ಕೊನೆಗೂ ಬಳ್ಳಾರಿ ಡಿಸಿ ಆದಿತ್ಯ ಬಿಸ್ವಾಸ್ ಎತ್ತಂಗಡಿ
ಬೆಂಗಳೂರು, ಮೇ31: ಬಿಎಸ್ಸಾರ್ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಮತ್ತು ಬಿಜೆಪಿಯ ಹಾಲಿ ಸಂಸದ ಬಿ ಶ್ರೀರಾಮುಲು ಅವರನ್ನು ಇನ್ನಿಲ್ಲದಂತೆ ಗೋಳುಹೊಯ್ದುಕೊಂಡ ಬಳ್ಳಾರಿ ಜಿಲ್ಲಾಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ರಾಜ್ಯ ಸರಕಾರ ಕೊನೆಗೂ ವರ್ಗಾವಣೆ ಮಾಡಿದೆ.
ಹಿರಿಯ ಐಎಎಸ್ ಆಮ್ಲಾನ್ ಆದಿತ್ಯ ಬಿಸ್ವಾಸ್ ಸೇರಿದಂತೆ ಒಟ್ಟು 8 ಮಂದಿ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ. ಬಳ್ಳಾರಿ ಡಿಸಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ರಾಜ್ಯ ಸರ್ಕಾರವು ಗುಲ್ಬರ್ಗಾ ಪ್ರಾದೇಶಿಕ ಆಯುಕ್ತರನ್ನಾಗಿ ವರ್ಗ ಮಾಡಿದೆ. ಬಳ್ಳಾರಿಗೆ ಸಮೀರ್ ಶುಕ್ಲಾ ಅವರನ್ನು ನೂತನ ಜಿಲ್ಲಾಧಿಕಾರಿಯನ್ನಾಗಿ ನೇಮಿಸಿದೆ.
ವರ್ಗಾವಣೆಗೊಂಡ 8 ಐಎಎಸ್ ಅಧಿಕಾರಿಗಳ ಪಟ್ಟಿ ಹೀಗಿದೆ:

* ಆಮ್ಲಾನ್ ಆದಿತ್ಯ ಬಿಸ್ವಾಸ್ - ಆಯುಕ್ತರು, ಗುಲ್ಬರ್ಗಾ ಪ್ರಾದೇಶಿಕ
* ಸಮೀರ್ ಶುಕ್ಲಾ - ಜಿಲ್ಲಾಧಿಕಾರಿ, ಬಳ್ಳಾರಿ
* ತನುಶ್ರೀ ದೇವ್ ವರ್ಮಾ - ನಿರ್ದೇಶಕಿ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ
* ಡಾ. ಡಿಎಸ್ ವಿಶ್ವನಾಥ್ - ಆಯುಕ್ತರು, ಕಾರ್ಮಿಕ ಇಲಾಖೆ
* ಖುಷ್ಬು ಗೋಯಲ್ ಚೌಧರಿ - ವ್ಯವಸ್ಥಾಪಕ ನಿರ್ದೇಶಕರು, ಹೆಸ್ಕಾಂ, ಹಾಸನ
* ಪಿ ರಾಜೇಂದ್ರ ಚೋಳನ್ - ಜಿಲ್ಲಾಧಿಕಾರಿ, ಧಾರವಾಡ
* ರೋಹಿಣಿ ಸಿಂಧೂರಿ ದಾಸರಿ - ಸಿಇಒ, ಜಿಲ್ಲಾ ಪಂಚಾಯತ್, ಮಂಡ್ಯ
* ಎಸ್ಎಸ್ ನಕುಲ್ - ಸಿಇಒ, ಜಿಲ್ಲಾ ಪಂಚಾಯತ್, ಬಾಗಲಕೋಟೆ












Click it and Unblock the Notifications