ದಕ್ಷಿಣಕ್ಕಿಂತಲೂ ಉತ್ತರ ಕರ್ನಾಟಕದಲ್ಲಿ ತಜ್ಞ ವೈದ್ಯರ ಕೊರತೆ ಹೆಚ್ಚಿದೆ: ಮಾಜಿ ಸಿಎಂ
ಹಾವೇರಿ, ಸೆಪ್ಟಂಬರ್ 23: ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇದೆ. ಹಾಸಿಗೆ ಮತ್ತು ರೋಗಿಗಳ ಅನುಪಾತದಲ್ಲಿಯೂ ಸಾಕಷ್ಟು ವ್ಯತ್ಯಾಸ ಇದೆ. ಈ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಗಮನ ಹರಿಸಬೇಕಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮಾಯಿ ಹೇಳಿದರು.
ಹಾವೇರಿ ಜಿಲ್ಲೆಯ ಗುತ್ತಲ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿರವರ 75 ನೇಯ ಹುಟ್ಟುಹಬ್ಬದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಸ್ವಸ್ಥ ನಾರಿ ಸಶಕ್ತ ಪರಿವಾರ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ತಿಳಿಸಿದರು.

250 ರೋಗಿಗೆ ಒಬ್ಬ ವೈದ್ಯ..!
ದಕ್ಷಿಣ ಕರ್ನಾಟಕಕ್ಕೆ ಹೋಲಿಸಿದರೆ ಉತ್ತರ ಕರ್ನಾಟಕದಲ್ಲಿ ವೈದ್ಯರ ಸಂಖ್ಯೆ ಕಡಿಮೆ ಇದೆ. ಹಾಸಿಗೆ ಮತ್ತು ರೋಗಿಗಳ ಅನುಪಾತದಲ್ಲಿಯೂ ಸಾಕಷ್ಟು ವ್ಯತ್ಯಾಸ ಇದೆ. ಎಷ್ಟು ಜನರಿಗೆ ಒಬ್ಬ ವೈದ್ಯರಿದ್ದಾರೆ ಅದನ್ನು ಹೋಲಿಸಿದಾಗ ಉತ್ತರ ಕರ್ನಾಟಕದಲ್ಲಿ ಸುಮಾರು ಒಂದು ಸಾವಿರ ರೋಗಿಗಳಿಗೆ ಒಬ್ಬ ವೈದ್ಯ ಇದ್ದಾರೆ. ದಕ್ಷಿಣದಲ್ಲಿ 250 ರೋಗಿಗೆ ಒಬ್ಬ ವೈದ್ಯರಿದ್ದಾರೆ ಈ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಗಮನಹರಿಸಬೇಕಿದೆ.
ನಾನು ಸಿಎಂ ಆಗಿದ್ದಾಗ 750 ಪಿಎಚ್ ಸಿ ಕೇಂದ್ರಗಳನ್ನು ಮೆಲ್ದರ್ಜೆಗೆ ಹಣ ಕೊಟ್ಡಿದ್ದೆ 75 ಪಿಎಚ್ ಸಿ ಕೇಂದ್ರಗಳನ್ನು ಮೇಲ್ದರ್ಗೆ ಏರಿಸಿದ್ದೆ ಅದು ನಿರಂತರ ಮುಂದುವರೆಯಬೇಕು. ಆರೋಗ್ಯ ಬಹಳ ಮುಖ್ಯ. ಆರೋಗ್ಯ ಗಟ್ಡಿ ಇದ್ದರೆ ಮಕ್ಕಳು ನಮ್ಮ ಜೊತೆಗೆ ಚೆನ್ನಾಗಿ ಇರುತ್ತಾರೆ ಆರೊಗ್ಯ ಹಾಳಾಗಲು ಹಲವಾರು ಚಟಗಳು ಕಾರಣವಾಗುತ್ತವೆ. ಸಿಗರೇಟು, ಸೇದುವುದರಿಂದ ಕ್ಯಾನ್ಸರ್ ಬರುತ್ತದೆ. ಚಟಗಳಿಂದ ದೂರ ಇದ್ದು , ದೇಹಕ್ಕೆ ಶಕ್ತಿ ತುಂಬುವಂತಹ ಆಹಾರ ಸೇವೆನೆ ಮಾಡಬೇಕು ಎಂದು ತಿಳಿಸಿದರು.
ಸಮುದಾಯದ ಆರೋಗ್ಯ ಬಹಳ ಮುಖ್ಯ. ಆರೋಗ್ಯದಲ್ಲಿ ಹಲವಾರು ಪ್ರಕಾರ ಇದೆ. ಒಂದು ವ್ಯಕ್ತಿಯ ಆರೊಗ್ಯ, ಸಮುದಾಯದ ಆರೋಗ್ಯ ರಾಜ್ಯ ಮತ್ತು ದೇಶದ ಆರೋಗ್ಯ. ವ್ಯಕ್ತಿಯ ಆರೋಗ್ಯ ಚೆನ್ನಾಗಿದ್ದರೆ ಕುಟುಂಬದ ಆರೋಗ್ಯ, ಸಮುದಾಯ ಆರೋಗ್ಯ, ರಾಜ್ಯ, ದೇಶದ ಆರೋಗ್ಯ ಚನ್ನಾಗಿರುತ್ತದೆ. ವ್ಯಕ್ತಿಯಿಂದ ದೇಶದ ಆರೋಗ್ಯ ಕಾಪಾಡುವುದು ಎಲ್ಲರ ಕರ್ತವ್ಯ ಎಂದರು.

ಆರೋಗ್ಯ ತಪಾಸಣೆ ಬಹಳ ಮುಖ್ಯವಾಗಿದೆ. ಸಮುದಾಯ ಆರೋಗ್ಯ ಕಾಪಾಡಿಕೊಂಡು ಹೋಗುವುದು ಅತ್ಯಂತ ಪ್ರಮುಖವಾಗಿದೆ. ಅದಕ್ಕೆ ನಮ್ಮ ದೇಹದ ಆರೋಗ್ಯ ಚೆನ್ನಾಗಿರಬೇಕು. ನಾವು ಸೇವಿಸುವ ಆಹಾರ ಗಾಳಿ ಮತ್ತು ಪರಿಸರ ಹೇಗಿರುತ್ತದೆ ಎನ್ನುವುದರ ಮೇಲೆ ಆರೋಗ್ಯ ನಿರ್ಧಾರವಾಗುತ್ತದೆ. ಸ್ವಚ್ಚತೆಯನ್ನು ಮನೆಯಲ್ಲಿ ಸುತ್ತಮುತ್ತ ಕಾಪಾಡಿದರೆ ರೋಗ ಬರುವುದಿಲ್ಲ. ಹಣ್ಣು ಹಂಪಲ ಸೇವನೆ ಮಾಡುವುದರಿಂದ ಅರೋಗ್ಯ ಚನ್ನಾಗಿರುತ್ತದೆ.
ಆರೋಗ್ಯ ಇಲಾಖೆ ಸಮುದಾಯ ಆರೋಗ್ಯ ತಪಾಸಣೆ ಮಾಡುವ ಮೂಲಕ ಆರೊಗ್ಯ ಕಾಪಾಡುತ್ತದೆ. ಆರೋಗ್ಯ ಇಲಾಖೆಗೆ ಮಹತ್ವ ಸಿಗುತ್ತಿಲ್ಲ. ಗುತ್ತಲದಲ್ಲಿ ಎಲ್ಲ ವೈರದ್ಯರು ಇಲ್ಲ, ಸಕ್ಕರೆ, ಕ್ಯಾನ್ಸರ್, ತಪಾಸಣೆ ಇಟ್ಟುಕೊಂಡಿದ್ದಾರೆ, ಇಲ್ಲಿ ಕನಿಷ್ಠ ತಜ್ಞ ವೈದ್ಯರ ಅಗತ್ಯ ಇದೆ. ಜಿಲ್ಲಾ ಆಸ್ಪತ್ರೆಗೂ ತಜ್ಞರ ವೈದ್ಯರ ಕೊರತೆ ಇದೆ. ಮೆಡಿಕಲ್ ಕಾಲೇಜು ಆರಂಭವಾಗಿ ನಾಲ್ಕು ವರ್ಷ ಆದರೂ ತಜ್ಞ ವೈದ್ಯರು ಹಾಗೂ ಸ್ನಾತಕೋತ್ತರ ಕಲಿಯುವ ವಿದ್ಯಾರ್ಥಿಗಳಿಗೆ ಪಾಠ ಮಾಡುವವರು ಇಲ್ಲ. ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ ಎಂದರು.
ಪ್ರಧಾನಮಂತ್ರಿಗಳ ಜನ್ಮದಿನ ಹಿನ್ನೆಲೆ ಹದಿನೈದು ದಿನ ಆರೋಗ್ಯ ತಪಾಸಣೆ ಮಾಡಲು ಸ್ವಸ್ತ ನಾರಿ ಸಶಕ್ತ ಪರಿವಾರ ಕಾರ್ಯಕ್ರಮ ಮಾಡಿದ್ದಾರೆ. ಇದರ ಲಾಭ ಗುತ್ತಲ ಸುತ್ತಮುತ್ತ ಗ್ರಾಮದ ಜನರು ಪಡೆಯಬೇಕು. ಆಯುಷ್ಮಾನ್ ಭಾರತ ಯೋಜನೆಯ ಮೂಲಕ ಕೇಂದ್ರ ಸರ್ಕಾರ 05 ಲಕ್ಷ ರೂ. ಕೊಡುತ್ತದೆ. ಕರ್ನಾಟಕದಲ್ಲಿ ಎರಡು ಕೊಟಿಗಿಂತ ಹೆಚ್ಚು ಜನರು ಇದರ ಲಾಭ ಪಡೆಯುತ್ತಿದ್ದಾರೆ. ಇದರೊಂದಿಗೆ ಜನೌಷಧಿ ಕೇಂದ್ರ ಮಾಡಿದ್ದಾರೆ ಅಗ್ಗದ ದರದಲ್ಲಿ ಜನೌಷಧ ದೊರೆಯುತ್ತದೆ.












Click it and Unblock the Notifications