Gold: ಕರ್ನಾಟಕಕ್ಕೆ ಗೋಲ್ಡನ್ ಜಾಕ್‌ಪಾಟ್: ಈ ಜಿಲ್ಲೆಯಲ್ಲಿ 10 ಸಾವಿರ ಎಕರೆಯಲ್ಲಿ ಬಂಗಾರವೋ ಬಂಗಾರ!
ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಆಕಾಶ ಮುಟ್ಟುತ್ತಿದೆ. ಅದರಲ್ಲೂ, 2025ರ ಆರಂಭದಿಂದಲೂ ಹಳದಿ ಲೋಹದ ದರ ನಿರಂತರವಾಗಿ ಹೆಚ್ಚಾಗುತ್ತಿದ್ದು, ಜನಸಾಮಾನ್ಯರು ಚಿನ್ನ ಖರೀದಿಸುವುದು ಕನಸು ಎಂಬಂತಾಗಿದೆ. ಈಗಾಗಲೇ ಚಿನ್ನದ ಬೆಲೆ ಪ್ರತಿ ಗ್ರಾಂಗೆ 10 ಸಾವಿರ ರೂಪಾಯಿ ದಾಟಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಅರ್ಥಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
10 ಗ್ರಾಂ ಚಿನ್ನದ ದರ 1 ಲಕ್ಷ ಗಡಿ ದಾಟಿ ದಾಖಲೆ ಬರೆದಿದ್ದು, ಸದ್ಯ ಚಿನ್ನದ ಬಗ್ಗೆಯೇ ಚರ್ಚೆಯಾಗುತ್ತಿದೆ. ಆದರೆ, ಚಿನ್ನದ ಬೆಲೆ ಏರಿಕೆ ನಡುವೆ ಕರ್ನಾಟಕಕ್ಕೆ ಭರ್ಜರಿ ಜಾಕ್ ಪಾಟ್ ಹೊಡೆದಿದೆ. ಪ್ರವಾಸಿಗರ ಸ್ವರ್ಗ ಎಂದೇ ಹೆಸರುವಾಸಿಯಾಗಿರುವ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇದೀಗ ಚಿನ್ನದ ಬೇಟೆಯ ಸದ್ದು ಕೇಳಿಬರುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಸಾವಿರಾರು ಎಕರೆ ದಟ್ಟ ಅರಣ್ಯ ಮತ್ತು ಕೃಷಿ ಭೂಮಿಯಲ್ಲಿ ಚಿನ್ನದ ನಿಕ್ಷೇಪಕ್ಕಾಗಿ ಶೋಧ ನಡೆಸಲು ಬೆಂಗಳೂರು ಮೂಲದ ಕಂಪನಿಯೊಂದು ಸಿದ್ಧತೆ ನಡೆಸಿದೆ.

ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ 10,100 ಎಕರೆ ಜಾಗದಲ್ಲಿ ಬಂಗಾರ ಇರುವ ನಿಕ್ಷೇಪ ಪತ್ತೆಯಾಗಿದೆ. ಈಗಾಗಲೇ ತರೀಕೆರೆ ತಾಲೂಕಿನ ಸಾವಿರಾರು ಎಕರೆ ದಟ್ಟ ಅರಣ್ಯ ಮತ್ತು ಕೃಷಿ ಭೂಮಿಯಲ್ಲಿ ಚಿನ್ನದ ನಿಕ್ಷೇಪಕ್ಕಾಗಿ ಶೋಧ ನಡೆಸಲು ಬೆಂಗಳೂರು ಮೂಲದ ಕಂಪನಿಯೊಂದು ಸಿದ್ಧತೆ ನಡೆಸಿದೆ. ಗುರುತಿಸಿರುವ ಪ್ರದೇಶದಲ್ಲಿ ಚಿನ್ನಕ್ಕಾಗಿ ಮತ್ತಷ್ಟು ಪರೀಕ್ಷೆಗಳನ್ನು ನಡೆಸಲು ಡ್ರಿಲ್ಲಿಂಗ್ ಕೆಲಸಗಳನ್ನು ಮಾಡಲು ಅವಕಾಶ ಕೊಡಬೇಕಾಗಿ ಕೋರಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ವ್ಯಾಪ್ತಿಗೆ ಬರುವ ದಟ್ಟ ಅರಣ್ಯ ಪ್ರದೇಶದಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನ ಅಡಗಿದೆ ಎಂಬುದು ವರದಿಯಾಗಿದೆ. ಬೆಂಗಳೂರು ಮೂಲದ 'ಆರಂ ಜಿಯೋ ಎಕ್ಸ್‌ಪ್ಲೋರೇಷನ್ ಪ್ರೈವೇಟ್ ಲಿಮಿಟೆಡ್' ಎಂಬ ಖಾಸಗಿ ಕಂಪನಿ, ಈ ಪ್ರದೇಶದಲ್ಲಿ ಚಿನ್ನದ ನಿಕ್ಷೇಪ ಶೋಧನೆಗೆ ಮುಂದಾಗಿದೆ. ಆರಂ ಜಿಯೋ ಕಂಪನಿಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಈಗಾಗಲೇ ಸಂಯೋಜಿತ ಪರವಾನಗಿ ನೀಡಿದೆ.
ಈ ಪರವಾನಗಿಯ ಅನ್ವಯ, ಕಂಪನಿಯು ಒಟ್ಟು 10,082 ಎಕರೆಗಳಷ್ಟು ವಿಶಾಲವಾದ ಪ್ರದೇಶದಲ್ಲಿ ಚಿನ್ನದ ನಿಕ್ಷೇಪಕ್ಕಾಗಿ ಸಮೀಕ್ಷೆ ಮತ್ತು ಶೋಧ ಕಾರ್ಯ ನಡೆಸಲಿದೆ. ಆತಂಕಕಾರಿ ವಿಷಯವೆಂದರೆ, ಈ ಬೃಹತ್ ಪ್ರದೇಶದಲ್ಲಿ ಸುಮಾರು 5,600 ಎಕರೆ ದಟ್ಟ ಅರಣ್ಯ ಪ್ರದೇಶವೂ ಸೇರಿದೆ. ಉಳಿದ 3,600 ಎಕರೆ ಕೃಷಿ ಭೂಮಿಯಾಗಿದೆ. ಈ ಹಿಂದಿನ ಅಧ್ಯಯನಗಳ ಪ್ರಕಾರ, ಈ ಪ್ರದೇಶದಲ್ಲಿ ಚಿನ್ನದ ಅದಿರಿನ ಪ್ರಮಾಣ ಅತ್ಯಂತ ಹೆಚ್ಚಳವಾಗಿದೆ. ಇನ್ನೂ ಪ್ರತಿ ಟನ್ ಅದಿರಿನಲ್ಲಿ 19 ಗ್ರಾಂನಿಂದ ಹಿಡಿದು 80 ಗ್ರಾಂಗಳವರೆಗೆ ಚಿನ್ನ ಸಿಗುವ ಸಾಧ್ಯತೆ ಇದೆ ಎಂದು ಅಂದಾಜಿಸಲಾಗಿದೆ.
ಇನ್ನೂ ಸಿಂಗನಮನೆ, ತಂಬಾಡಿಹಳ್ಳಿ, ಗೋಣಿಬೀಡು ಮತ್ತು ಹೊಸೂರಿನ ಹೊನ್ನುಹಟ್ಟಿ ಎಂಬ ಸ್ಥಳಗಳಲ್ಲಿ ಹಿಂದೆ ಚಿನ್ನಕ್ಕಾಗಿ ಗಣಿಗಾರಿಕೆ ನಡೆದ ಕುರುಹುಗಳಿವೆ ಎಂದು ಕಂಪನಿಯು ಸಲ್ಲಿಸಿರುವ ದಾಖಲೆಗಳಲ್ಲಿ ಉಲ್ಲೇಖಿಸಿದೆ. 10,100 ಎಕರೆ ಜಾಗದಲ್ಲಿ 5,600 ಎಕರೆ ಜಾಗವು ಪಶ್ಚಿಮ ಘಟ್ಟಗಳ ಅರಣ್ಯ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಆ 10,100 ಎಕರೆಯಲ್ಲಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಮೇಲ್ನೋಟಕ್ಕೆ ಹಲವಾರು ಆಧಾರಗಳು ಸಿಕ್ಕಿದ್ದು, ಅದನ್ನು ನಿಖರವಾಗಿ ತಿಳಿಯಲು ಡ್ರಿಲ್ಲಿಂಗ್ ಗೆ ಅವಕಾಶ ಕಲ್ಪಿಸಬೇಕು ಎಂದು ಕಂಪನಿ ಕೋರಿದೆ. ಆದರೆ, ಈ ಬಗ್ಗೆ ಕೇಂದ್ರ ಪರಿಸರ ಇಲಾಖೆ ಇನ್ನೂ ಯಾವುದೇ ತೀರ್ಮಾನ ಕೈಗೊಂಡಿಲ್ಲ ಎಂದು ಹೇಳಲಾಗುತ್ತಿದೆ.
-
Gold Price Update: ಆಭರಣಪ್ರಿಯರೇ ಗಮನಿಸಿ, ಅಕ್ಷಯ ತೃತೀಯ ಮುನ್ನವೇ ಗಗನಕ್ಕೇರಿದ ಚಿನ್ನದ ದರ -
Akshaya Tritiya Special: ಅಕ್ಷಯ ತೃತೀಯ ಸ್ಪೆಷಲ್: ಪುರುಷರ ಚಿನ್ನದ ಆಭರಣಗಳಲ್ಲಿ ಹೊಸ ಟ್ರೆಂಡ್ಸ್ ವಿವರ -
Gold: ಹಟ್ಟಿ ಚಿನ್ನದ ಗಣಿ ಐತಿಹಾಸಿಕ ಸಾಧನೆ, ದಾಖಲೆ ಮಟ್ಟದ ಚಿನ್ನ ಉತ್ಪಾದನೆ -
Akshaya Tritiya 2026: ಅಕ್ಷಯ ತೃತೀಯ ವಿಶೇಷ: ಪುರುಷರು ಮತ್ತು ಮಹಿಳೆಯರಿಬ್ಬರಿಗೂ ಒಪ್ಪುವ ಟಾಪ್ 5 ಆಭರಣಗಳ ಬಗ್ಗೆ ತಿಳಿಯಿರಿ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Weekly Horoscope: ನಾಲ್ಕು ರಾಶಿಯವರಿಗೆ ಅದೃಷ್ಟ ಹೊತ್ತು ತರುವ ವಾರ ಇದು: ಹೇಗಿದೆ ನೋಡಿ ನಿಮ್ಮ ವಾರ ಭವಿಷ್ಯ -
Bengaluru Property: ಬೆಂಗಳೂರು ಮೆಟ್ರೋದ ಈ ಮಾರ್ಗಗಳಲ್ಲಿ ಭೂಮಿ, ಪ್ರಾಪರ್ಟಿ ಬೆಲೆ ಶೇ 20% ರಿಂದ ಶೇ 30% ಹೆಚ್ಚಳ -
PUC Revaluation: ಸ್ಕ್ಯಾನ್ ಪ್ರತಿ ಪಡೆದವರ ಉತ್ತರ ಪತ್ರಿಕೆ ಮರುಮೌಲ್ಯಮಾಪನ; ಶುಲ್ಕ, ಪ್ರಮುಖ ದಿನಾಂಕಗಳು -
Career Break: ಅಲಾರಂ ಇಲ್ಲದ ಜೀವನ ಬೇಕು ಎಂದು ಗೂಗಲ್ ಕೆಲಸ ಬಿಟ್ಟ ಯುವ ಟೆಕ್ಕಿ, ನೆಟ್ಟಿಗರ ಮೆಚ್ಚುಗೆ -
Bengaluru Mumbai Vande Bharat: ಬೆಂಗಳೂರು - ಮುಂಬೈ ಹೊಸ ರೈಲು: ಮಹಾ ಸಿಎಂ ಮಹತ್ವದ ಟ್ವೀಟ್, ಯಾವಾಗ ಪ್ರಾರಂಭ -
ಎರಡು ಬಾರಿ ಕೆಲಸ ಕಳೆದುಕೊಂಡ ಯುವಕನಿಂದ ರೆಸ್ಟೋರೆಂಟ್ ಬ್ಯುಸಿನೆಸ್: ಈಗ ತಿಂಗಳಿಗೆ 1.3 ಕೋಟಿ ರೂ. ಆದಾಯ -
School Holiday: ರಾಜ್ಯದಲ್ಲಿ 2026-27ನೇ ಸಾಲಿನ ಶೈಕ್ಷಣಿಕ ವೇಳಾಪಟ್ಟಿ ಪ್ರಕಟ: ದಸರಾ, ಬೇಸಿಗೆ ರಜೆ, ಕೆಲಸದ ದಿನಗಳ ವಿವರ












Click it and Unblock the Notifications