-bharat-express

ಬೆಂಗಳೂರು-ಹೈದರಾಬಾದ್‌ ವಂದೇ ಭಾರತ್ ರೈಲಿನ ಪ್ರಾಯೋಗಿಕ ಚಾಲನೆಗಳು ಈಗಾಗಲೇ ಪ್ರಾರಂಭವಾಗಿದೆ. ಔಪಚಾರಿಕ ಕಾರ್ಯವಿಧಾನದ ನಂತರ ರೈಲು ಸೇವೆಗಳು ಪ್ರಾರಂಭವಾಗುವ ಸಾಧ್ಯತೆಯಿದೆ ಎಂದು ದಕ್ಷಿಣ ಮಧ್ಯ ರೈಲ್ವೆಯ ಅಧಿಕಾರಿಯನ್ನು ಉಲ್ಲೇಖಿಸಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಸಿಕಂದರಾಬಾದ್-ವಿಶಾಖಪಟ್ಟಣಂ ಹಾಗೂ ಸಿಕಂದರಾಬಾದ್-ತಿರುಪತಿ ನಂತರ ದಕ್ಷಿಣ ಮಧ್ಯ ರೈಲ್ವೆಯಿಂದ ಫ್ಲ್ಯಾಗ್ ಆಫ್ ಆಗಲಿರುವ ಮೂರನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಇದಾಗಲಿದೆ. ಈ ರೈಲು ದಕ್ಷಿಣ ತೆಲಂಗಾಣ ಮತ್ತು ರಾಯಲಸೀಮಾದ ಗದ್ವಾಲ್ ಜಂಕ್ಷನ್, ಮಹಬೂಬ್‌ನಗರ, ಶಾದ್ ನಗರ, ಧೋನೆ, ಕರ್ನೂಲ್ ಮತ್ತು ಧರ್ಮಾವರಂ ಸೇರಿದಂತೆ ರಾಯಲಸೀಮಾ ನಿಲ್ದಾಣಗಳನ್ನು ಒಳಗೊಂಡಿದೆ.

bengaluru-hyderabad-vande-bharat-express

ಕರ್ನಾಟಕದಲ್ಲಿ ಎರಡು ವಂದೇ ಭಾರತ್ ರೈಲುಗಳು ಈಗಾಗಲೇ ಕಾರ್ಯನಿರ್ವಹಿಸುತ್ತಿವೆ. ಬೆಂಗಳೂರು-ಹುಬ್ಬಳ್ಳಿ-ಧಾರವಾಡ ರೈಲು ಜೂನ್ 27 ರಂದು ಪ್ರಾರಂಭವಾಗಿದೆ. ಇದು ಮಂಗಳವಾರ ಹೊರತುಪಡಿಸಿ ವಾರದ ಎಲ್ಲಾ ದಿನಗಳಲ್ಲಿ ಕಾರ್ಯನಿರ್ವಹಿಸುತ್ತದೆ.

ಹುಬ್ಬಳ್ಳಿ-ಧಾರವಾಡ ವಂದೇ ಭಾರತ್ ರೈಲು ಬೆಂಗಳೂರು- ಹುಬ್ಬಳ್ಳಿ - ಧಾರವಾಡ ನಡುವೆ ಪ್ರಯಾಣಿಸಲು ಸುಮಾರು 7 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಕಳೆದ ವರ್ಷ ನವೆಂಬರ್‌ನಲ್ಲಿ ಚೆನ್ನೈ- ಬೆಂಗಳೂರು- ಮೈಸೂರು ವಂದೇ ಭಾರತ್ ರೈಲನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. 504 ಕಿ.ಮೀ ದೂರವನ್ನು ಕ್ರಮಿಸಲು ರೈಲು ಆರೂವರೆ ಗಂಟೆ ತೆಗೆದುಕೊಳ್ಳುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+