ಹನಿಟ್ರ್ಯಾಪ್‌ ವಿವಾದದ ಬೆನ್ನಲ್ಲೇ ರಾಜ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ 'ಪವರ್‌ ಸಂಘರ್ಷ'

ಬೆಂಗಳೂರು, ಮಾರ್ಚ್‌ 24: ರಾಜ್ಯ ರಾಜಕಾರಣದಲ್ಲಿ ಹನಿಟ್ರ್ಯಾಪ್ ಪ್ರಕರಣ ಕೋಲಾಹಲವನ್ನೇ ಸೃಷ್ಟಿಸಿದೆ. ಹನಿಟ್ರ್ಯಾಪ್ ವಿಚಾರವಾಗಿ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರು ನಾನಾ ಹೇಳಿಕೆ ನೀಡ್ತಿದ್ದಾರೆ. ಈ ಹಿಂದೆ ಬೆಳಗಾವಿ ಸಾಹುಕರ್‌ ರಮೇಶ್‌ ಜಾರಕಿಹೊಳಿ ಅವರ ವಿರುದ್ಧ ನಡೆದ ಹನಿಟ್ರ್ಯಾಪ್‌ ನಿಂದ ರಾಜ್ಯ ರಾಜಕೀಯದಲ್ಲಿ ದೊಡ್ಡ ಕೋಲಾಹಲವೇ ಸೃಷ್ಟಿಯಾಗಿತ್ತು. ಇದೀಗ ಪ್ರಭಾವಿ ಸಚಿವ ಕೆ ಎನ್‌ ರಾಜಣ್ಣ ಅವರ ಹನಿಟ್ರ್ಯಾಪ್‌ ಸದ್ಯ ರಾಜಕೀಯ ನಾಯಕರ ಕೆಸರೆರಚಾಟ ಕಾರಣವಾಗಿದೆ.

ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ರಮೇಶ್‌ ಜಾರಕಿಹೊಳಿ ಅವರಿಂದ ಆರಂಭವಾದ ಈ ಹನಿಟ್ರ್ಯಾಪ್‌ ಪ್ರಹಸನ ಇದೀಗ ರಾಜ್ಯ ಸಚಿವ ಕೆಎನ್‌ ರಾಜಣ್ಣವರೆಗೂ ಬಂದು ನಿಂತಿದೆ. ಈ ಅವಧಿಯಲ್ಲಿ ಹತ್ತಾರು ರಾಜಕಾರಣಿಗಳ ವಿರುದ್ಧ ಈ ಹನಿಟ್ರ್ಯಾಪ್‌ ಆರೋಪಗಳು ಕೇಳಿಬಂದಿದ್ದು, ಇದುವರೆಗೂ ಯಾವ ಪ್ರಕರಣದಲ್ಲೂ ಅಂತಿಮ ಸತ್ಯ ಹೊರಬಿದ್ದಿಲ್ಲ. ಆದರೆ, ಸಹಕಾರ ಸಚಿವ ಕೆ.ಎನ್. ರಾಜಣ್ಣ ಮಾರ್ಚ್ 20 ರಂದು ರಾಜ್ಯ ವಿಧಾನಸಭೆಯಲ್ಲಿ ಎದ್ದು ನಿಂತು, ಪಕ್ಷಾತೀತವಾಗಿ 47 ಜನರನ್ನು ಗುರಿಯಾಗಿಸಿಕೊಂಡಿದ್ದ ಒಂದು ಗ್ಯಾಂಗ್‌ನಿಂದ "ಹನಿ-ಟ್ರ್ಯಾಪಿಂಗ್" ಪ್ರಯತ್ನಕ್ಕೆ ನಾನು ಗುರಿಯಾಗಿದ್ದೇನೆ ಎಂದು ಸತ್ಯ ಬಿಚ್ಚಿಟ್ಟಿದ್ದಾರೆ.

Behind Karnataka honey-trap row How a Congress power struggle intensified

ಇನ್ನೂ ಹನಿಟ್ರ್ಯಾಪ್‌ ವಿಚಾರ ಸದನದಲ್ಲಿ ಕೆ ಎನ್‌ ರಾಜಣ್ಣ ಬಹಿರಂಗ ಪಡಿಸಿದ ಬೆನ್ನಲ್ಲೆ ಸದನದಲ್ಲಿ ಈ ವಿಚಾರವನ್ನ ಬಿಜೆಪಿ ಸದಸ್ಯರು ಸರ್ಕಾರಕ್ಕೆ ಪ್ರಶ್ನೆಗಳನ್ನ ಮುಂದಿಟ್ಟರು. ಸಚಿವರ ಹನಿಟ್ರ್ಯಾಪ್ ಪ್ರಯತ್ನ ಆರೋಪ. ಬಿಜೆಪಿ ಶಾಸಕರ ಧರಣಿ ಹಾಗೂ ಸ್ಪೀಕರ್ ಪೀಠಕ್ಕೆ ಅಗೌರವ ತೋರಿಸಿದ ಹಿನ್ನೆಲೆ ಸ್ಪೀಕರ್‌ ಯು ಟಿ ಖಾದರ್‌ ಅವರು 18 ಶಾಸಕರ ಅಮಾನತುಗೊಳಿಸಿದ್ದಾರೆ. ಇನ್ನೂ ಹನಿಟ್ರ್ಯಾಪ್‌ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಜಿ. ಪರಮೇಶ್ವರ ಅವರು ಉನ್ನತ ಮಟ್ಟದ ತನಿಖೆ ಕುರಿತು ಸ್ಪಷ್ಟತೆ ಕಂಡು ಬಂದಿಲ್ಲ.

ಮೇಲ್ನೋಟಕ್ಕೆ, ಈ ಬೆಳವಣಿಗೆಗಳು ವಿರೋಧ ಪಕ್ಷ ಬಿಜೆಪಿ ಮತ್ತು ಆಡಳಿತರೂಡ ಕಾಂಗ್ರೆಸ್‌ ಪಕ್ಷದ ನಡುವಿನ ಘರ್ಷಣೆಯಂತೆ ಕಂಡುಬಂದರೂ ಸಹ ಇದು. ಕಾಂಗ್ರೆಸ್‌ನೊಳಗಿನ ಅಧಿಕಾರ ಹಂಚಿಕೆ ಕುರಿತು ನಡೆಯುತ್ತಿರುವ ಬೆಳವಣಿಗೆಗಳು ಎನ್ನಲಾಗಿದೆ. 73 ವರ್ಷದ ಕೆ ಎನ್ ರಾಜಣ್ಣ, ಜನತಾದಳದಲ್ಲಿ ಸಿಎಂ ಜೊತೆಗಿನ ದೀರ್ಘ ಸಂಬಂಧ ಮತ್ತು ಹಿಂದುಳಿದ ಸಮುದಾಯಗಳ ಬಗ್ಗೆ ಮೆಚ್ಚುಗೆಯನ್ನು ಹೊಂದಿರುವುದರಿಂದ ಸಿದ್ದರಾಮಯ್ಯ ಅವರ ಕಟ್ಟಾ ಬೆಂಬಲಿಗರೆಂದು ಪರಿಗಣಿಸಲಾಗಿದ್ದು, ಕಾಂಗ್ರೆಸ್ ಶಾಸಕರ ಗುಂಪಿನಲ್ಲಿ ಹೆಚ್ಚು ಸಕ್ರಿಯರಾಗಿದ್ದಾರೆ.

ಕಳೆದ ಒಂದು ತಿಂಗಳಿನಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಅಧಿಕಾರ ಹಂಚಿಕೆ ಕುರಿತು ಚರ್ಚೆ ನಡೆಯುತ್ತಲೇ ಇದೆ. ಪರಿಶಿಷ್ಟ ಪಂಗಡದ ನಾಯಕ ಸಮುದಾಯಕ್ಕೆ ಸೇರಿದ ಸಹಕಾರ ಸಚಿವ ಕೆ ಎನ್ ರಾಜಣ್ಣ ಅವರು ಸಿದ್ದರಾಮಯ್ಯ ಅವರ ಬೆಂಬಲಗರು ಅಲ್ಲದೇ. ಕಾಂಗ್ರೆಸ್‌ ಅಧ್ಯಕ್ಷರ ಬದಲಾವಣೆಯಾಗಬೇಕು ಎಂದು ಹೈಕಮಾಂಡ್‌ ನಾಯಕರನ್ನ ದೆಹಲಿಯಲ್ಲಿ ಭೇಟಿಯಾಗಿ ಬಹಿರಂಗವಾಗಿಯೇ ಡಿ ಕೆ ಶಿವಕುಮಾರ್‌ ವಿರುದ್ಧ ಕಿಡಿಕಾರಿದ್ದರು. ಪಕ್ಷದ "ಒಬ್ಬ ವ್ಯಕ್ತಿ, ಒಂದು ಹುದ್ದೆ" ನೀತಿಯ ಹೊರತಾಗಿಯೂ ಶಿವಕುಮಾರ್ ಬಹು ಹುದ್ದೆಗಳನ್ನು ಹೊಂದಿರುವ ಬಗ್ಗೆ ಅವರು ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವದೊಂದಿಗೆ ಚರ್ಚೆ ನಡೆಸಿದ್ದರು.

ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿದ್ದ ಕೆ ಎನ್‌ ರಾಜಣ್ಣ ಅವರು ಮೇಲೆ ನಡೆದ ಹನಿಟ್ರ್ಯಾಪ್‌ ಕುರಿತು ಯಾವುದೇ ಪುರಾವೆಗಳಿಲ್ಲ. ರಾಜಕೀಯವಾಗಿ ನಮ್ಮನ್ನ ಮುಗಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರು ತಮ್ಮ ಆಪ್ತವಲಯದಲ್ಲಿ ಹೇಳಿಕೊಂಡಿದ್ದಾರೆ. ಸಿಎಂ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ವೇಳೆ ಬಹಿರಂಗವಾಗಿ ಕೆ ಎನ್‌ ರಾಜಣ್ಣ ಅವರು ಡಿ ಕೆ ಶಿವಕುಮಾರ್‌ ಟಾಂಗ್‌ ಕೊಟ್ಟ ಬೆನ್ನಲ್ಲೇ ಹನಿಟ್ರ್ಯಾಪ್‌ ಸದ್ದು ಮಾಡಿರುವುದು ಅನುಮಾನಗಳಿಕೆ ಕಾರಣವಾಗಿದೆ.

ರಾಜಣ್ಣ ಅವರ ಹನಿಟ್ರ್ಯಾಪ್‌ ಆರೋಪ ರಾಜ್ಯ ಕಾಂಗ್ರೆಸ್‌ನಲ್ಲಿನ ಬಣ ವಿವಾದದಲ್ಲಿ ಬಿಕ್ಕಟ್ಟಿನ ಪರಿಣಾಮವನ್ನು ಬೀರಿವೆ. ಈ ಪ್ರಕರಣದಲ್ಲಿ ಡಿ ಕೆ ಶಿವಕುಮಾರ್ ಅವರು ಆರೋಪಗಳೊಂದಿಗೆ ನೇರವಾಗಿ ಸಂಬಂಧ ಹೊಂದಿದ್ದರೆ ಅವರಿಗೆ ಹಿನ್ನಡೆಯಾಗುತ್ತದೆ. ಏಕೆಂದರೆ ಡಿ ಕೆ ಶಿವಕುಮಾರ್‌ ಅವರು ಮುಂದಿನ ಮುಖ್ಯಮಂತ್ರಿಯಾಗಲು ತೀವ್ರ ಪ್ರಯತ್ನವನ್ನ ನಡೆಸುತ್ತಿದ್ದಾರೆ. ಕಾಂಗ್ರೆಸ್ ಶಾಸಕರ ವಿಶ್ವಾಸ, ಹಿಂದುಳಿದ ಸಮುದಾಯದ ಮತ್ತು ಅಲ್ಪಸಂಖ್ಯಾತರಲ್ಲಿ ವ್ಯಾಪಕ ಬೆಂಬಲವನ್ನು ಹೊಂದಿರುವ ಸಿದ್ದರಾಮಯ್ಯ ಅವರನ್ನು ಪದಚ್ಯುತಗೊಳಿಸಲು ಗಣನೀಯ ಸಂಖ್ಯೆಯ ಶಾಸಕರ ಬೆಂಬಲವನ್ನು ಸಂಗ್ರಹಿಸಲು ಡಿ ಕೆ ಶಿವಕುಮಾರ್‌ ಅವರಿಗೆ ಅಡ್ಡಿಯಾಗಬಹುದು, ಆದರೆ ಶಿವಕುಮಾರ್ ತಮ್ಮದೇ ಆದ ಪ್ರಬಲ ಜಾತಿಯಾದ ಒಕ್ಕಲಿಗ ಸಮುದಾಯದಲ್ಲಿ ನಾಯಕರ ಗುಂಪನ್ನ ಇನ್ನು ಸ್ಥಾಪಿಸಿಕೊಂಡಿಲ್ಲ.

ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಪೂರೈಸುತ್ತಿರುವ ಹೊತ್ತಲಿ ಕೈ ಪಾಳಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಧ್ವನಿ ಎತ್ತಿದ್ದ ಸಹಕಾರ ಸಚಿವ ಕೆ ಎನ್‌ ರಾಜಣ್ಣ ಅವರ ವಿರುದ್ಧ ಹನಿಟ್ರ್ಯಾಪ್‌ ಸದ್ದು ಮಾಡಿದ ವಿವಾದದ ಬೆನ್ನಲ್ಲೇ ಕೈ ಪಾಳಯದಲ್ಲಿ ಅಧಿಕಾರ ಹಂಚಿಕೆ ಸಂಘರ್ಷ ಮತ್ತೆ ಮುನ್ನಲ್ಲೇಗೆ ಬಂದಿದೆ. ಈಗಾಗಲೇ ಮಲ್ಲಿಕಾರ್ಜುನ್‌ ಖರ್ಗೆ ಅವರು ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ಈ ಬಗ್ಗೆ ಚರ್ಚೆ ನಡೆಸಿದ್ದು, ಹೈಕಮಾಂಡ್‌ ಯಾವ ನಿರ್ಧಾರವನ್ನ ತೆಗೆದುಕೊಳ್ಳುತ್ತೆ ಎಂಬುದನ್ನ ಕಾದುನೋಡ್ಬೇಕಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+