ಬೆಂಗಳೂರು ರೈಲು ವಲಯದ ಕಾರ್ಯ ಶ್ಲಾಘಿಸಿದ ರೈಲ್ವೆ ಇಲಾಖೆ

ಬೆಂಗಳೂರು, ಜುಲೈ 06 : ನೈಋತ್ಯ ರೈಲ್ವೆಯ ಬೆಂಗಳೂರು ವಲಯ 71 ಮಾನವ ರಹಿತ ಕ್ರಾಸಿಂಗ್‌ಗಳನ್ನು ತೆಗೆದುಹಾಕಿದೆ. 2018ರ ಅಂತ್ಯದೊಳಗೆ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ಗಳನ್ನು ಸಂಪೂರ್ಣವಾಗಿ ತೆಗೆದುಹಾಕುವಂತೆ ರೈಲ್ವೆ ಇಲಾಖೆ ಸೂಚನೆ ನೀಡಿದೆ.

ನೈಋತ್ಯ ರೈಲ್ವೆ ವಲಯ ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದೆ. 71 ಮಾನವ ರಹಿತ ರೈಲ್ವೆ ಕ್ರಾಸಿಂಗ್‌ಗಳ ಪೈಕಿ 48 ಕ್ರಾಸಿಂಗ್‌ಗಳನ್ನು ರದ್ದುಗೊಳಿಸಲಾಗಿದೆ. 23 ಕ್ರಾಸಿಂಗ್‌ಗಳನ್ನು ಮಾನವ ಸಹಿತವಾಗಿ ಅಭಿವೃದ್ಧಿ ಮಾಡಲಾಗಿದೆ.

ರೈಲ್ವೆ ಇಲಾಖೆ 2018ರ ಅಂತ್ಯದೊಳಗೆ ಮಾನವ ರಹಿತ ರೈಲ್ವೆ ಕ್ರಾಸಿಂಗ್‌ಗಳನ್ನು ತೆಗೆದುಹಾಕಬೇಕು ಎಂದು ನಿರ್ದೇಶನ ನೀಡಿತ್ತು. ಬೆಂಗಳೂರು ರೈಲ್ವೆ ವಲಯ ಇದನ್ನು ಕಾರ್ಯಕಾರೂಪಕ್ಕೆ ತಂದಿದೆ. ಪ್ರಯಾಣಿಕರ, ಜನರ ಸುರಕ್ಷತೆಯೇ ನಮಗೆ ಮುಖ್ಯ ಎಂದು ಹೇಳಿದೆ.

Bengaluru Division of railways eliminated 71 unmanned level crossings

ರೈಲ್ವೆ ಕ್ರಾಸಿಂಗ್‌ಗಳನ್ನು ರದ್ದು ಪಡಿಸಿದ್ದರಿಂದ ಪ್ರಯಾಣದ ಸಮಯವೂ ಉಳಿತಾಯವಾಗಲಿದೆ. ರೈಲ್ವೆ 42 ಸ್ಥಳಗಳಲ್ಲಿ ಮೇಲ್ಸೇತುವೆ, ಅಂಡರ್ ಪಾಸ್‌ಗಳನ್ನು ನಿರ್ಮಾಣ ಮಾಡಿದೆ. 2015ರಲ್ಲಿ ಬೆಂಗಳೂರು ವಿಭಾಗ ರೈಲು ಬರುವ ಬಗ್ಗೆ ಮಾಹಿತಿ ನೀಡಲು 'ರೈಲು ಮಿತ್ರ'ನನ್ನು ಹಲವು ಸ್ಥಳಗಳಲ್ಲಿ ನಿಯೋಜನೆ ಮಾಡಿದೆ.

2017ರ ಅಕ್ಟೋಬರ್‌ನಿಂದ ದಿನದ 24 ಗಂಟೆಯೂ 'ರೈಲು ಮಿತ್ರ'ನನ್ನು ಕ್ರಾಸಿಂಗ್‌ಗಳಲ್ಲಿ ನಿಯೋಜನೆ ಮಾಡಲಾಗಿದ್ದು, ಯಾವುದೇ ಅಪಘಾತ ನಡೆಯದಂತೆ ಅವರು ಎಚ್ಚರಿಕೆ ವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+