ಮುಖ್ಯಮಂತ್ರಿ, ಸಚಿವರ ಆಪ್ತ ಶಾಖೆಗಳ ಸಿಬ್ಬಂದಿ ಕಾರ್ಯ ಮುಕ್ತ

ಬೆಂಗಳೂರು, ಮೇ 18; ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಫಲಿತಾಂಶ ಘೋಷಣೆಯಾಗಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಕಾಂಗ್ರೆಸ್ ಪಕ್ಷದ ಆಡಳಿತ ಬರಲಿದ್ದು, ನೂತನ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮೇ 20ರ ಶನಿವಾರ ಮಧ್ಯಾಹ್ನ 12.30ಕ್ಕೆ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ.

ಈ ಹಿನ್ನಲೆಯಲ್ಲಿ ಮಾನ್ಯ ಸಚಿವರುಗಳ ಆಪ್ತ ಶಾಖೆ/ ಮಾನ್ಯ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯವರ ಅಪ್ಪ ಶಾಖೆ/ ಮಾನ್ಯ ಮುಖ್ಯಮಂತ್ರಿಯವರ ಸಲಹಗಾರರ ಆಪ್ತ ಶಾಖೆ/ ಮಾನ್ಯ ಸಂಪುಟ/ ಸಚಿವರ ಸ್ಥಾನಮಾನ ಹೊಂದಿರುವ ಪ್ರಾಧಿಕಾರಿಗಳ ಆಪ್ತ ಶಾಖೆಗಳ ಸಿಬ್ಬಂದಿಯನ್ನು ಕಾರ್ಯಮುಕ್ತಗೊಳಿಸುವ ಕುರಿತು ಆದೇಶ ಹೊರಡಿಸಲಾಗಿದೆ.

karnataka government

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಸ್. ಆರ್. ಶಿವಶಂಕ‌ರ್ ಸರ್ಕಾರದ ಅಧೀನ ಕಾರ್ಯದರ್ಶಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಈ ಕುರಿತು ಆದೇಶವನ್ನು ಹೊರಡಿಸಿದ್ದಾರೆ. ಅಧಿಕಾರಿ/ ಸಿಬ್ಬಂದಿಗಳಿಗೆ ಸೂಚನೆಗಳನ್ನು ನೀಡಿದ್ದಾರೆ.

ಆದೇಶದಲ್ಲಿ ಏನಿದೆ?; ಭಾರತ ಸಂವಿಧಾನದ ಅನುಚ್ಛೇಧ 164(1) ರನ್ವಯ ಪ್ರದತ್ತವಾದ ಅಧಿಕಾರದಲ್ಲಿ, ಘನತವತ್ತ ರಾಜ್ಯಪಾಲರು, ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಯವರಾದ ಬಸವರಾಜ ಬೊಮ್ಮಯಿಯವರು ಮುಖ್ಯಮಂತ್ರಿ ಸ್ನಾನಕ್ಕೆ ನೀಡಿದ್ದ ರಾಜಿನಾಮೆಯನ್ನು ಅಂಗೀಕರಿಸಿ, ಅವರ ನೇತೃತ್ವದ ಸಚಿವ ಸಂಪುಟವನ್ನು ದಿನಾಂಕ 13/05/2023ರ ಅಧಿಸೂಚನೆಯಲ್ಲಿ ವಿಸರ್ಜನಗೊಳಿಸಿರುತ್ತಾರೆ ಎಂದು ಆದೇಶದಲ್ಲಿ ವಿವರಿಸಲಾಗಿದೆ.

karnataka government order

ಮಾನ್ಯ ಮುಖ್ಯಮಂತ್ರಿ ಅಥವಾ ಸಂಪುಟ ದರ್ಜೆ ಸಚಿವರ/ ರಾಜ್ಯ ಸಚಿವರ ರಾಜೀನಾಮ ಅಂಗೀಕಾರವಾದ ಪ್ರಯುಕ್ತ ಅಥವಾ ಬೇರೆ ಯಾವುದೇ ಕಾರಣಕ್ಕಾಗಿ ಮಂತ್ರಿಮಂಡಲ ರದ್ದಾದಲ್ಲಿ ಅಂತಹ ಕಚೇರಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ನೌಕರರುಗಳನ್ನು ಬಿಡುಗಡೆಗೊಳಿಸುವ ಕುರಿತು ಸರ್ಕಾರದ ಆದೇಶದಲ್ಲಿ ಮಾರ್ಗಸೂಚಿಗಳನ್ನು ನೀಡಲಾಗಿದೆ.

ಮಾನ್ಯ ಸಚಿವರುಗಳ ಆಪ್ತ ಶಾಖೆ/ ಮಾನ್ಯ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯವರ ಆಪ್ತ ಶಾಖೆ/ ಮಾನ್ಯ ಮುಖ್ಯಮಂತ್ರಿಯವರ ಸಲಹಗಾರರ ಆಪ್ತ ಶಾಖೆ/ ಮಾನ್ಯ ಸಂಪುಟ/ ಸಚಿವರ ಸ್ಥಾನಮಾನ ಹೊಂದಿರುವ ಪ್ರಾಧಿಕಾರಿಗಳ ಆಪ್ತ ಶಾಖೆಗಳಲ್ಲಿ ಸ್ಥಳ ನಿಯುಕ್ತಿ/ ನಿಯೋಜನೆ/ ಒಪ್ಪಂದ ಹಾಗೂ ಗುತ್ತಿಗೆ ಆಧಾರದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ನೌಕರರನ್ನು ಕಾರ್ಯಮುಕ್ತಗೊಳಿಸುವ ಬಗ್ಗೆ ನಿಯಮಾನುಸಾರ ಪರಿಶೀಲಿಸಿ ಈ ಆದೇಶ ಹೊರಡಿಸಲಾಗಿದೆ.

ಮಾನ್ಯ ಸಚಿವರುಗಳ ಅಪ್ಪ ಶಾಖೆ/ ಮಾನ್ಯ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯವರ ಆಪ್ತ ಶಾಖೆ/ ಮಾನ್ಯ ಮುಖ್ಯಮಂತ್ರಿಯವರ ಸಲಹೆಗಾರರ ಆಪ್ತ ಶಾಖೆ/ ಮಾನ್ಯ ಸಂಪುಟ/ ಸಚಿವರ ಸ್ಥಾನಮಾನ ಹೊಂದಿರುವ ಪ್ರಾಧಿಕಾರಿಗಳ ಆಪ್ತ ಶಾಖೆಗಳಲ್ಲಿ ನಿಯೋಜನೆ/ ಒಪ್ಪಂದ/ ಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ ನೌಕರರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕಾರ್ಯಮುಕ್ತಗೊಳಿಸಿ ಆದೇಶಿಸಲಾಗಿದೆ.

ಸೂಚನೆಗಳು

* ಕಚೇರಿಗಳಲ್ಲಿ ಪ್ರಸ್ತುತ ಬಾಕಿಯಿರುವ ಎಲ್ಲಾ ಭೌತಿಕ ಕಡತಗಳು/ ಕೃತಿಗಳು ಮತ್ತು ಇ-ಆಫೀಸ್ ಕಡತಗಳು/ ಕೃತಿಗಳನ್ನು ಸಂಬಂಧಪಟ್ಟ ಇಲಾಖೆಯ ಕಾರ್ಯದರ್ಶಿಯವರಿಗೆ ಹಿಂದಿರುಗಿಸುವುದು.

* ಕಚೇರಿ ಉಪಯೋಗಕ್ಕಾಗಿ ಒದಗಿಸಿರುವ ಲೇಖನ ಸಾಮಾಗ್ರಿಗಳು, ಗಣಕಯಂತ್ರಗಳು ಪೀಠೋಪಕರಣಗಳು ಹಾಗೂ ಇತ್ಯಾದಿ ಸಾಮಾಗ್ರಿಗಳನ್ನು ಕೂಡಲೇ ಸಂಬಂಧಪಟ್ಟವರಿಗೆ ಹಿಂದಿರುಗಿಸುವುದು.

* ಗುರುತಿನ ಚೀಟಿ ಹಾಗೂ ವಾಹನ ಪಾಸ್ ಇತ್ಯಾದಿ ಪಾಸ್‌ಗಳನ್ನು ಸಂಬಂಧಪಟ್ಟವರಿಗೆ ಹಿಂದಿರುಗಿಸುವುದು.

* ಯಾವುದೇ ಕಡತ/ ಸ್ವೀಕೃತಿ/ದಾಖಲಾತಿಗಳು ಹಾಗೂ ಇನ್ನಿತರ ಸಾಮಾಗ್ರಿಗಳು/ ಪೀಠೋಪಕರಣಗಳು/ ಗಣಕಯಂತ್ರಗಳು ಕಳೆದುಹೋದಲ್ಲಿ, ಸಂಬಂಧಪಟ್ಟ ಸಚಿವರ ಆಪ್ತ ಕಾರ್ಯದರ್ಶಿಯವರನ್ನು ಹೊಣೆಗಾರರನ್ನಾಗಿ ಮಾಡಲಾಗುತ್ತದೆ.

* ಸ್ಥಳನಿಯುಕ್ತಿ/ ನಿಯೋಜನೆ / ಒಪ್ಪಂದದ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿ/ ನೌಕರರು ದಿನಾಂಕ 16/11/1988ರ ಸರ್ಕಾರದ ಆದೇಶದಲ್ಲಿನ ಅವಕಾಶಗಳನ್ವಯ ಬಿಡುಗಡ ಹೊಂದುವುದು.

ಅಧಿಕಾರಿ/ ನೌಕರರುಗಳಿಂದ ಸರ್ಕಾರಕ್ಕೆ ಯಾವುದಾದರೂ ಬಾಕಿಯಿದ್ದಲ್ಲಿ ವಸೂಲಿ ಮಾಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (ಲೆಕ್ಕಪತ್ರ) ವಿಭಾಗವು ಕ್ರಮವಹಿಸುವುದು ಎಂದು ಸೂಚನೆ ನೀಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+