Heavy Rain: ಮಳೆ ಬರಲಿಲ್ಲ ಅಂದ್ರೆ ಹಂಗೆ.. ಮಳೆ ಬಂದ್ರೆ ಹಿಂಗೆ!

ಮಳೆ ಇಲ್ಲ.. ನೀರು ಇಲ್ಲ.. ಬೆಳೆ ಇಲ್ಲ.. ಮನುಷ್ಯರು ಕೇವಲ 1 ತಿಂಗಳ ಹಿಂದಷ್ಟೇ ಹಿಂಗೆ ಗೊಣಗುತ್ತಿದ್ದರು. ಆದರೆ ಈಗ ಭರ್ಜರಿ ಮಳೆ ಬೀಳುತ್ತಿದೆ, ಕಳೆದ 1 ವಾರದಿಂದ ನಿರಂತರ & ಭರ್ಜರಿ ಮಳೆ ಬರುತ್ತಿದೆ. ಹೀಗಿದ್ದಾಗ ಕನ್ನಡ ನಾಡಿನ ಜನ ಕೂಡ ಖುಷಿಯಾಗಿದ್ದಾರೆ. ಮಳೆ ಆರ್ಭಟ ನೋಡಿ ಕುಣಿದು ಕುಪ್ಪಳಿಸಿದ್ದಾರೆ. ಹೀಗಿದ್ದಾಗಲೇ ನಿನ್ನೆ ಬಿದ್ದ ಬಿರುಗಾಳಿ ಸಹಿತ & ಗುಡುಗು ಮಿಂಚಿನ ಮಳೆಗೆ ದೊಡ್ಡ ಸಮಸ್ಯೆ ಎದುರಾಗಿದೆ. ಹೀಗಾಗಿ ಮನುಷ್ಯರು ಮಳೆಯ ಬಗ್ಗೆ ಗೊಣಗಲು ಶುರು ಮಾಡಿದ್ದಾರೆ.

ಅಷ್ಟಕ್ಕೂ ನಿನ್ನೆ ಬೆಂಗಳೂರಿನಲ್ಲಿ ಸುರಿದ ಮಳೆಗೆ ನೂರಾರು ಕಾರು, ನೂರಾರು ಬೈಕ್ ಸೇರಿ ಲೆಕ್ಕವಿಲ್ಲದಷ್ಟು ಮರಗಳು ಹಾಳಾಗಿವೆ. ಮರಗಳು ಬಿದ್ದ ಕಾರಣಕ್ಕೆ ಬೈಕ್ & ಕಾರು ಸೇರಿದಂತೆ ಹಲವು ವಾಹನಗಳಿಗೆ ಹಾನಿ ಆಗಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಕೂಡ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ನೋವು ತೋಡಿಕೊಳ್ಳುತ್ತಿದ್ದಾರೆ. ಇಷ್ಟು ದಿನ ಮಳೆಯೇ, ಇಲ್ಲ ಮಳೆ ಇಲ್ಲ ಅಂತಾ ಗೊಣಗುತ್ತಿದ್ದ ಮನುಷ್ಯರಿಗೆ ಈಗ ಮಳೆಯೇ ದೊಡ್ಡ ವಿಲನ್ ಆಗಿದೆ. ಹೀಗೆ, ಭೀಕರ ಮಳೆಯಿಂದ ತಮ್ಮ ಕಾರು & ಬೈಕ್ ಕಳೆದುಕೊಂಡ ನೋವಿನಲ್ಲಿ ಜನರು ಅದನ್ನು ಪೋಸ್ಟ್ ಮಾಡುತ್ತಿದ್ದಾರೆ.

Bengaluru Citizens Saying This About Heavy Rain Of 2nd June 2024

ಮಳೆ ಬರಲಿಲ್ಲ ಅಂದ್ರೆ ಹಂಗೆ, ಬಂದ್ರೆ ಹಿಂಗೆ...

ವಾಹನ ಕಳೆದುಕೊಂಡ ದುಖಃದಲ್ಲಿ ಪೋಸ್ಟ್ ಒಂದನ್ನ ಹಾಕಿರುವ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು, 'ಮಳೆ ಬರಲಿಲ್ಲ ಅಂದ್ರೆ ಹಂಗೆ, ಬಂದ್ರೆ ಹಿಂಗೆ.' ಅಂತಾ ಕಾರ್ ಮೇಲೆ ಮರ ಬಿದ್ದಿರುವ ಫೋಟೋ ಹಂಚಿಕೊಂಡಿದ್ದಾರೆ. ಇದು ಒಬ್ಬರು ಅಥವಾ ಇಬ್ಬರ ಗೋಳು ಅಲ್ಲ, ಬದಲಾಗಿ ನೂರಾರು ಜನರಿಗೂ ಇದೇ ರೀತಿ ಆಗಿದೆ. ಅದರಲ್ಲೂ ನಿನ್ನೆ ಒಂದೇ ದಿನ ಬೆಂಗಳೂರಲ್ಲಿ ಮಳೆ ಬೈಕ್ & ಕಾರುಗಳನ್ನ ರುಬ್ಬಿಬಿಟ್ಟಿದೆ! ಇದಕ್ಕೆಲ್ಲಾ ಬಿಬಿಎಂಪಿ ಅಧಿಕಾರಿ ವರ್ಗದ ನಿರ್ಲಕ್ಷ್ಯವೇ ಕಾರಣ ಅಂತಾ ಜನರು ಬೈಯುತ್ತಿದ್ದಾರೆ. ಹಾಗೇ ಈಗಲಾದರೂ ಸರಿ ಮಾಡಿ, ಸಮಸ್ಯೆ ಬಗೆಹರಿಸಿ ಅಂತಿದ್ದಾರೆ ಬೆಂಗಳೂರಿನ ನಿವಾಸಿಗಳು.

ಮಳೆ ಅಬ್ಬರಕ್ಕೆ ಅಂಡರ್‌ಪಾಸ್ ಬಂದ್!

ಬೆಂಗಳೂರಿನಲ್ಲಿ ಮಳೆ ಅಬ್ಬರಿಸಿದ ರೀತಿಗೆ ಅಂಡರ್‌ಪಾಸ್ ಸೇರಿದಂತೆ ಹಲವು ಪ್ರದೇಶಗಳಲ್ಲಿ ಮಳೆ ನೀರು ಅವಾಂತರ ಸೃಷ್ಟಿ ಮಾಡಿತ್ತು. ಅದರಲ್ಲೂ ಬೆಂಗಳೂರು ಹೃದಯ ಭಾಗದಲ್ಲಿ ಈ ಸಮಸ್ಯೆ ಹೆಚ್ಚಾಗಿತ್ತು. ಹೀಗೆ ಭಾರಿ ಮಳೆ ಬಿದ್ದ ಸುದ್ದಿ ಗೊತ್ತಾಗದೆ ನೇರವಾಗಿ ರಸ್ತೆಗಳಿಗೆ ಬೈಕ್ & ಕಾರ್‌ನಲ್ಲಿ ಎಂಟ್ರಿ ಕೊಟ್ಟ ಸವಾರರು ರೋಡ್‌ನಲ್ಲಿ ನಿಂತಿದ್ದ ಎದೆ ಎತ್ತರದ ನೀರು ನೋಡಿ ಬೆಚ್ಚಿಬಿದ್ದರು.

ಮರ, ಕಂಬ ಮುರಿದು ಬಿದ್ದವು!

ಇನ್ನೊಂದು ಕಡೆ ಮಳೆಯ ಅಬ್ಬರಕ್ಕೆ ಮರಗಳು ಕೂಡ ಮುರಿದು ಬಿದ್ದವು. ಹೀಗೆ ನೂರಾರು ಮರಗಳಿಗೆ ನಿನ್ನೆ ಬೆಂಗಳೂರಿನಲ್ಲಿ ಭಾರಿ ಹಾನಿ ಆಗಿತ್ತು. ಮರಗಳ ರೆಂಬೆ & ಕೊಂಬೆ ನೇರ ವಾಹನಗಳ ಮೇಲೆ ಬಿದ್ದ ಕಾರಣಕ್ಕೆ ವಾಹನಗಳಿಗೂ ಹಾನಿ ಆಗಿತ್ತು. ಹಾಗೇ ಕಾರ್‌ಗಳ ಮೇಲೆ ಕೂಡ ಮರದ ಪೀಸ್ ಬಿದ್ದ ಕಾರಣಕ್ಕೆ ವಾಹನಗಳ ಮಾಲೀಕರು ಚಿಂತೆಯಲ್ಲಿ ಮುಳುಗಿದ್ದಾರೆ. ಇದು ಸ್ಯಾಂಪಲ್ ಅಷ್ಟೇ, ಮುಂದಿನ ಕೆಲವು ದಿನಗಳ ಕಾಲ ಇದಕ್ಕೂ ಹೆಚ್ಚು ಮಳೆ ನಮ್ಮ ಬೆಂಗಳೂರಿನಲ್ಲಿ ಬೀಳುವ ಬಗ್ಗೆ ಮುನ್ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+